ಬದಿಯಡ್ಕ: ಗಾಂಧಿ ಜಯಂತಿ ಪ್ರಯುಕ್ತ ಯುವ ಕಾಂಗ್ರೆಸ್ ರಾಜ್ಯಸಮಿತಿ ನಿರ್ದೇಶನ ಪ್ರಕಾರ ಶಾಲೆ ಪುನರಾರಂಭ ಗೊಳ್ಳುವ ಮೊದಲು ಪಂಚಾಯತ್ ವ್ಯಾಪ್ತಿಯ ಶಾಲೆಗಳನ್ನು ಶುಚಿಗೊಳಿಸುವಭಾಗವಾಗಿ ಯುವಕಾಂಗ್ರೆಸ್ ಬದಿಯಡ್ಕ ಮಂಡಲ ನೇತೃತ್ವದಲ್ಲಿ ಬದಿಯಡ್ಕ ನವಜೀವನ
ಸೆಕೆಂಡರಿ ಶಾಲೆಯಲ್ಲಿ ಶುಚಿತ್ವ ಕಾರ್ಯಕ್ರಮ ನಡೆಯಿತು.
ಕಾರಡ್ಕ ಬ್ಲಾಕ್ ಕಾಂಗ್ರೆಸ್ಸ್ ಉಪಾಧ್ಯಕ್ಷ ಕುಂಜಾರ್ ಮೊಹಮ್ಮದ್ ಹಾಜಿ ಉದ್ಘಾಟಿಸಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಶಾಫಿ ಪಯ್ಯಲಡ್ಕ, ಕಾಂಗ್ರೆಸ್ ಅಧ್ಯಾಪಕ ಸಂಘಟನೆಯ ನೇತಾರ ನಿರಂಜನ್ ರೈ ಪೆರಡಾಲ ಶುಭ ಹಾರೈಸಿದರು. ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ರವೀಂದ್ರ ಕುಂಟಾಲುಮೂಲೆ,ಉದಯ ಕುಂಟಾಲುಮೂಲೆ, ಶ್ರೀನಾಥ್ ಬದಿಯಡ್ಕ, ಸೈಫುದ್ದಿನ್ , ಹ್ಯಾರಿಸ್ ಗೋಳಿಯಡ್ಕ ನೇತೃತ್ವ ನೀಡಿದರು.