ಕಾಸರಗೋಡು: ಕೇಂದ್ರ-ರಾಜ್ಯ ಸರಕಾರಗಳ ವಿವಿಧ ಯೋಜನೆಗಳ ಸಂಯೋಜಿತ ಸಾಧ್ಯತೆಗಳನ್ನು ಸದುಪಯೋಗಪಡಿಸಿ ಎಲ್ಲ ವಲಯಗಳಲ್ಲೂ ಮಾದರಿ ರೂಪದಲ್ಲಿ ಬದಲಾವಣೆಗೆ ಸಿದ್ಧವಾಗಿರುವ ಕಾಸರಗೋಡು ಜಿಲ್ಲೆಯ ಎಣ್ಮಕಜೆ ಗ್ರಾಮ ಪಂಚಾಯತ್ ಮತ್ತು ವೆಸ್ಟ್ ಎಳೆರಿ ಗ್ರಾಮ ಪಂಚಾಯತ್ ಗಳು ಗಮನಸೆಳೆಯುತ್ತಿವೆ.
ಸಂಸತ್ ಆದರ್ಶ್ ಗ್ರಾಮ ಯೋಜನೆ ಅಂಗವಾಗಿ ಮಾದರಿ ಗ್ರಾಮಗಳಾಗಲು -ಫೇಸ್ 5 ರಲ್ಲಿ ವೆಸ್ಟ್ ಎಳೆರಿ ಮತ್ತು-ಫೇಸ್ 6ರಲ್ಲಿ ಎಣ್ಮಕಜೆ ಗ್ರಾಮ ಪಂಚಾಯತ್ ಆಯ್ಕೆಗೊಂಡಿವೆ ಮತ್ತು ಕೇಂದ್ರ ಸರಕಾರದ ಪಟ್ಟಿಯಲ್ಲಿ ಅಳವಡಗೊಳಿಸಲು ಸಂಬಂಧಪಟ್ಟವರಿಗೆ ಆದೇಶ ನೀಡಲಾಗಿದೆ ಎಂದು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ತಿಳಿಸಿದರು.
ಕೃಷಿ, ಆರೋಗ್ಯ, ಶಿಕ್ಷಣ, ಶುಚಿತ್ವ, ಪರಿಸರ, ಜನಜೀವನ ಸಹಿತ ವಿವಿಧ ವಲಯಗಳ ಮೂಲಕ ಗ್ರಾಮದ ಸಂಯೋಜಿತ ಅಭಿವೃದ್ಧಿ ಉದ್ದೇಶಿಸುವ ಸಂಸತ್ ಆದರ್ಶ್ ಗ್ರಾಮ ಯೋಜನೆ(ಸಾಗಿ) ಯಲ್ಲಿ ಅಳವಡಿಸುವ ನಿಟ್ಟಿನಲ್ಲಿ ಎಣ್ಮಕಜೆ ಮತ್ತು ವೆಸ್ಟ್ ಎಳೆರಿ ಗಳನ್ನು ಮಾದರಿ ಗ್ರಾಮಗಳಾಗಿಸಲಾಗುವುದು. ಯೋಜನೆಗೆ ಸಂಸದ ತಮ್ಮ ಕ್ಷೇತ್ರದ, ಶಾಸಕ ರಾಜ್ಯದ ತಮ್ಮ ಯಾವುದೇ ಜಿಲ್ಲೆಯನ್ನು ಗ್ರಾಮೀಣವಲಯದಿಂದ ಗ್ರಾಮ ಪಂಚಾಯತ್ ಗಳನ್ನು ದತ್ತು ಪಡೆಯಬಹುದಾಗಿದೆ.