ಕಾಸರಗೋಡು: ವಾಣಿಜ್ಯ ಶ್ರಮಿಕ್ ಸಂಘ್(ಬಿಎಂಎಸ್) ಕಾಸರಗೋಡು ಜಿಲ್ಲಾ ಮಟ್ಟದ ಚಿಂತನಾ ಬೈಠಕ್ ಕಾಸರಗೋಡು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಜರುಗಿತು. ಸಂಘಟನೆ ರಾಜ್ಯ ಸಮಿತಿ ಕಾರ್ಯದರ್ಶಿ ಸೋಮನ್ ಪಾಲಕ್ಕಾಡ್ ಉದ್ಘಾಟಿಸಿದರು. ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಬಾಬು ಕಾಞಂಗಾಡು ಅಧ್ಯಕ್ಷತೆ ವಹಿಸಿದ್ದರು.
ಬಿಎಂಎಸ್ ಜಿಲ್ಲಾ ಸಮಿತಿ ಕೋಶಾಧಿಕಾರಿ ಅನಿಲ್ ಬಿ. ನಾಯರ್, ಜಿಲ್ಲಾ ಸಮಿತಿ ಉಪಾಧ್ಯಕ್ಷೆ ಶೈಲಜಾ ಉಪಸ್ಥಿತರಿದ್ದರು. ಸಂಘಟನೆ ಜಿಲ್ಲಾ ಸಮಿತಿ ಕಾರ್ಯದರ್ಶಿ ದಿನೇಶ್ ಸ್ವಾಗತಿಸಿದರು. ಬಾಲಕೃಷ್ಣನ್ ಕಾಞಂಗಾಡು ವಂದಿಸಿದರು. ಸಂಘಟನೆ ಜಿಲ್ಲಾ ಸಮಿತಿ ಕಾರ್ಯದರ್ಶಿ ಗೋವಿಂದನ್ ಮಡಿಕೈ ಸಮಾರೋಪ ಭಾಷಣ ಮಾಡಿದರು.