ವಾಷಿಂಗ್ಟನ್ :ಅನಿವಾಸಿ ಭಾರತೀಯ ಮಹಿಳೆ ನೀರಾ ಟಂಡನ್ ಅವರು ಶ್ವೇತಭವನದ ಸ್ಟಾಫ್ ಸೆಕ್ರೆಟರಿಯಾಗಿ ನಿಯೋಜನೆಗೊಂಡಿದ್ದಾರೆ.ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರ ಹಿರಿಯ ಸಲಹೆಗಾರರಾಗಿದ್ದ 51 ವರ್ಷದ ನೀರಾ ಅವರನ್ನು ಶ್ವೇತಭವನದ ಪ್ರಮುಖ ಹುದ್ದೆಗೆ ನಿಯೋಜನೆ ಮಾಡಲಾಗಿದೆ.
ಬೈಡೆನ್ ಅವರ ಸಲಹೆಗಾರರಾಗಿಯೂ ಮುಂದುವರೆಯಲಿರುವ ನೀರಾ ಅವರು ಶ್ವೇತಭವನದ ಆಡಳಿತದ ಮೇಲೂ ನಿಗಾ ಇಡುವ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ.
ಸ್ಟಾಫ್ ಸೆಕ್ರೆಟರಿ ಹುದ್ದೆ ಎನ್ನುವುದು ಶ್ವೇತಭವನದ ಪ್ರಮುಖ ನರ ಮಂಡಲ ಇದ್ದಹಾಗೆ. ಅಂತಹ ಹುದ್ದೆಗೆ ಎಲ್ಲಾ ರಂಗಗಳಲ್ಲೂ ಪ್ರಭುತ್ವ ಸಾಸಿದವರನೆ ನೇಮಕ ಮಾಡಬೇಕು. ಅಂತಹ ಪ್ರಮುಖ ಹುದ್ದೆ ಭಾರತೀಯ ಮೂಲದ ನೀರಾ ಅವರಿಗೆ ಒಲಿದಿರುವುದು ಭಾರತೀಯರಲ್ಲಿ ಹರ್ಷ ಮೂಡಿಸಿದೆ.