ಸಾಮಾನ್ಯವಾಗಿ ಜನರು ತಮ್ಮ ಫ್ರಿಜ್ ಅನ್ನು ವಾಡಿಕೆಯಂತೆ ಸ್ವಚ್ಛಗೊಳಿಸುತ್ತಾರೆ. ಫ್ರಿಜ್ ಸರಿಯಾಗಿ ಕಾರ್ಯನಿರ್ವಹಿಸಲು ಇಷ್ಟು ಸಾಕು ಎಂದು ಭಾವಿಸುತ್ತಾರೆ. ಆದರೆ ಇದು ತಪ್ಪು. ಫ್ರಿಜ್ ಸರಿಯಾಗಿ ಕಾರ್ಯನಿರ್ವಹಿಸಲು ಕ್ಲೀನ್‌ಗಿಂತ ಕಾಳಜಿ ಮುಖ್ಯ.
ನಾವು ಪ್ರತಿನಿತ್ಯ ಮಾಡುವ ಕೆಲವು ಕೆಲಸಗಳಿಂದ ರೆಫ್ರಿಜರೇಟರ್‌ನ ಕಾರ್ಯಕ್ಷಮತೆ ಕುಸಿಯಬಹುದು. ಹಾಗಾದರೆ, ಆ ಅಭ್ಯಾಸಗಳಾವುವು ಎಂಬುದನ್ನು ಇಲ್ಲಿ ನೋಡೋಣ. ನೀವೇನಾದರೂ ಈ ಕೆಲಸಗಳನ್ನು ಮಾಡುತ್ತಿದ್ದರೆ, ಈಗಲೇ ಸರಿಪಡಿಸಿಕೊಳ್ಳುವುದು ಉತ್ತಮ.
ನಿಮ್ಮ ಫ್ರಿಜ್ ಅನ್ನು ಹಾಳುಮಾಡುವ 5 ಅಭ್ಯಾಸಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ:
1. ಅತಿಯಾದ ಸ್ಟಾಕಿಂಗ್/ಅಂಡರ್ ಸ್ಟಾಕಿಂಗ್: ನೀವು ಫ್ರಿಜ್ ಅನ್ನು ಕೆಲವೊಮ್ಮೆ ವಿವಿಧ ಹಣ್ಣುಗಳು, ತರಕಾರಿಗಳು, ಇತರ ಆಹಾರ ಮತ್ತು ಪಾನೀಯ ಉತ್ಪನ್ನಗಳಿಂದ ತುಂಬಿಸಿರುತ್ತೀರಿ. ಇದು ಹೆಚ್ಚಿನ ಜನರು ಮಾಡುವ ಸಾಮಾನ್ಯ ವಿಷಯ, ಆದರೆ ಇದು ರೆಫ್ರಿಜರೇಟರ್ ಹಾನಿಗೆ ಕಾರಣವಾಗಬಹುದು. ರೆಫ್ರಿಜರೇಟರ್ ನಲ್ಲಿ ಅತಿಯಾಗಿ ಲೋಡ್ ಮಾಡುವುದರಿಂದ ಗಾಳಿಯು ಪರಿಚಲನೆಯಾಗುವುದು ಕಷ್ಟಕರವಾಗುತ್ತದೆ. ಇದು ಆಂತರಿಕ ತಾಪಮಾನವನ್ನು ನಿಯಂತ್ರಿಸುವ ಮತ್ತು ಉತ್ಪನ್ನಗಳನ್ನು ತಂಪಾಗಿರಿಸುವ ಸಾಮರ್ಥ್ಯಕ್ಕೆ ಅಡ್ಡಿಯಾಗಬಹುದು. ತಾಪಮಾನವನ್ನು ನಿಯಂತ್ರಿಸಲು ಸಂಕೋಚಕ ಮತ್ತು ಕಂಡೆನ್ಸರ್ ಕಾಯಿಲ್‌ಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತದೆ, ಇದು ತರುವಾಯ ಅಧಿಕ ಬಿಸಿಯಾಗಲು ಕಾರಣವಾಗುತ್ತದೆ. ಅಷ್ಟೇ ಅಲ್ಲ, ರೆಫ್ರಿಜರೇಟರ್ ಅನ್ನು ಅಂಡರ್ಫಿಲ್ಲಿಂಗ್ ಮಾಡುವುದು ಸಹ ಹಾನಿಗೆ ಕಾರಣವಾಗಬಹುದು. ಆಂತರಿಕ ತಾಪಮಾನಕ್ಕೆ ಸಮನಾದ ಆಹಾರಗಳು ಫ್ರಿಜ್‌ನಲ್ಲಿಲ್ಲದಿದ್ದರೆ, ಅದರ ಸಾಮರ್ಥ್ಯ ಕಡಿಮೆಯಾಗುತ್ತಾ ಬರುವುದು.2. ಕಾಯಿಲ್ ಸ್ವಚ್ಛಗೊಳಿಸಲು ಮರೆಯುವುದು: ಕಂಡೆನ್ಸರ್ ಕಾಯಿಲ್‌ಗಳನ್ನು ವರ್ಷಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಿದರೆ ಅನೇಕ ರಿಪೇರಿಗಳನ್ನು ತಪ್ಪಿಸಬಹುದು. ಇದನ್ನು ಮಾಡದಿದ್ದರೆ, ಫ್ರಿಜ್ ಸುತ್ತಲೂ ಧೂಳು ಮತ್ತು ಕೊಳೆಗಳು ಆವರಿಸಿಕೊಳ್ಳುತ್ತವೆ. ಇದರಿಂದ ಕಾಯಿಲ್‌ಗಳು ಶಾಖವನ್ನು ಹೊರಹಾಕುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದು ನಿಮ್ಮ ರೆಫ್ರಿಜರೇಟರ್‌ನ ಘಟಕಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುವುದಲ್ಲದೆ, ಕರೆಂಟ್ ಬಿಲ್ ಅನ್ನು ಹೆಚ್ಚಿಸಲು ಕಾರಣವಾಗಬಹುದು.
3. ಆಹಾರವನ್ನು ಸರಿಯಾಗಿ ಸಂಗ್ರಹಿಸದಿರುವುದು: ಸಾಮಾನ್ಯವಾಗಿ ಉಳಿದಿರುವ ಆಹಾರವನ್ನು ಎಸೆಯುವ ಬದಲು ಅದನ್ನು ಟಪ್ಪರ್‌ವೇರ್ ಬಾಕ್ಸ್‌ಗೆ ಹಾಕಿ ಫ್ರಿಜ್‌ನಲ್ಲಿ ಇಡುತ್ತೇವೆ. ಆದರೆ, ಇದನ್ನು ಸರಿಯಾಗಿ ನಿರ್ವಹಿಸದ್ದರೆ, ರೆಫ್ರಿಜರೇಟರ್ ಹಾನಿಗೆ ಕಾರಣವಾಗಬಹುದು. ನೀವು ಸಂಗ್ರಹಿಸುತ್ತಿರುವ ಆಹಾರದ ಉಷ್ಣತೆಗೆ ಗಮನ ಕೊಡುವುದು ಮುಖ್ಯ. ಅದಕ್ಕಾಗಿ ರೆಫ್ರಿಜರೇಟರ್‌ನಲ್ಲಿ ಇಡುವ ಮೊದಲು ಅದನ್ನು ಕೋಣೆಯ ತಾಪಮಾನಕ್ಕೆ ಬರುವ ತನಕ ಬಿಡಬೇಕು. ಬಿಸಿಯಿರುವಾಗ ಫ್ರಿಜ್‌ನಲ್ಲಿ ಇಡುವುದರಿಂದ ಆಂತರಿಕ ತಾಪಮಾನ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ರೆಫ್ರಿಜರೇಟರ್ ತಾಪಮಾನವನ್ನು ಮರಳಿ ಬರಲು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಆಂತರಿಕ ತಾಪಮಾನವನ್ನು ಹೆಚ್ಚಿಸುವುದರಿಂದ ಅಲ್ಲಿರುವ ಇತರ ಉತ್ಪನ್ನಗಳ ತಾಜಾತನದ ಮೇಲೂ ಪರಿಣಾಮ ಬೀರುತ್ತದೆ .
4. ಫ್ರಿಜ್ ಅನ್ನು ಗೋಡೆಯ ಹತ್ತಿರದಲ್ಲಿಡುವುದು: ರೆಫ್ರಿಜರೇಟರ್ ಹಾಳಾಗುವದನ್ನು ತಪ್ಪಿಸಲು ಫ್ರಿಜ್ ಸುತ್ತಲೂ ಸರಿಯಾದ ಗಾಳಿಯ ಹರಿವು ಅತ್ಯಗತ್ಯ. ಕಡಿಮೆ ಗಾಳಿಯ ಹರಿವು ನಿಮ್ಮ ರೆಫ್ರಿಜರೇಟರ್‌ನ ಶಾಖವನ್ನು ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ, ಇದರ ಪರಿಣಾಮವಾಗಿ ಆಹಾರ ತಣ್ಣಗಾಗಲು ಕಷ್ಟವಾಗುತ್ತದೆ. ಇದನ್ನು ತಪ್ಪಿಸಲು ನಿಮ್ಮ ಫ್ರಿಜ್‌ನ ಬದಿಗಳ ಮೇಲೆ ಮತ್ತು ಕೆಳಗೆ ಕನಿಷ್ಠ ಹಲವಾರು ಇಂಚುಗಳಷ್ಟು ಜಾಗವನ್ನು ಬಿಡಬೇಕು. ಇದನ್ನು ಬಿಗಿಯಾದ ಕ್ಯಾಬಿನೆಟ್ ಒಳಗೆ ಇಡುವುದು ಕಳಪೆ ಗಾಳಿಯ ಹರಿವಿಗೆ ಕಾರಣವಾಗಬಹುದು.
5. ಬಾಗಿಲನ್ನು ಹೆಚ್ಚೊತ್ತು ತೆರೆದಿರುವುದು: ನೀವು ಈಗಾಗಲೇ ಇದರ ಬಗ್ಗೆ ತಿಳಿದಿರಬಹುದು, ಆದರೆ ರೆಫ್ರಿಜರೇಟರ್ ಹಾನಿಗೆ ಕಾರಣವಾಗುವ ಸಾಮಾನ್ಯ ಕೆಟ್ಟ ಅಭ್ಯಾಸವೆಂದರೆ ಬಾಗಿಲು ತೆರೆದಿಡುವುದು. ಇದು ಫ್ರಿಜ್‌ನ ಒಳಗಿನ ತಾಪಮಾನ ಹದಗೆಡುವಂತೆ ಮಾಡುತ್ತದೆ. ಅದ್ದರಿಂದ ಫ್ರಿಜ್‌ನಲ್ಲಿಟ್ಟ ವಸ್ತು ತೆಗೆದ ಮೇಲೆ ಬೇಗನೇ ಬಾಗಿಲನ್ನು ಮುಚ್ಚಲು ಮರೆಯದಿರಿ.