ದೋಹಾ: ಇದೇ ಮೊದಲ ಬಾರಿಗೆ ಕತಾರ್ ನಾಗರಿಕರು ಶಾಸಕಾಂಗ ಮಂಡಳಿ ಆಯ್ಕೆಗಾಗಿ ಹಮ್ಮಿಕೊಳ್ಳಲಾಗಿದ್ದ ಮತದಾನದಲ್ಲಿ ಪಾಲ್ಗೊಡಿದ್ದಾರೆ. ಕತಾರ್ ಹಿಂದಿನಂದಲೂ ರಾಜನ ಆಳ್ವಿಕೆಗೆ ಒಳಪಟ್ಟಿದೆ.
ಇದೀಗ ನಡೆದಿರುವ ಮತದಾನವನ್ನು ಪ್ರಯೋಗ ಎಂದು ಕತಾರ್ ಅಧಿಕಾರಿಗಳು ಕರೆದಿದ್ದಾರೆ. 2022ರ ವಿಶ್ವಕಪ್ ಫುಟ್ ಬಾಲ್ ಆತಿಥ್ಯವನ್ನು ಕತಾರ್ ವಹಿಸಿಕೊಂಡಿದೆ. ಹೀಗಾಗಿ ರಾಜಪ್ರಭುತ್ವವನ್ನು ಹೊಂದಿರುವ ಕತಾರ್, ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರಗಳಿಂದ ಜಾಗತಿಕ ಮಟ್ಟದಲ್ಲಿ ಒತ್ತಡವನ್ನು ಎದುರಿಸುತ್ತಿದೆ.
ಜಗತ್ತಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮಾನದಂಡವನ್ನಾಗಿ ನೋಡುವ ಕಾಲದಲ್ಲಿ ಕತಾರ್ ಇನ್ನೂ ರಾಜಪ್ರಭುತ್ವ ವ್ಯವಸ್ಥೆ ಅಳವಡಿಸಿಕೊಂಡಿರುವುದಕ್ಕೆ ಹಲವು ದೇಶಗಳು ಆಕ್ಷೇಪ ವ್ಯಕ್ತಪಡಿಸಿವೆ. ಹೀಗಾಗಿ ಆ ನಿಟ್ಟಿನಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಭದ್ರತಾ ಮಂಡಳಿ ಆಯ್ಕೆಗಾಗಿ ಮತದಾನ ಹಮ್ಮಿಕೊಳ್ಳಲಾಗಿತ್ತು.