HEALTH TIPS

ಜಾಗತಿಕ ತಾಪಮಾನ ಏರಿಕೆಯಿಂದ ಹೆಚ್ಚುತ್ತಿದೆ ಆರೋಗ್ಯ ಸಮಸ್ಯೆ: ಅಧ್ಯಯನ

                     ವಾಷಿಂಗ್ಟನ್ : ಜಾಗತಿಕ ತಾಪಮಾನ ಏರಿಕೆಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

                    ಏರುತ್ತಿರುವ ತಾಪಮಾನವು ತೀವ್ರ ತರಹದ ಪರಿಣಾಮಗಳನ್ನು ಉಂಟು ಮಾಡುತ್ತಿದೆ ಎಂದು ಈ ಸಂಶೋಧನಾ ವರದಿಯ ಸಹ ಲೇಖಕರು ಹಾಗೂ ವಾಷಿಂಗ್ಟನ್ ವಿಶ್ವವಿದ್ಯಾಲಯದ ಪರಿಸರ ಆರೋಗ್ಯ ಪ್ರಾಧ್ಯಾಪಕ ಕ್ರಿಸ್ಟಿ ಎಬಿ ಹೇಳಿದ್ದಾರೆ.

                 ವೈದ್ಯಕೀಯ ಜರ್ನಲ್ ಲ್ಯಾನ್ಸೆಟ್ ಪ್ರಕಟಿಸಿರುವ ವಾರ್ಷಿಕ ವರದಿಯಲ್ಲಿ ಜಾಗತಿಕ ತಾಪಮಾನ ಏರಿಕೆಯಿಂದ ಉಂಟಾಗಿರುವ 44 ಜಾಗತಿಕ ಆರೋಗ್ಯ ಸೂಚಕಗಳನ್ನು ಉಲ್ಲೇಖಿಸಿದೆ. ಈ ವರದಿಯಲ್ಲಿ ತಾಪಮಾನ ಏರಿಕೆಯಿಂದ ಸಂಭವಿಸುವ ಸಾವು, ಸಾಂಕ್ರಾಮಿಕ ರೋಗಗಳು ಹಾಗೂ ಹಸಿವಿನಂತಹ ಅಂಶಗಳು ಸೇರಿವೆ.

              ಈ ವರ್ಷ ಪ್ರಕಟವಾದ ವರದಿಗಳಲ್ಲಿ ಒಂದು ಜಾಗತಿಕ ಮಟ್ಟದ ಮಾಹಿತಿಯನ್ನು ನೀಡಿದರೆ , ಇನ್ನೊಂದು ಅಮೆರಿಕವನ್ನು ಆಧಾರವಾಗಿಟ್ಟುಕೊಂಡುವರದಿ ನೀಡಿದೆ, ಈ ವರದಿಗಳಲ್ಲಿ ತೀವ್ರ ಅಪಾಯದಲ್ಲಿ ಭವಿಷ್ಯದ ಆರೋಗ್ಯ ಎಂದು ಉಲ್ಲೇಖಿಸಿದ್ದು, ಭವಿಷ್ಯದಲ್ಲಿ ಎದುರಾಗುವ ಅಪಾಯಗಳನ್ನು ಎತ್ತಿ ತೋರಿಸಿದೆ.

            ಈ ಎಲ್ಲವೂ ಕಠಿಣ ಸವಾಲುಗಳನ್ನು ಒಡ್ಡುತ್ತಿವೆ ಎಂದು ಲ್ಯಾನ್ಸೆಟ್ ಕೌಂಟ್‌ಡೌನ್ ಯೋಜನಾ ಸಂಶೋಧನಾ ನಿರ್ದೇಶಕಿ ಮರೀನಾ ಹೇಳಿದ್ದಾರೆ.

                ಜಾಗತಿಕ ತಾಪಮಾನ ಏರಿಕೆಯಿಂದ ಸುಮಾರು 600 ಕೋಟಿ ಜನರು ಸಮಸ್ಯೆಗೆ ತುತ್ತಾಗುತ್ತಾರೆ. ತಾಪಮಾನ ಏರಿಕೆಯನ್ನು ಕಡಿಮೆ ಮಾಡಬೇಕು ಎಂದು ಮಾಡಿಕೊಂಡ ಪ್ಯಾರಿಸ್‌ ಒಪ್ಪಂದದಿಂದ ಇತ್ತೀಚೆಗೆ ಅಮೆರಿಕ ಹೊರಬಂದಿದೆ. ಆದರೆ ಪ್ಯಾರಿಸ್‌ ಒಪ್ಪಂದದ ಅನುಸಾರ                              ತಾಪಮಾನ ಕಡಿಮೆ ಮಾಡದಿದ್ದರೆ ಇಡೀ ಜಗತ್ತಿಗೆ ಕಂಟಕ ತಪ್ಪಿದ್ದಲ್ಲ.

ಒಪ್ಪಂದದಂತೆ ಜಾಗತಿಕ ತಾಪಮಾನವನ್ನು 2 ಡಿಗ್ರಿ ಸೆಲ್ಷಿಯಸ್‌ನಷ್ಟುಕಡಿಮೆ ಮಾಡಬೇಕು ಮತ್ತು ಅದಕ್ಕಾಗಿ ಕಾರ್ಬನ್‌ ಹೊರಸೂಸುವಿಕೆಯನ್ನು ತಗ್ಗಿಸಲು ಎಲ್ಲಾ ದೇಶಗಳು ಶತಪ್ರಯತ್ನ ಮಾಡಲೇಬೇಕು.

                ತಾಪಮಾನ ಏರಿಕೆಯಾಗುತ್ತ ಹೋದಂತೆ ಬೆಳೆ ಬೆಳೆಯುವುದು ಕಷ್ಟವಾಗುತ್ತದೆ. ತತ್ಪರಿಣಾಮ ಮಾರುಕಟ್ಟೆಯಲ್ಲಿ ಆಹಾರ ಧಾನ್ಯದ ಬೆಲೆ ಗಗನಕ್ಕೇರುತ್ತದೆ. ಶ್ರೀಮಂತರೇನೋ ಕೊಂಡುಕೊಳ್ಳುತ್ತಾರೆ. ಆದರೆ ಬಡವರು ಊಟಕ್ಕೆ ಪರದಾಡಬೇಕಾದ ಪರಿಸ್ಥಿತಿ ಬರಬಹುದು. ಆಗ ಬಡಮಕ್ಕಳು ಪೌಷ್ಟಿಕ ಆಹಾರದ ಕೊರತೆ ಎದುರಿಸುತ್ತಾರೆ.

             ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಪರಿಣಾಮ ಮಕ್ಕಳಲ್ಲಿ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕಳೆದ 30 ವರ್ಷಗಳಿಂದ ಜಾಗತಿಕವಾಗಿ ಆಹಾರ ಧಾನ್ಯಗಳ ಇಳುವರಿ ಕಡಿಮೆಯಾಗುತ್ತದೆ. ಭಾರತದಲ್ಲಿ ಜೋಳ 4%, ಗೋದಿ 6%, ಸೋಯಾಬೀನ್‌ 3%, ಭತ್ತ 4% ಇಳುವರಿ ಕಡಿಮೆಯಾಗಿದೆ.

                ಹವಾಮಾನ ಬದಲಾವಣೆಯಿಂದ ಅಕಾಲಿಕ ಮಳೆ ಉಂಟಾಗಿ ಮಕ್ಕಳಲ್ಲಿ ಅತಿಸಾರ ಮತ್ತು ಸೊಳ್ಳೆಗಳಿಂದ ತಗಲುವ ರೋಗಗಳು ಹೆಚ್ಚುತ್ತವೆ. ವಾಯುಮಾಲಿನ್ಯ ಅತಿಯಾಗಿ ಅದರಲ್ಲಿನ ಪರ್ಟಿಕ್ಯುಲೇಟ್‌ ಮ್ಯಾಟರ್‌ ಪ್ರಮಾಣ ಏರಿಕೆಯಾದರೆ ಸಾವಿನ ಸಂಖ್ಯೆಯೂ ಅಧಿಕವಾಗುತ್ತದೆ. ಹಾಗೆಯೇ ಪ್ರವಾಹ, ಸುನಾಮಿ, ಚಂಡಮಾರುತ, ಕಾಳ್ಗಿಚ್ಚು ಹೆಚ್ಚಾಗಿ ಜನರು ನಲುಗಬೇಕಾಗುತ್ತದೆ.

ವಿಶ್ವಸಂಸ್ಥೆ ಹೇಳಿದ್ದೇನು?: ಯಾವ ಮಟ್ಟಕ್ಕೆ ಭೂಮಿಯ ಉಷ್ಣಾಂಶ ಏರುವುದನ್ನು ತಡೆಗಟ್ಟಬೇಕು ಎಂದು ವಿಜ್ಞಾನಿಗಳು ಈ ಹಿಂದೆ ಗುರಿ ಹಾಕಿಕೊಂಡಿದ್ದರೋ, ಆ ಉಷ್ಣಾಂಶದ ಮಟ್ಟವನ್ನು ಭೂಮಿ ಇನ್ನೊಂದು ದಶಕದಲ್ಲೇ ದಾಟಲಿದೆ ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿಯೊಂದು ಎಚ್ಚರಿಸಿದೆ. ಜೊತೆಗೆ ಇದು ಮಾನವೀಯತೆ ಪಾಲಿಗೆ ಅತ್ಯಂತ ಗಂಭೀರ ಎಚ್ಚರಿಕೆ ಎಂದು ಹೇಳಿದೆ.

ಹವಾಮಾನ ಬದಲಾವಣೆ ಕುರಿತಾದ ವಿಶ್ವಸಂಸ್ಥೆಯ ಸಮಿತಿಯು ತನ್ನ ವರದಿಯನ್ನು ಸೋಮವಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಹವಾಮಾನ ಬದಲಾವಣೆಯು ಅತ್ಯಂತ ಸ್ಪಷ್ಟವಾಗಿ ಮಾನವ ನಿರ್ಮಿತ ಸಮಸ್ಯೆ. 2013ರಲ್ಲಿ ನಾವು ಅಂದಾಜಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಭೂಮಿಯ ಉಷ್ಣಾಂಶ ಹೆಚ್ಚುತ್ತಿದೆ. ಹೀಗಾಗಿ 21ನೇ ಶತಮಾನ ಇನ್ನಷ್ಟುಬಿಸಿಯಾಗುವುದು ಖಚಿತ ಎಂದು ವರದಿ ಹೇಳಿದೆ.

            ಭೂಮಿಯ ಉಷ್ಣಾಂಶ ಏರಿಕೆಯನ್ನು ಕನಿಷ್ಠ 1.5 ಡಿ.ಸೆನಷ್ಟುತಡೆಯಲು 19ನೇ ಶತಮಾನದ ಆರಂಭದಿದಲೂ ವಿಜ್ಞಾನಿಗಳು ಯೋಜನೆಯನ್ನು ರೂಪಿಸುತ್ತಲೇ ಇದ್ದಾರೆ. ಆದರೆ ಕಳೆದ ಒಂದೂವರೆ ಶತಮಾನದ ಅವಧಿಯಲ್ಲಿ ಭೂಮಿಯ ಉಷ್ಣಾಂಶ ಈಗಾಗಲೇ 1.1 ಡಿ.ಸೆ.ನಷ್ಟುಏರಿಕೆಯಾಗಿದೆ. ಈ ಹಾದಿಯಲ್ಲೇ ನಾವು ಸಾಗಿದರೆ 2030ರ ವೇಳೆಗೆ ಭೂಮಿಯ ಉಷ್ಣಾಂಶವು 1.5 ಡಿ.ಸೆನಷ್ಟುಹೆಚ್ಚಾಗಲಿದೆ.

ಇತ್ತೀಚಿನ ದಿನಗಳಲ್ಲಿ ಹವಾಮಾನದಲ್ಲಿ ಆದ ಬದಲಾವಣೆಯು ಅತ್ಯಂತ ವಿಸ್ತೃತ, ತ್ವರಿತ, ತೀವ್ರ ಮತ್ತು ಕಳೆದ ಸಾವಿರಾರು ವರ್ಷಗಳಲ್ಲೇ ಕಂಡುಕೇಳರಿಯದ ಪ್ರಮಾಣದ್ದು ಎಂದು ಸಮಿತಿಯ ಉಪಾಧ್ಯಕ್ಷ ಕೊ ಬಾರ್ರೆಟ್ಟ್ ಹೇಳಿದ್ದಾರೆ.

                234 ವಿಜ್ಞಾನಿಗಳು ಸೇರಿ ರಚಿಸಿರುವ ಈ ವರದಿಯು ಭರ್ಜರಿ 3000 ಪುಟಗಳಷ್ಟಿದ್ದು, ಹವಾಮಾನ ಬದಲಾವಣೆಯು ಈಗಾಗಲೇ ಸಮುದ್ರದಲ್ಲಿ ನೀರಿನ ಮಟ್ಟಏರಿಕೆ, ನೀರ್ಗಲ್ಲು ಕುಸಿತ, ಬಿಸಿಗಾಳಿ, ಬರಗಾಲ, ಅತಿವೃಷ್ಟಿ, ಚಂಡಮಾರುತದಂಥ ಸಮಸ್ಯೆಗೆ ಕಾರಣವಾಗಿದೆ ಎಂದು ವರದಿ ಹೇಳಿದೆ.

                     ಉದಾಹರಣೆಗೆ 50 ವರ್ಷಗಳಿಗೊಮ್ಮೆ ಬೀಸುತ್ತಿದ್ದ ಬಿಸಿಗಾಳಿಯ ಅಲೆಗಳು ಇದೀಗ ದಶಕಕ್ಕೆ ಒಮ್ಮೆಯಂತೆ ಬೀಸುತ್ತಿದೆ. ಉಷ್ಣಾಂಶ ಇನ್ನೊಂದು ಡಿ.ಸೆ.ನಷ್ಟುಏರಿದರೆ ಅದು ಪ್ರತಿ 7 ವರ್ಷಕ್ಕೊಮ್ಮೆ ಎರಡು ಬಾರಿ ಬೀಸಲು ಆರಂಭವಾಗುತ್ತದೆ. ಭೂಮಿಯ ಉಷ್ಣಾಂಶ ಹೆಚ್ಚಿದಂತೆ ಅದು ಕೇವಲ ಗಂಭೀರ ವಾಯುಗುಣ ಬದಲಾವಣೆಗೆ ಮಾತ್ರ ಕಾರಣವಾಗದು, ಬದಲಾಗಿ ಒಂದೇ ಬಾರಿಗೆ ಹಲವು ರೀತಿಯ ಪ್ರಾಕೃತಿಕ ವಿಕೋಪಗಳಿಗೆ ಕಾರಣವಾಗುತ್ತದೆ. ಇದೀಗ ಅಮೆರಿಕದಲ್ಲಿ ಒಂದೇ ಬಾರಿಗೆ ಕಾಣಿಸಿಕೊಂಡಿರುವ ಬಿಸಿಗಾಳಿ, ಬರಗಾಲ, ಕಾಡ್ಗಿಚ್ಚು ಇದಕ್ಕೆ ಉದಾಹರಣೆ ಎಂದು ವರದಿ ಹೇಳಿದೆ.

ಜೊತೆಗೆ ಹವಾಮಾನ ಬದಲಾವಣೆಯ ಮತ್ತೊಂದು ಅಪಾಯವೆಂದರೆ, ಹಿಮಖಂಡಗಳಲ್ಲಿ ಮಂಜುಗಡ್ಡೆಯ ಪದರಗಳ ಪ್ರಮಾಣ ಇಳಿಕೆ. ಇದು ಪರೋಕ್ಷವಾಗಿ ಸಮುದ್ರದ ನೀರಿನಲ್ಲಿ ಆಮ್ಲಜನಕ ಮಟ್ಟಕಡಿಮೆಯಾಗಿ, ಆಮ್ಲೀಯ ಅಂಶ ಹೆಚ್ಚಳಕ್ಕೆ ಕಾರಣವಾಗಿ ಜೀವ ಸಂಕುಲದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ವರದಿ ಎಚ್ಚರಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries