ತಿರುವನಂತಪುರಂ: ಗ್ರಾಮೀಣ ಪ್ರದೇಶಗಳಲ್ಲಿ ಕೆಎಸ್‌ಆರ್‌ಟಿಸಿ ಆರಂಭಿಸುವ ಹಳ್ಳಿ ಬಂಡಿಗಳಿಗೆ ಶಾಸಕರು ಸೂಚಿಸಿದ ಸ್ಥಳಗಳಿಗೆ ಆದ್ಯತೆ ನೀಡಲಾಗುವುದು ಎಂದು ಸಾರಿಗೆ ಸಚಿವ ಆಂಟನಿ ರಾಜು ಹೇಳಿರುವರು. ಕೆಎಸ್‌ಆರ್‌ಟಿಸಿಗೆ ನಷ್ಟದಲ್ಲಿರುವ ಮಾರ್ಗಗಳಲ್ಲಿ ಬಸ್ ಸೇವೆಯನ್ನು ಆರಂಭಿಸಲು ಸಾಧ್ಯವಾಗುವುದಿಲ್ಲ. ಆದರೆ ಸಾರ್ವಜನಿಕರಿಗೆ ಪ್ರಯಾಣ ಸೌಲಭ್ಯಗಳನ್ನು ಹೆಚ್ಚಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ನೂತನ ಹಳ್ಳಿ ಬಂಡಿ ಆರಂಭಿಸಲಾಗಿದೆ.
ಹೊಸ ಯೋಜನೆಯು ಸ್ಥಳೀಯ ಸಂಸ್ಥೆಗಳು ಇಂಧನ ವೆಚ್ಚವನ್ನು ಭರಿಸಲು ಅನುವು ಮಾಡಿಕೊಡುತ್ತದೆ. ಯೋಜನೆಗೆ ಹಣ ಮಂಜೂರು ಮಾಡಲು ಹಲವು ಶಾಸಕರು ಮುಂದೆ ಬಂದಿರುವರು ಎಂದು ಅವರು ಹೇಳಿದರು.