HEALTH TIPS

ವಿಹಿಂಪ ಕುಂಬ್ಡಾಜೆ ಖಂಡ ಸಮಿತಿ ರಚನೆ

                   ಬದಿಯಡ್ಕ: ವಿಶ್ವಹಿಂದೂ ಪರಿಷತ್ ಕುಂಬ್ಡಾಜೆ ಖಂಡ ಸಮಿತಿ ರೂಪೀಕರಣ ಸಭೆ ಭಾನುವಾರ ಮಾರ್ಪನಡ್ಕ ಜಯನಗರ ಶ್ರೀ ಗೋಪಾಲಕೃಷ್ಣ ಭಜನ ಮಂದಿರದಲ್ಲಿ ನಡೆಯಿತು.

                   ವಿಶ್ವಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ ಭಟ್ ಉಳುವಾನ , ಜಿಲ್ಲಾ ಉಪಾಧ್ಯಕ್ಷೆ ಮೀರಾ ಆಳ್ವ, ವಿಶ್ವಹಿಂದೂ ಪರಿಷತ್ ನ ಕಾರ್ಯವೈಖರಿಗಳನ್ನು ವಿವರಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ವಿದ್ಯಾರ್ಥಿ ಪ್ರಮುಖ್ ಲೋಕೇಶ್ ಜೊಡು ಕಲ್ಲು ಅವರು ಬೌದ್ದಿಕ್ ನೀಡಿದರು.

                ವಿಶ್ವಹಿಂದೂ ಪರಿಷತ್ ಬದಿಯಡ್ಕ ಪ್ರಖಂಡ ಅಧ್ಯಕ್ಷ  ಹರಿಪ್ರಸಾದ್ ರೈ ಪುತ್ರಕಳ ಅಧ್ಯಕ್ಷತೆ ವಹಿಸಿದ್ದರು. ವಸಂತಿ ಟೀಚರ್ ಅಗಲ್ಪಾಡಿ ಉಪಸ್ಥಿತರಿದ್ದರು. ವಿಶ್ವಹಿಂದೂ ಪರಿಷತ್ ಬದಿಯಡ್ಕ ಪ್ರಖಂಡ ಕಾರ್ಯದರ್ಶಿ  ರಮೇಶ್ ಕೃಷ್ಣ ಪದ್ಮಾರ್ ಸ್ವಾಗತಿಸಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಯೋಜಕ  ರಾಜೇಶ್ ಶೆಟ್ಟಿ ಬಲಕ್ಕಳ ವಂದಿಸಿದರು.

        ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಜಯರಾಜ್ ಕುಣಿಕುಳ್ಳಾಯ ಪಾರೆಗದ್ದೆ (ಅಧ್ಯಕ್ಷ), ಸೂರ್ಯನಾರಾಯಣ ಭಟ್ ಮಾಳಿಗೆಮನೆ, ಶಂಕರನಾರಾಯಣ  ಭಟ್ ಶಿರ0ತಡ್ಕ, ಸುಬ್ರಹ್ಮಣ್ಯ ಮಾಸ್ತರ್ ಮೈಲ್ತೊಟ್ಟಿ, ವೆಂಕಟ್ರಮಣ ಭಟ್ ಉಪ್ಪ0ಗಳ(ಉಪಾಧ್ಯಕ್ಷರು) ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಮಾಸ್ತರ್ ಉಬ್ರ0ಗಳ, ಸಂತೋಷ್ ರೈ ಗಾಡಿಗುಡ್ಡೆ,  ಸುಧಾಕರ ರೈ ತೋಟದಮೂಲೆ(ಜೊತೆ ಕಾರ್ಯದರ್ಶಿಗಳು), ಭಜರಂಗದಳದ ಸಂಚಾಲಕರಾಗಿ ಹರೀಶ್ ಜೋಗಿ ಪೆರಿ0ಜೆ, ಸಹ ಸ0ಚಾಲಕರಾಗಿ ಚಂದ್ರ ಪದ್ಮಾರ್, ಮಾತೃ ಶಕ್ತಿ ಪ್ರಮುಖ್ ಆಗಿ ನಯನ ಕುಮಾರಿ ಕುದಿ0ಗಿಲ, ಸಹ ಪ್ರಮುಖ್ ರಾಗಿ ವಿದ್ಯಾಗೌರಿ ಉಪ್ಪ0ಗಳ, ರಮಣಿ ಬೆಳಿ0ಜ, ದುರ್ಗಾವಾಹಿನಿ ಸಂಯೋಜಕಿಯಾಗಿ ಕಮಲಾಕ್ಷಿ ಜಯನಗರ, ಸಹ ಸ0ಯೊಜಕಿಯಾಗಿ ಶಶಿಪ್ರಭಾ ಗೋಸಾಡ, ಹೇಮಲತ ಬೆಳಿಂಜ, ಧರ್ಮಪ್ರಸಾರ ಪ್ರಮುಖ್ ರಾಗಿ ರಮೇಶ್ ಶರ್ಮಾ ಕುರುಮುಜ್ಜಿ, ಸತ್ಸಂಗ ಪ್ರಮುಖ್ ರಾಗಿ ಜನಾರ್ಧನ ಮಣಿಯಾಣಿ ಬೆದ್ರುಕೂಡಲು, ಪ್ರಸಾರ ಪ್ರಮುಖ್ ರಾಗಿ  ರಾಜೇಶ್ ಮಾಸ್ತರ್ ಅಗಲ್ಪಾಡಿ, ಗೋರಕ್ಷಾ ಪ್ರಮುಖ್ ರಾಗಿ ಉದಯ ಮಲ್ಲಾವರ, ಸಹಪ್ರಮುಖ್ ರಾಗಿ ಗಿರೀಶ್ ಪಿ ಕೆ. ಅಗಲ್ಪಾಡಿ ಅವರನ್ನು ಆಯ್ಕೆಮಾಡಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries