ಕಾಸರಗೋಡು: ಕೋವಿಡ್ ಎರಡನೇ ತರಂಗದ ಬಳಿಕ ಕಳೆದ ಒಂದೂವರೆ ವರ್ಷಗಳಿಂದ ಮುಚ್ಚಲ್ಪಟ್ಟ ಶಾಲೆಗಳು ನ.1 ರಂದು ಪುನರಾರಂಭಗೊಳ್ಳಲಿದ್ದು, ಶಾಲೆಗಳ ಸ್ವಚ್ಛತಾ ಕೆಲಸಗಳು ನಡೆಯುತ್ತಿದೆ. ಈ ಮಧ್ಯೆ ಶಾಲೆಯೊಂದರ ತರಗತಿ ಕೊಠಡಿಯಲ್ಲಿ ಬೀಡುಬಿಟ್ಟ ಹಾವನ್ನು ಕಂಡು ಕರ್ತವ್ಯದಲ್ಲಿದ್ದ ಸಿಬ್ಬಂದಿಗಳು ಹೌಹಾರಬೇಕಾದ ಘಟನೆ ನಡೆದಿದೆ. ಕಾಲಿಚ್ಚಾನಡ್ಕ ಸರ್ಕಾರಿ ಪ್ರೌಢಶಾಲೆಯ ಎಲ್ ಪಿ ವಿಭಾಗದ ತರಗತಿ ಕೊಠಡಿಯಲ್ಲಿ ಹಾವು ಪತ್ತೆಯಾಗಿದೆ.
ಶಾಲೆ ಆರಂಭಕ್ಕೂ ಮುನ್ನ ಅಧಿಕಾರಿಗಳು ಕಳೆದೊಂದು ವಾರದಿಂದ ತರಗತಿ ಕೊಠಡಿ ಹಾಗೂ ಶಾಲಾ ಮೈದಾನವನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಇದರ ಭಾಗವಾಗಿ ತರಗತಿ ಕೊಠಡಿಗಳನ್ನು ಶುಚಿಗೊಳಿಸುವುದು, ಪರಿಸರದ ಪೊದೆಗಳನ್ನು ಸವರುವುದು, ಗಾಳಿ ಬೆಳಕುಗಳು ಬರುಯವಂತೆ ವ್ಯವಸ್ಥೆಗೊಳಿಸುವ ಚಟುವಟಿಕೆಗಳ ಮಧ್ಯೆ ಕಾಲಿಚ್ಚಾನಡ್ಕ ಶಾಲೆಯಲ್ಲಿ ಕಂಡುಬಂದ ಸರೀಸೃಪ ಕಳವಳಕ್ಕೆ ಕಾರಣವಾಯಿತು.
ಕಿರಿಯ ಪ್ರಾಥಮಿಕ ವಿಭಾಗದ ತರಗತಿಯಲ್ಲಿ ಹಾವು ಪತ್ತೆಯಾಯಿತು. ಬಳಿಕ ಅಧಿಕೃತರು ಅತ್ಯಂತ ಎಚ್ಚರಿಕೆಯಿಂದ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ. ಶಾಲಾ ಅಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಹಾವನ್ನು ಹಿಡಿಯಲಾಯಿತು.
(ಚಿತ್ರ ಸಾಂದರ್ಭಿಕ)