ಕಾಸರಗೋಡು: ಬಿಜೆಪಿಯ ಹಿರಿಯ ಮುಖಂಡ, ದಿ. ಮಡಿಕೈ ಕಮ್ಮಾರನ್ ಸ್ಮರಣಾರ್ಥ 1008 ತೆಂಗಿನ ಸಸಿ ವಿತರಣಾ ಕಾರ್ಯ ಅ. 4ರಂದು ಕಾಞಂಗಾಡು ಮಂಡಲದ ವಿವಿಧೆಡೆ ನಡೆಯಲಿದೆ. ಬೆಳಗ್ಗೆ 9ಕ್ಕೆ ಮಡಿಕೈ ಕಲ್ಯಾಣ್‍ನಲ್ಲಿರುವ ಸ್ಮøತಿಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ನಾರಿಕೇಳ ಸಮಿತಿ ಸದಸ್ಯ, ರಾಜ್ಯಸಭಾ ಸದಸ್ಯ ಸುರೇಶ್‍ಗೋಪಿ ಕಾರ್ಯಕ್ರಮ ಉದ್ಘಾಟಿಸುವರು.
ಇದೇ ಸಂದರ್ಭ ಬಿಜೆಪಿ ಜಿಲ್ಲಾ ಸಮಿತಿ ವಿವಿಧ ಕೇಂದ್ರಗಳಲ್ಲಿ ಹಮ್ಮಿಕೊಂಡಿರುವ ಸಸಿ ನೆಡುವ ಕಾರ್ಯಖ್ರಮದಲ್ಲೂ ಸುರೇಶ್‍ಗೋಪಿ ಪಾಲ್ಗೊಳ್ಳುವರು. ಪೆರಿಯದಲ್ಲಿರುವ ಕೇಂದ್ರೀಯ ವಿಶ್ವ ವಿದ್ಯಾಲಯ, ಮುಸ್ಲಿಂಲೀಗ್‍ನ ಹಿರಿಯ ಮುಖಂಡ ದಿ. ಚೆರ್ಕಳಂ ಅಬ್ದುಲ್ಲ ಅವರ ನಿವಾಸ, ಶ್ರೀಎಡನೀರು ಮಠ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸೇರಿದಂತೆ ಎಂಟು ಕೇಂದ್ರಗಳಿಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವುದಾಗಿ ಪ್ರಕಟಣೆ ತಿಳಿಸಿದೆ.