ಕುಂಬಳೆ: ಪ್ರಧಾನಮಂತ್ರಿ ನರೇಂದ್ರಮೋದಿ ಅವರ 71ನೇ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರಚ್ಯಾಪಕವಾಗಿ ಹಮ್ಮಿಕೊಂಡಿರುವ ಸೇವಾ ಸಮರ್ಪಣ್ ಅಭಿಯಾನ್ ಅಂಗವಾಗಿ ಬಿಜೆಪಿ ಮೊಗ್ರಾಲ್‍ಪುತ್ತೂರು ಪಂಚಾಯಿತಿ ಸಮಿತಿ ವತಿಯಿಂದ ನರೆಗಾ ದಲ್ಲಿ ಕೆಲಸ ನಿರ್ವಹಿಸುತ್ತಿರುವ 71ವರ್ಷ ಪ್ರಾಯದ ಕಾರ್ಯಕರ್ತರನ್ನು ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಪಕ್ಷದ ಜಿಲ್ಲಾ ಪ್ರಧಾನಕಾರ್ಯದರ್ಶಿ ಸುಧಾಮ ಗೋಸಾಡ ಉದ್ಘಾಟಿಸಿದರು. ಪಂಚಾಯಿತಿ ಸಮಿತಿ ಅಧ್ಯಕ್ಷ ಯೋಗೇಶ್ ಅಧ್ಯಕ್ಷತೆ ವಹಿಸಿದ್ದರು. ಸುಕುಮಾರ್ ಕುದ್ರೆಪ್ಪಾಡಿ, ಪಿ.ಆರ್. ಸುನಿಲ್, ಸಂಪತ್ ಕುಮಾರ್, ಉಮೇಶ್ ಕಡಪ್ಪುರ, ಹರ್ಷವರ್ಧನ್, ಪ್ರಮಿಳಾ ಮಜಲ್, ಸುಲೋಚನಾ, ಮಲ್ಲಿಕಾ, ಗಿರೀಶ್ ಉಪಸ್ಥಿತರಿದ್ದರು.