ಕಾಸರಗೋಡು: ಕಾಸರಗೋಡು ಜಿಲ್ಲಾ ಮಟ್ಟದ ಸಿವಿಲ್ ಸರ್ವೀಸ್ ಸೆಲೆಕ್ಷನ್ ಟ್ರಯಲ್ಸ್ ಆರಂಭಗೊಂಡಿದೆ.
ವಿದ್ಯಾನಗರದ ನಗರಸಭೆ ಕ್ರೀಡಾಂಗಣದಲ್ಲಿ ಈ ಸಂಬಂಧ ನಡೆದ ಸಮಾರಂಭದಲ್ಲಿ ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಪಿ.ಹಬೀಬ್ ರಹಮಾನ್ ಧ್ವಜಾರೋಹಣ ನಡೆಸಿ ಉದ್ಘಾಟಿಸಿದರು. ಉಪಾಧ್ಯಕ್ಷ ಪಿ.ಪಿ.ಅಶೋಕನ್ ಮಾಸ್ಟರ್, ಜಿಲ್ಲಾ ಕ್ರೀಡಾಧಿಕಾರಿ ಎಂ.ಎಸ್.ಬಾಸ್ ಉಪಸ್ಥಿತರಿದ್ದರು.
ನಂತರ ಮೊದಲ ವಿಭಾಗವಾಗಿ ಅತ್ಲೆಟಿಕ್ಸ್, ಈಜು, ಶಟಲ್ ಬಾಡ್ಮಿಂಟನ್, ಬಾಸ್ಕೆಟ್ ಬಾಲ್ ಸೆಲೆಕ್ಷನ್ ಜರುಗಿತು. ನೂರಾರು ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ದ್ವಿತೀಯ ದಿನ ಕ್ರಿಕೆಟ್, ಪವರ್ ಲಿಫ್ಟಿಂಗ್, ವೈಟ್ ಲಿಫ್ಟಿಂಗ್, ಕುಸ್ತಿ, ಚೆಸ್, ಕಬಡ್ಡಿ ವಿಭಾಗಗಳಲ್ಲಿ ಸೆಲೆಕ್ಷನ್ ನಡೆಯಲಿದೆ. ರಾಜ್ಯ ಮಟ್ಟದ ಸಿವಿಲ್ ಸರ್ವೀಸ್ ಟೂರ್ನಮೆಂಟ್ ಗೆ ಭಾಗಿಗಳಾಗಲು ಜಿಲ್ಲಾ ಮಟ್ಟದ ಸ್ಪರ್ಧಾಳುಗಳ ಸೆಲೆಕ್ಷನ್ ಟ್ರಯಲ್ಸ್ ಈ ಮೂಲಕ ಜರುಗುತ್ತಿದೆ.