ಕಾಸರಗೋಡು: ಕಾಸರಗೋಡಿನ ಚೆರ್ವತ್ತೂರಿನಲ್ಲಿ ಏಳು ವರ್ಷದ ಬಾಲಕ ರೇಬೀಸ್ ವಿಷ ಬಾಧಿಸಿ ಮೃತಪಟ್ಟ ಘಟನೆ ನಡೆದಿದೆ. ಆಲಂತಟ್ಟು ವಲಿಯಪಾಯಿಲ್ ಥಾಮಸ್ ಅವರ ಪುತ್ರ ಎಂ.ಕೆ. ಆನಂದ್ ಮೃತಪಟ್ಟ ದುರ್ದೈವಿ ಬಾಲಕ. ಆನಂದ್ ಅವರ ಮನೆಯಬ ಶ್ವಾನದ ಕಡಿತಕ್ಕೊಳಗಾಗಿ ಚಿಕಿತ್ಸೆಯಲ್ಲಿದ್ದ. ನಾಯಿಗೆ ಹುಚ್ಚು ಹಿಡಿದಿರುವುದಾಗಿ ಬಳಿಕ ಖಚಿತಪಡಿಸಲಾಯಿತು. ಸುಮಾರು ಒಂದು ತಿಂಗಳುಗಳಿಂದ ಬಾಲಕ ಚಿಕಿತ್ಸೆಯಲ್ಲಿದ್ದು ಈ ಮಧ್ಯೆ ಬಾಲಕ ಮೃತಪಟ್ಟನು. ಮೃತ ಬಾಲಕ ಆಲಂತಟ್ಟ ಎಯುಪಿ ಶಾಲೆಯು ಎರಡನೇ ತರಗತಿಯ ವಿದ್ಯಾರ್ಥಿ.