ನವದೆಹಲಿ: ಮುಂದಿನ ವಾರ ಅಡುಗೆ ಅನಿಲ (ಎಲ್ಪಿಜಿ) ದರ ಹೆಚ್ಚಾಗಬಹುದು ಎಂದು ಮೂಲಗಳು ತಿಳಿಸಿವೆ. ದರ ಹೆಚ್ಚಳವು ಸರ್ಕಾರದ ಅನುಮತಿಯ ಮೇಲೆ ಅವಲಂಬಿತವಾಗಿರುತ್ತದೆ.
ಅಂತಾರಾಷ್ಟ್ರೀಯ ದರ ಏರಿಕೆಯ ಹಿನ್ನೆಲೆ ಪ್ರತೀ ಸಿಲಿಂಡರ್ ಮೇಲಿನ ನಷ್ಟ ಹೆಚ್ಚಾಗಿದೆ. ಹಾಗಾಗಿ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಮತ್ತೊಮ್ಮೆ ಬೆಲೆ ಏರಿಸಿದ್ರೆ, ಇದು ಐದನೇ ಬಾರಿಗೆ ಹೆಚ್ಚಳವಾಗಲಿದೆ. ಈಗಾಗಲೇ ಅ.6ರಂದು ಪ್ರತಿ ಸಿಲಿಂಡರ್ಗೆ 15 ರೂ. ಹೆಚ್ಚಿಸಲಾಗಿದೆ.
ಇದಲ್ಲದೇ ಜುಲೈನಲ್ಲಿ 14.2 ಕೆ ಜಿ ಸಿಲಿಂಡರ್ ದರವನ್ನು 90 ರೂ.ಗೆ ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಿಗೆ ಚಿಲ್ಲರೆ ಮಾರಾಟದ ಬೆಲೆಯನ್ನು ವೆಚ್ಚದೊಂದಿಗೆ ಹೊಂದಿಸಲು ಅನುಮತಿಸಲಾಗಿಲ್ಲ.
ಅಲ್ಲದೇ ಅಂತರವನ್ನು ಕಡಿಮೆ ಮಾಡಲು ಇದುವರೆಗೆ ಯಾವುದೇ ಸರ್ಕಾರಿ ಸಬ್ಸಿಡಿಯನ್ನು ಅನುಮೋದಿಸಲಾಗಿಲ್ಲ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಮೂಲಗಳಿಂದ ಮಾಹಿತಿ ದೊರೆತಿದೆ. ಎಲ್ ಪಿ ಜಿ ಜೊತೆಗೆ ಪೆಟ್ರೋಲ್ ದೀಸೆಲ್ ದರವೂ ಮತ್ತೆ ಏರಿಕೆ ಕಾಣುವ ಸೂಚನೆ ದೊರೆತಿದೆ.