HEALTH TIPS

ಅಪಘಾತ ಸಂತ್ರಸ್ತರ ಜೀವ ಉಳಿಸುವವರಿಗೆ ಕೇಂದ್ರದಿಂದ 'ಉತ್ತಮ ಆಪದ್ಬಾಂಧವ' ಪ್ರಶಸ್ತಿ

             ನವದೆಹಲಿ: ರಸ್ತೆ ಅಪಘಾತಗಳಲ್ಲಿ ತೊಂದರೆಗೆ ಒಳಗಾದವರಿಗೆ ತುರ್ತು ನೆರವು ನೀಡಲು ಸಾರ್ವಜನಿಕರನ್ನು ಪ್ರೇರೇಪಿಸುವ ಸಲುವಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯ ಹೊಸ ಯೋಜನೆಗೆ ಚಾಲನೆ ನೀಡಿದೆ.

             ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಿ, ಅವರ ಜೀವ ಉಳಿಸುವವರಿಗೆ ಈ ಯೋಜನೆಯಡಿ 'ಉತ್ತಮ ಆಪದ್ಬಾಂಧವ' ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

             ಈ ಯೋಜನೆ ಅ. 15ರಿಂದ ಜಾರಿಗೆ ಬರಲಿದ್ದು, 2026ರ ಮಾರ್ಚ್‌ 31ರ ವರೆಗೆ ಜಾರಿಯಲ್ಲಿರುವುದು. ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸಾರಿಗೆ ಇಲಾಖೆ ಕಾರ್ಯದರ್ಶಿಗಳಿಗೆ ಸಚಿವಾಲಯ ಈ ಸಂಬಂಧ ಪತ್ರ ಬರೆದಿದೆ.

         ರಸ್ತೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಗಾಯಾಳುಗಳನ್ನು ತ್ವರಿತವಾಗಿ ಆಸ್ಪತ್ರೆಗೆ ದಾಖಲಿಸಿ, ಅವರ ಜೀವ ಉಳಿಸುವವರಿಗೆ ₹ 5,000 ನಗದು ಬಹುಮಾನ ನೀಡಲಾಗುತ್ತದೆ.

         ಈ 'ಆಪದ್ಬಾಂಧವ'ರ ಪೈಕಿ, ಒಂದು ವರ್ಷದ ಅವಧಿಯಲ್ಲಿ ಗಮನಾರ್ಹ ಸೇವೆ ಕಾರ್ಯ ಮಾಡಿರುವ 10 ಜನರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ನೀಡಲಾಗುವುದು. ಈ ಪ್ರಶಸ್ತಿ ತಲಾ  1 ಲಕ್ಷ ನಗದು ಒಳಗೊಂಡಿರುತ್ತದೆ ಎಂದು ಸಚಿವಾಲಯ ತಿಳಿಸಿದೆ.

             ಈ ಪ್ರಶಸ್ತಿಗೆ ಆಯ್ಕೆಯಾಗುವವರಿಗೆ ನಗದು ಬಹುಮಾನ ನೀಡುವ ಸಂಬಂಧ ರಾಜ್ಯಗಳು ಹಾಗೂ            ಕೇಂದ್ರಾಡಳಿತ ಪ್ರದೇಶಗಳ ಸಾರಿಗೆ ಇಲಾಖೆಗಳಿಗೆ ಆರಂಭಿಕ ಅನುದಾನವಾಗಿ ತಲಾ ₹ 5 ಲಕ್ಷ ನೀಡಲಾಗುವುದು ಎಂದೂ ಸಚಿವಾಲಯ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries