ಕಾಸರಗೋಡು: ಕಾಸರಗೊಡು ಕೃಷಿಭವನದ ನೇತೃತ್ವದಲ್ಲಿ ಕಾಸರಗೋಡು ಸರಕಾರಿ ಐ.ಟಿ.ಐ.ಯಲ್ಲಿ ಜಾರಿಗೊಳಿಸುವ ತರಕಾರಿ ತೋಟ ಯೋಜನೆಗೆ ಚಾಲನೆ ಲಭಿಸಿದೆ. ನಗರಸಭೆ ಅಧ್ಯಕ್ಷ ನ್ಯಾಯವಾದಿ ವಿ.ಎಂ.ಮುನೀರ್ ಉದ್ಘಾಟಿಸಿದರು. ಐ.ಟಿ.ಐ. ಪ್ರಾಂಶುಪಾಲ ಷಾಜನ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕೃಷಿ ಅಧಿಕಾರಿ ಆರ್.ವೀಣಾರಾಣಿ, ಸಹಾಯಕ ನಿರ್ದೇಶಕಿ ಮಂಜುಳಾ, ನಗರಸಭೆ ಕಾರ್ಯದರ್ಶಿ ಬಿಜು, ಸಹಾಯಕ ಕೃಷಿ ಅಧಿಕಾರಿ ಸಿ.ಎಚ್.ರಾಜೀವನ್ ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ಮುರಳೀಧರನ್ ಸ್ವಾಗತಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಸಿ.ಅನಿಲ್ ಕುಮಾರ್ ವಂದಿಸಿದರು.