ನವದೆಹಲಿ: ದೇಶದ ವಾಯವ್ಯ ಭಾಗದಲ್ಲಿ ಬೇಸಿಗೆ ಅವಧಿಯಲ್ಲಿ ಬೀಳುವ ಮಳೆ ಪ್ರಮಾಣ ಬುಧವಾರದಿಂದ ಕಡಿಮೆಯಾಗುತ್ತಿರುವುದು ಕಂಡು ಬಂತು.
ವಾಡಿಕೆಯಂತೆ ಸೆಪ್ಟೆಂಬರ್ 17ರಿಂದ ಬೇಸಿಗೆ ಕಾಲದ ಮಳೆ ಕ್ಷೀಣಿಸುತ್ತದೆ. ಆದರೆ, ಈ ಬಾರಿ ವಾಡಿಕೆ ದಿನಕ್ಕಿಂತ ಮೂರು ವಾರಗಳು ತಡವಾಗಿ ಮಳೆ ಬೀಳುವುದು ಕಡಿಮೆಯಾಗುತ್ತಿದೆ.
ಇದು ಕಳೆದ 60 ವರ್ಷಗಳಲ್ಲಿ ಎರಡನೇ ಬಾರಿ ಇಷ್ಟು ತಡವಾಗಿ ನೈರುತ್ಯ ಮುಂಗಾರು ಕ್ಷೀಣಿಸಲು ಆರಂಭಿಸಿದ ವಿದ್ಯಮಾನ ದಾಖಲಾದಂತಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.