ಕಾಸರಗೋಡು: ಕಾಸರಗೋಡು ಜಿಲ್ಲೆಯ ಗ್ರಾಮ ಪಂಚಾಯತ್ ಗಳ ಶುಚಿತ್ವ, ತ್ಯಾಜ್ಯ ಸಂಸ್ಕರಣೆ ಗುಟಮಟ್ಟ ಸುಧಾರಿತಗೊಳಿಸುವ ಉದ್ದೇಶದಿಂದ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಸ್ವಛ್ ಸರ್ವೇಕ್ಷಣ್ ಗ್ರಾಮೀಣ್ ಸರ್ವೇ ನಡೆಸಲಾಗುವುದು. ಕೇಂದ್ರ ಕುಡಿಯುವ ನೀರು ಶುಚಿತ್ವ ಮಂತ್ರಾಲಯ ವ್ಯಾಪ್ತಿಯಲ್ಲಿ ಗ್ರಾಮ ಪ್ರದೇಶಗಳ ಶುಚಿತ್ವ, ತ್ಯಾಜ್ಯ ಸಂಸ್ಕರಣೆ ಚಟುವಟಿಕೆಗಳನ್ನು ಅವಲೋಕನ ನಡೆಸಿ ಪಂಚಾಯತ್ ಗಳಿಗೆ ರಾಂಕ್ ನೀಡುವ ಚಟುವಟಿಕೆಯೇ ಸ್ವಛ್ ಸರ್ವೇಕ್ಷಣ್ ಗ್ರಾಮೀಣ್ ಸರ್ವೇ.
ಸಾರ್ವಜನಿಕರ ಅಭಿಮತ ಸಂಗ್ರಹಿಸಿ ಸಮೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ವೀರ್ ಚಂದ್ ತಿಳಿಸಿದರು.
hಣಣಠಿ://ssg2021.iಟಿ/ಛಿiಣizeಟಿಜಿeeಜಚಿಛಿಞಎಂಬ ಲಿಂಕ್ ಮೂಲಕ ಸಾರ್ವಜನಿಕರು ಅಭಿಮತ ದಾಖಲಿಸಬಹುದು. ಪ್ರಧಾನವಾಗಿ ಮೂರು ಮಾನದಂಡಗಳನ್ನು ಬಳಸಿ ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಲಾಗುವುದು:
1. ಸರ್ವೇ ಲೆವೆಲ್ ಪೆÇ್ರೀಗ್ರೆಸ್: ಶುಚಿತ್ವ ತ್ಯಾಜ್ಯ ಸಂಸ್ಕರಣೆ ವಲಯದಲ್ಲಿ ಜಾರಿಗೊಳಿಸಲಾದ ಚಟುವಟಿಕೆಗಳ ದಾಖಲೆಗಳನ್ನು ವೆಬ್ ಸೈಟ್ ನಲ್ಲೂ, ಸ್ವಛ್ ಭಾರತ್ ಮಿಷನ್ ಎಂ.ಐ.ಎಸ್.ನಲ್ಲೂ ನಿಖರವಾಗಿ ಅಪ್ ಡೇಟ್ ನಡೆಸುವುದರ ಬಗ್ಗೆ ನಿಗಾ ಇರಿಸಿ ಪ್ರತ್ಯೇಕ ಅಂಕ ನೀಡುವ ವಿಧಾನವಿದು.
2. ನೇರ ನಿಗಾ: ಮನೆಗತಳು, ಸಾರ್ವಜನಿಕ ಸಂಸ್ಥೆಗಳು, ಗ್ರಾಮ ಪಂಚಾಯತ್ ಕಚೇರಿ, ಮಾರುಕಟ್ಟೆ, ಆರಾಧನಾಲಯಗಳು ಇತ್ಯಾದಿಗಳಿಗೆ ನೇರವಾಗಿ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡುವ ವಿಧಾನವಿದು. ಕಮ್ಯೂನಿಟಿ ಮಟ್ಟದ ಸಾಕ್ ಪಿಟ್, ಕಂಪೆÇೀಸ್ಟ್ ಪಿಟ್, ಒ.ಡಿ.ಎಫ್ ಸಂಬಂಧ ವಿವಿಧ ಜನಜಾಗೃತಿ ಸಂಬಂಧ ಚಟುವಟಿಕೆಗಳ ಮಾಹಿತಿ ಸಂಗ್ರಹ ನಡೆಸಲಾಗುವುದು.
3. ಸಾರ್ವಜನಿಕರಿಂದ ಅಭಿಮತ ಸಂಗ್ರಹ: ಸ್ವಛ್ ಸರ್ವೇ ಮಿಷನ್ ಮೊಬೈಲ್ ಅಪ್ಲಿಕೇಷನ್. ಫೆÇೀನ್, ವೆಬ್ ಸೈಟ್ ಇತ್ಯಾದಿ ಮೂಲಕ ನೇರವಾಗಿ ಮಾಹಿತಿ ಸಂಗ್ರಹಿಸುವ ವಿಧಾನವಿದು.
ಸ್ವಛ್ ಸರ್ವೇ ಮಿಷನ್ ನ ಸಮೀಕ್ಷೆ ನಡೆಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಐ.ಪಿ.ಎಸ್.ಒ.ಎಸ್. ರೀಸರ್ಚ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಹೊಣೆ ನೀಡಿದೆ. ಸರ್ವೀಸ್ ಲೆವೆಲ್ ಪೆÇ್ರೀಗ್ರೆಸ್ನ ಅಂಗವಾಗಿರುವ ದಾಖಲೆಗಳ ಸಲ್ಲಿಕೆ ನ.30ರ ಮುಂಚಿತವಾಗಿ, ಕ್ಷೇತ್ರ ಮಟ್ಟದ ಏಜೆನ್ಸಿಗಳ ತಪಾಸಣೆ ಡಿ.23ರ ಮುಂಚಿತವಾಗಿ ಪೂರ್ತಿಗೊಳಿಸಲಾಗುವುದು. ಡಿ.24ರಿಂದ 2022 ಜ.10 ವರೆಗೆ ಸಂಗ್ರಹಿಸಲಾದ ಮಾಹಿತಿಗಳ ಕ್ರೋಡೀಕರಣ ಮತ್ತು ಪಂಚಾಯತ್ ಗಳ ಅಂಕ ನೀಡಿಕೆ, ಜಿಲ್ಲೆಯ ರಾಂಕಿಂಗ್ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.