ಕಾಸರಗೋಡು: ಸಾರ್ವಜನಿಕ ವಲಯದಲ್ಲಿ ಕಾಸರಗೋಡು ಜಿಲ್ಲೆಯ ಆಕ್ಸಿಜನ್ ಪ್ಲಾಂಟ್ ನನಸಾಗುತ್ತಿದೆ.
ಚಟ್ಟಂಚಾಲಿನ ಉದ್ದಿಮೆ ಪಾರ್ಕ್ ನಲ್ಲಿ ಜಿಲ್ಲಾ ನಿರ್ಮಿತಿ ಕೇಂದ್ರದ ಮೂಲಭೂತ ನಿರ್ಮಾಣ ಹಿನ್ನೆಲೆ ಪೂರ್ಣಗೊಂಡಿದ್ದು, ಇಲ್ಲಿ ಸ್ಥಾಪಿಸಲಾಗುವ ಪ್ಲಾಂಟ್ ತಲಪಿದೆ. 1.87 ಕೋಟಿ ರೂ. ವೆಚ್ಚದಲ್ಲಿ ಪ್ಲಾಂಟನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅವರ ನೇತೃತ್ವದ ತಂಡ ವಹಿಸಿಕೊಂಡಿದೆ. ಸ್ಥಳೀಯಾಡಳಿತ ಸಂಸ್ಥೆಗಳ ಜಂಟಿ ಯೋಜನೆಯಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಪ್ಲಾಟ್ ನಿರ್ಮಾಣ ನಡೆಯಲಿದೆ. ಪ್ರತಿದಿನ 200 ಸಿಲಿಂಡರ್ ಆಕ್ಸಿಜನ್ ಉತ್ಪಾದಿಸುವ ಸಾಮಥ್ರ್ಯ ಹೊಂದಿರುವ ಪ್ಲಾಂಟ್ ಇದಾಗಿದೆ.
ಚಟ್ಟಂಚಾಲ್ ನಲ್ಲಿರುವ ಜಿಲ್ಲಾ ಪಂಚಾಯತ್ ಸ್ವಾಮ್ಯದ 50 ಸೆಂಟ್ಸ್ ಜಾಗದಲ್ಲಿ ಈ ಘಟಕದ ನಿರ್ಮಾಣವಾಗಲಿದೆ. ಕೋವಿಡ್ ನ ದ್ವಿತೀಯ ಅಲೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತಲೆದೋರಿದ್ಧ ಆಕ್ಸಿಜನ್ ಮುಗ್ಗಟ್ಟಿಗೆ ಈ ಮೂಲಕ ಶಾಶ್ವತ ಪರಿಹಾರವಾಗಲಿದೆ. ಜಿಲ್ಲೆಯಲ್ಲೇ ಒಂದು ಆಕ್ಸಿಜನ್ ಪ್ಲಾಂಟ್ ಎಂಬ ಆಶಯವನ್ನು ಜಿಲ್ಲಾಡಳಿತೆ ಜಾರಿಗೊಳಿಸುತ್ತಿದೆ. ಜಿಲ್ಲಾ ಪಂಚಾಯತ್ ಇದರ ನಿರ್ಮಾಣಕ್ಕೆ 50 ಲಕ್ಷ ರೂ. ನೀಡಿದೆ. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ಗಳು, ನಗರಸಭೆಗಳು ತಮ್ಮ ನಿಧಿ ಮೀಸಲಿರಿಸಿವೆ. ಕೇರಳದ ಹೊರ ಜಿಲ್ಲೆಗಳ ವಿವಿಧೆಡೆ ಆಕ್ಸಿಜನ್ ಪ್ಲಾಂಟ್ ನಿರ್ಮಿಸಿರುವ ಕೊಚ್ಚಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೇರ್ ಸಿಸ್ಟಂಸ್ ಕಾಸರಗೋಡಿನ ಪ್ಲಾಂಟ್ ನಿರ್ಮಾಣದ ಹೊಣೆ ಹೊಂದಿದೆ.