ಕೊಟ್ಟಾಯಂ: ಮೆದುಳಿನ ಮೇಲೆ ಪರಿಣಾಮ ಬೀರುವ ಅಪರೂಪದ ಮೆನಿಂಜೈಟಿಸ್ ಪ್ರಕರಣವನ್ನು ಕೊಟ್ಟಾಯಂನಲ್ಲಿ ಪತ್ತೆ ಮಾಡಲಾಗಿದೆ. ಅತಿರಂಪುಳ ಮೂಲದ 64 ವರ್ಷದ ವ್ಯಕ್ತಿಯಲ್ಲಿ ಈ ರೋಗ ಪತ್ತೆಯಾಗಿದೆ.
ಅವರು ಎಸ್‍ಎಚ್ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯಾಧಿಕಾರಿ ಸುಜಿತ್ ಚಂದ್ರನ್ ಮಾಹಿತಿ ನೀಡಿದರು. ಸಕಾಲಿಕ ಚಿಕಿತ್ಸೆ ಆತನ ಜೀವವನ್ನು ಉಳಿಸಿದೆ ಎಂದು ತಿಳಿಸಿರುವರು.
ತೀವ್ರ ತಲೆನೋವಿಗೆ ರೋಗಿಯು ಚಿಕಿತ್ಸೆ ಪಡೆಯುತ್ತಿರುವನು. ಜ್ವರವಿಲ್ಲದೆ ತಲೆನೋವಿನ ಕಾರಣವನ್ನು ಪತ್ತೆಹಚ್ಚಲು ಸಿಟಿ ಸ್ಕ್ಯಾನ್, ಎಂ.ಆರ್.ಐ. ಎ.ಆರ್.ಪಿ. ಸ್ಕ್ಯಾನ್‍ಗಳನ್ನು ನಡೆಸಲಾಯಿತು, ಆದರೆ ಯಾವುದೇ ರೋಗನಿರ್ಣಯವನ್ನು ಮಾಡಲಾಗಿಲ್ಲ.
ಬಳಿಕ ಬೆನ್ನುಮೂಳೆಯನ್ನು ಚುಚ್ಚಿ ರಸವನ್ನು ಪರೀಕ್ಷೆಗೆ ಕಳುಹಿಸಲಾಯಿತು. ಪರೀಕ್ಷೆಯಲ್ಲಿ ಇಯೊಸಿನೊಫಿಲಿಯಾ ಶೇಕಡಾ 70 ಎಂದು ತಿಳಿದುಬಂದಿದೆ. ರಸದಲ್ಲಿ ಇಯೊಸಿನೊಫಿಲಿಯಾ ಇರುವುದು ಅಪೂರ್ವ. ಬಸವನ ಹುಳದ ಕಾಟ ಅವರ ಮನೆಯಲ್ಲಿ ತೀವ್ರವಾಗಿರುವುದನ್ನೂ ಪತ್ತೆಹಚ್ಚಲಾಗಿದೆ. ಹುಳುಗಳು ಬಹುಷಃ ಇವರ ದೇಹವನ್ನು ಪ್ರವೇಶಿಸಿರಬಹುದು ಎಂದು ನಂಬಲಾಗಿದೆ. ಹೆಚ್ಚಿನ ಪರೀಕ್ಷೆಗಳಿಗಾಗಿ ರಸ ಮಾದರಿಯನ್ನು ವೆಲ್ಲೂರು ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ.
ರಾಜ್ಯದಲ್ಲಿ ಈ ಮೊದಲು ಇಬ್ಬರಲ್ಲಿ ಈ ರೋಗ ವರದಿಯಾಗಿದೆ. ಇಯೊಸಿನೊಫಿಲಿಕ್ ಮೆನಿಂಜೈಟಿಸ್ ಆಂಜಿಯೊಸ್ಟ್ರಾನ್ಜಿಲಸ್-ಕ್ಯಾಂಟೊನೆಸಿಸ್ ಎಂಬ ಜೀವಿಯಿಂದ ಉಂಟಾಗುತ್ತದೆ. ಇದು ಬಸವನ ಹುಳ ದೇಹದಲ್ಲಿ ಕಂಡುಬರುತ್ತದೆ. ಈ ಹುಳುಗಳು ಇಲಿಗಳಿಂದ ಬಸವನ ಹುಳಕ್ಕೆ ಅಂಟಿಕೊಳ್ಳುತ್ತವೆ. ಬಸವನ ಹಿಕ್ಕೆಗಳು ಮತ್ತು ಬಸವನ ಹುಳ ಇರುವ ನೀರನ್ನು ಬಳಸುವ ಜನರಲ್ಲಿ ಈ ರೋಗ ವರದಿಯಾಗಿರಬೇಕು ಎನ್ನಲಾಗುತ್ತಿದೆ. ನೀರಿನ ಮೂಲಕ ದೇಹವನ್ನು ಪ್ರವೇಶಿಸುವ ಹುಳುಗಳು ರಕ್ತಪ್ರವಾಹವನ್ನು ಪ್ರವೇಶಿಸುತ್ತವೆ ಮತ್ತು ನಂತರ ಮೆದುಳಿನ ಒಳಪದರವನ್ನು ಪ್ರವೇಶಿಸಿ ಸೋಂಕುಗಳನ್ನು ಉಂಟುಮಾಡುತ್ತವೆ.