ಕುಂಬಳೆ: ಆಲ್ ಕೇರಳ ಪೋಟೋಗ್ರಾಪರ್ಸ್ ಅಸೋಸಿಯೇಶನ್(ಎಕೆಪಿಎ) ಕುಂಬಳೆ ಘಟಕದ ಮಹಾಸಭೆ ಬುಧವಾರ ಕುಂಬಳೆಯಲ್ಲಿ ನಡೆಯಿತು. ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಕುಂಬಳೆ ಘಟಕದ ನೂತನ ಅಧ್ಯಕ್ಷರಾಗಿ ನಿತ್ಯಪ್ರಸಾದ್ ಅವರನ್ನು ಆಯ್ಕೆಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೋದ್ ಕೆ ಹಾಗೂ ಕೋಶಾಧಿಕಾರಿಯಾಗಿ ನವೀನ್ ಕುಂಬಳೆ ಅವರನ್ನು ಆಯ್ಕೆಮಾಡಲಾಯಿತು.