ನವರಾತ್ರಿ ಪ್ರಾರಂಭವಾಗಿದೆ. ಒಂದೊಂದು ದಿನ ನವದುರ್ಗೆಯರನ್ನು ಪೂಜಿಸಲಾಗುವುದು. ದುರ್ಗೆಯ ಒಂಭತ್ತು ಅವತಾರಗಳನ್ನು ಪೂಜಿಸಲಾಗುವುದು. ಇವತ್ತು ಮೊದಲ ದಿನ ಇಂದು ಶೈಲಪುತ್ರಿಯನ್ನು ಆರಾಧನೆ ಮಾಡಲಾಗುವುದು. ಎರಡನೇ ದಿನ ಬ್ರಹ್ಮ ಚಾರಿಣಿಯನ್ನು ಆರಾಧಿಸಲಾಗುವುದು. ಮೂರನೇ ದಿನ ಚಂದ್ರಘಂಟ ದೇವಿಯನ್ನು ಪೂಜಿಸಲಾಗುವುದು. ನಾಲ್ಕನೇ ದಿನ ಕೂಷ್ಮಾಂಡದೇವಿಯನ್ನು ಆರಾಧಿಸಲಾಗುವುದು. ಐದನೇ ದಿನ ಸ್ಕಂದಮಾತೆಯನ್ನು, ಆರನೇ ದಿನ ಕಾತಾಯ್ಯನಿ ದೇವಿಯನ್ನು, ಏಳನೇ ದಿನ ಕಾಳರಾತ್ರಿ, ಎಂಟನೇ ದಿನ ಮಹಾಗೌರಿ, ಒಂಭತ್ತನೇ ದಿನ ಸಿದ್ಧಿಧಾತ್ರಿಯನ್ನು ಪೂಜಿಸಲಾಗುವುದು.
ಈ ಒಂಭತ್ತು ಅವತಾರಗಳ ಹಿಂದೆ ಒಂದೊಂದು ಕತೆಯಿದೆ. ಅಲ್ಲದೆ ನವದುರ್ಗೆಯರ ಈ ಅವತಾರಗಳಿಂದ ನಾವು ಜೀವನ ಪಾಠಗಳನ್ನು ಕಲಿಯಬಹುದಾಗಿದೆ, ಆ ಪಾಠಗಳು ಯಾವುವು ಎಂದು ನೋಡುವುದಾದರೆ:
ನಿಮ್ಮಲ್ಲಿನ ಶಕ್ತಿಯನ್ನು ಎಚ್ಚರಿಸುತ್ತದೆ ದುರ್ಗಾ ದೇವಿ ಶಕ್ತಿ ಮಾತೆ. ಈ ಶಕ್ತಿ ಮಾತೆಯ ಮೊದಲನೇ ಅವತಾರ ಶೈಲಪುತ್ರಿಯನ್ನು ಆರಾಧಿಸುವುದರಿಂದ ಆತ್ಮವಿಶ್ವಾಸ ಹೆಚ್ಚಾಗುವುದು. ಇದು ಮನಸ್ಸಿನಲ್ಲಿ ಸುಪ್ತವಾಗಿ ಅಡಗಿರುವ ಶಕ್ತಿಯನ್ನು ಎಚ್ಚರಿಸುತ್ತದೆ. ನಮ್ಮಲ್ಲಿ ನಂಬಿಕೆ, ಬಲ ಹೆಚ್ಚಿಸುತ್ತದೆ.ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಹೇಳುತ್ತದೆ 2ನೇ ದಿನ ಬ್ರಹ್ಮಚಾರಿಣಿ ದೇವಿಯನ್ನು ಆರಾಧಿಸಲಾಗುವುದು. ನಮ್ಮ ಬದುಕಿನಲ್ಲಿ ನಾವು ಸರಿಯಾದ ದಾರಿಯಲ್ಲಿ ನಡೆದರೆ ಮಾತ್ರ ಸಂತೋಷ ಕಾಣಲು ಸಾಧ್ಯ. ನಮ್ಮ ಪ್ರೀತಿಪಾತ್ರರು ತಪ್ಪಾದ ದಾರಿಯಲ್ಲಿ ನಡೆಯುತ್ತಿದ್ದರೆ ಅವರ ವಿರೋಧ ಕಟ್ಟಿಕೊಂಡರೂ ಪರ್ವಾಗಿಲ್ಲ ನಾವು ಸರಿಯಾದ ದಾರಿಯಲ್ಲಿ ನಡೆಯಬೇಕು ಎಂಬುವುದನ್ನು ಸೂಚಿಸುತ್ತದೆ.
ಕಲಿಯುತ್ತಲೇ ಇರಬೇಕು ದುರ್ಗೆಯ ಮೂರನೇ ಅವತಾರ ಚಂದ್ರಘಂಟ. ಅವಳು ಬದುಕಿನಲ್ಲಿ ಗುರು ಸಾಧನೆಗೆ ನಿರಂತರವಾಗಿ ಕಲಿಯುತ್ತಾನೆ ಇರಬೇಕು ಎಂಬ ಪಾಠವನ್ನು ತಿಳಿಸುತ್ತಾಳೆ. ಯಾವುದೇ ಹೊಸ ವಿಷಯ ಕಲಿಯುವಾಗ ಹಿಂದೇಟು ಹಾಕಬೇಡಿ, ಹೊಸ ಕೌಶಲ್ಯವನ್ನು ಕಲಿಯುತ್ತಲೇ ಇರಿ, ಇದರಿಂದ ಅಭಿವೃದ್ಧಿಯಾಗುವಿರಿ.
ಧನಾತ್ಮಕವಾಗಿ ಚಿಂತಿಸಿ ನಾಲ್ಕನೇ ದಿನ ಕೂಷ್ಮಾಂಡ ದೇವಿಯನ್ನು ಆರಾಧಿಸಲಾಗುವುದು. ದೇವಿಯು ಬದುಕಿನಲ್ಲಿ ಧನಾತ್ಮಕ ಚಿಂತನೆಯನ್ನು ಹೊಂದಿರಬೇಕು ಎಂಬುವುದನ್ನು ಕಲಿಸುತ್ತಾಳೆ. ನಾವು ಧನಾತ್ಮಕವಾಗಿ ಯೋಚಿಸಿದರೆ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು.
ಪ್ರೀತಿಯನ್ನು ಹರಡಿ ಐದನೇ ದಿನ ಸ್ಕಂದ ಮಾತೆಯನ್ನು ಆರಾಧಿಸಲಾಗುವುದು. ಕೋಪ, ದ್ವೇಷ, ಅಸೂಯೆ ಇವುಗಳಿಂದ ಹೊರಬಂದು ಎಲ್ಲರನ್ನು ಪ್ರೀತಿಸಿ ಎಂಬ ಬದುಕಿನ ಪಾಠವನ್ನು ಈ ದೇವಿ ಹೇಳಿಕೊಡುತ್ತಾಳೆ.
ನಮ್ಮನ್ನು ನಾವು ನಿಯಂತ್ರಿಸಬೇಕು 6ನೇ ದಿನ ಕಾತ್ಯಾಯನಿಯನ್ನು ಪೂಜಿಸಲಾಗುವುದು. ನವರಾತ್ರಿಯಲ್ಲಿ ಉಪವಾಸ ಮಾಡುವುದು ಒಂದು ಧಾರ್ಮಿಕ ವಿಧಾನ ಮಾತ್ರವಲ್ಲ, ಇದು ಬದುಕಿನಲ್ಲಿ ಶಿಸ್ತನ್ನು ಕಲಿಸುತ್ತದೆ. ಬದುಕಿನಲ್ಲಿರುವ ಕಷ್ಟಗಳನ್ನು ಹೇಗೆ ಎದುರಿಸಬೇಕು ಎಂಬುವುದನ್ನು ಕಲಿಸುತ್ತದೆ.
ಸ್ವಾರ್ಥವನ್ನು ಬಿಡಿ 7ನೇ ದಿನ ಕಾಳರಾತ್ರಿ ದೇವಿಯನ್ನು ಪೂಜಿಸಲಾಗುವುದು. ಯಾರಿಗೆ ಅವಶ್ಯಕತೆ ಇದೆಯೋ ಅವರಿಗೆ ಏನೂ ಪ್ರತಿಫಲ ಬಯಸದೆ ಮಾಡಿ ಎಂಬ ಪಾಠವನ್ನು ಕಲಿಸುತ್ತದೆ. ದೇವರಲ್ಲಿ ನಂಬಿಕೆಯನ್ನು ಇಡಿ 8ನೇ ದಿನ ಮಹಾಗೌರಿಯನ್ನು ಪೂಜಿಸಲಾಗುವುದು. ಈ ದೇವಿ ಬದುಕಿನಲ್ಲಿ ನಂಬಿಕೆ ಇರಬೇಕು, ನಂಬಿಕೆ ಇದ್ದರೆ ಬಯಸಿದ್ದು ನೆರವೇರುವುದು ಎಂಬುವುದನ್ನು ಕಲಿಸುತ್ತಾಳೆ.
ಶಾಂತವಾಗಿರಿ 9ನೇ ದಿನ ದೇವಿ ಸಿದ್ಧಿಧಾತ್ರಿಯನ್ನು ಪೂಜಿಸಲಾಗುವುದು. ಈ ದೇವಿ ಎಲ್ಲಾ ಋಣಾತ್ಮಕ ಚಿಂತನೆಗಳನ್ನು ಬಿಟ್ಟು ಶಾಂತವಾಗಿರುವುದನ್ನು ಕಲಿಸುತ್ತದೆ. ಅಹಿಂಸೆಯನ್ನು ನಂಬಿ, ಅಹಿಂಸೆ ಮಾರ್ಗದಲ್ಲಿ ನಡೆಯಿರಿ.