ಕುಂಬಳೆ: ಕುಂಬಳೆಯ ಸಮುದಾಯ ಆರೋಗ್ಯ ಕೇಂದ್ರ ಮತ್ತು ಮೊಗ್ರಾಲ್ ಯುನಾನಿ ಆಸ್ಪತ್ರೆ ಜಂಟಿ ಆಸ್ಪತ್ರೆಯಲ್ಲಿ ವಿಶ್ವ ವೃದ್ಧರ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಯಿತು. ವಿಚಾರ ಸಂಕಿರಣಗಳು, ಜೀವನಶೈಲಿ ರೋಗನಿರ್ಣಯ ಮತ್ತು ಅಭಿನಂದನಾ ಕಾರ್ಯಕ್ರಮ ನಡೆಯಿತು.
ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಕೀಯ ಅಧಿಕಾರಿ ಡಾ.ಕೆ.ದಿವಾಕರ ರೈ ಉದ್ಘಾಟಿಸಿದರು. ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಯುನಾನಿ ವೈದ್ಯಕೀಯ ಅಧಿಕಾರಿ ಡಾ ಝಾಕೀರ್ ಅಲಿ, ಆರೋಗ್ಯ ನಿರೀಕ್ಷಕ ಗ್ಯಾನಿ ಮೋಲ್, ಕಿರಿಯ ಆರೋಗ್ಯ ನಿರೀಕ್ಷಕ ಸಿಸಿ ಬಾಲಚಂದ್ರನ್, ಕಿರಿಯ ಸಾರ್ವಜನಿಕ ಆರೋಗ್ಯ ದಾದಿ ಸಬೀನಾ, ಆಶಾ ಕಾರ್ಯಕರ್ತೆಯರಾದ ಬಾಲ್ಕಿಸ್ ಮತ್ತು ನಸೀರಾ ಉಪಸ್ಥಿತರಿದ್ದು ಮಾತನಾಡಿದರು.