ಮುಳ್ಳೇರಿಯ: ಒಂದೂವರೆ ವರ್ಷದ ನಂತರ ಶಾಲೆ ನವೆಂಬರ್ 1 ರಂದು ಪುನರಾರಂಭಗೊಳ್ಳುತ್ತಿದ್ದು ವಿದ್ಯಾರ್ಥಿಗಳನ್ನು ಮರಳಿ ಶಾಲೆಗಳತ್ತ ಆಕರ್ಷಿಸುವ ದೊಡ್ಡ ಜವಾಬ್ದಾರಿ ಶಾಲಾ ಅ|ಧಿಕೃತರು, ಪೋಷಕರಿಗೆ ಇದ್ದೇ ಇದೆ. ಈ ನಿಟ್ಟಿನಲ್ಲಿ ಅಡೂರು ಸರ್ಕಾರಿ ಶಾಲೆಯು ವೈತ್ಯಸ್ಥ ಚಟುವಟಿಕೆ ಮೂಲಕ ಗಮನ ಸೆಳೆಯುತ್ತಿದ್ದು ನಿಜವಾಗಿಯೂ ವಿದ್ಯಾಲಯವೊಂದು ಹೊಸ ರೂಪದಲ್ಲಿ ಸಾಕಾರತೆಯತ್ತ ಸಾಗಿದೆ.
ಶಾಲಾ ಪರಿಸರ ಸುಂದರವಾದ ಉದ್ಯಾನವನದೊಂದಿಗೆ ಮಕ್ಕಳನ್ನು ಸ್ವಾಗತಿಸುತ್ತದೆ. ಅಡೂರು ಹೈಯರ್ ಸೆಕೆಂಡರಿ ಶಾಲೆ ಶಾಲಾ ಪ್ರವೇಶ ದ್ವಾರದ ಬಳಿ ಜೀವವೈವಿಧ್ಯದಿಂದ ಕೂಡಿದ ಉದ್ಯಾನವನ್ನು ನಿರ್ಮಿಸಿದೆ. ಸಂಪಿಗೆ, ಕೇದಗೆ, ಮಂದಾರ, ವಿವಿಧ ಬಗೆಯ ದಾಸವಾಳ, ಗುಲಾಬಿ, ಮಲ್ಲಿಗೆ, ಜೊತೆಗೆ ಆರ್ಕಿಡ್ ಪುಷ್ಪಗಳಾದ ಬೋಗನ್ ವಿಲ್ಲಾ, ಹತ್ತು ಮಣಿ ಹೂವು, ಜೊತೆಗೆ ಚೆಂಡುಮಲ್ಲಿಗೆ, ಕಾಡುಗುಲಾಬಿ ಹಾಗೂ ಆಕರ್ಷಣೀಯ ಪುಟ್ಟ ಕೆರೆ, ನಳನಳಿಸುವ ತಾವರೆ, ಅರಳಿ, ಅಲೋವೆರಾ, ಕೃಷ್ಣತುಳಸಿ, ರಾಮತುಳಸಿ, ಮದರಂಗಿ ಗಿಡಗಳು, ಕರಿಬೇವಿನ ಎಲೆಗಳು ಉದ್ಯಾನವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದೆ.
ಉದ್ಯಾನದ ಮಧ್ಯದಲ್ಲಿ ಶೋಭಿಸುವ ಪುಟ್ಟ ಕೆರೆ ಬಹು ಆಕರ್ಷಣೀಯವಾಗಿ ಗಮನ ಸೆಳೆಯುತ್ತಿದೆ. ಕೊಳವು ವಿವಿಧ ಜಲಸಸ್ಯಗಳನ್ನು ಮತ್ತು ವಿವಿಧ ಬಣ್ಣಗಳ ಮೀನುಗಳಿಂದ ಕೂಡಿದೆ. ಅಮೃತ ಕೊ|ಳೆವೆಂದು ಹೆಸರಿಸಲಾದ ಈ ಕೆರೆಯ ಸುತ್ತಲೂ ಹತ್ತು ಗಂಟೆಗಳನ್ನು ಮಾಲೆಯಂತೆ ಇರಿಸಲಾಗಿದ್ದು ಬಹಳ ಕುತೂಹಲಕಾರಿಯಾಗಿದೆ. ಶಾಲೆಯ ಪ್ರಾರಂಭದೊಂದಿಗೆ, ಶಾಲೆಯ ಎಸ್‍ಪಿಸಿ, ಜೂನಿಯರ್ ರೆಡ್‍ಕ್ರಾಸ್ ಮತ್ತು ವಿವಿಧ ಕ್ಲಬ್‍ಗಳು ಶಾಲೆಯ ಸಹಯೋಗದೊಂದಿಗೆ ತಮ್ಮ ಸಂರಕ್ಷಣಾ ಚಟುವಟಿಕೆಗಳನ್ನು ಮುಂದುವರಿಸಲು ಯೋಜಿಸುತ್ತಿವೆ. ಶಾಲಾ ಪಿಟಿಎ, ಹಳೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಮಂಡಳಿ ನೇತೃತ್ವದಲ್ಲಿ ಚಟುವಟಿಕೆಗಳು ಪ್ರಗತಿಯಲ್ಲಿವೆ.