ಸ್ಟಾಕ್ ಹೋಂ: ಆರ್ಥಿಕ ವಿಜ್ಞಾನದಲ್ಲಿ 2021 ರ ನೊಬೆಲ್ ಪ್ರಶಸ್ತಿಯನ್ನು ಸೋಮವಾರ, ಅಕ್ಟೋಬರ್ ೧೧ರಂದು ಪ್ರಕಟಿಸಲಾಗಿದ್ದು, ಡೇವಿಡ್ ಕಾರ್ಡ್, ಜೋಶುವಾ ಡಿ. ಆಂಗ್ರಿಸ್ಟ್ ಮತ್ತು ಗೈಡೋ ಡಬ್ಲ್ಯೂ ಇಂಬೆನ್ಸ್ ಅವರಿಗೆ ನೀಡಲಾಯಿತು.
ಕಾರ್ಡ್ "ಕಾರ್ಮಿಕ ಅರ್ಥಶಾಸ್ತ್ರಕ್ಕೆ ಅವರ ಪ್ರಾಯೋಗಿಕ ಕೊಡುಗೆಗಳಿಗಾಗಿ" ಪ್ರಶಸ್ತಿಯನ್ನು ಪಡೆದರೆ, ಆಂಗ್ರಿಸ್ಟ್ ಮತ್ತು ಇಂಬೆನ್ಸ್ ಅವರಿಗೆ "ಕಾರಣ ಸಂಬಂಧಗಳ ವಿಶ್ಲೇಷಣೆಗೆ ನೀಡಿದ ಕ್ರಮಬದ್ಧ ಕೊಡುಗೆಗಳಿಗಾಗಿ" ನೀಡಲಾಗಿದೆ ಎಂದು ನೋಬೆಲ್ ಪ್ರಶಸ್ತಿಯ ಅಧಿಕೃತ ಖಾತೆಯಲ್ಲಿ ಉಲ್ಲೇಖಿಸಲಾಗಿದೆ.