ಪೆರ್ಲ: ಶ್ರೀ ಶಾರದ ಮರಾಠಿ ಸಮಾಜ ಸೇವಾ ಸಂಘ ಪೆರ್ಲ, ಶಾರದಾ ಮರಾಟಿ ಮಹಿಳಾ ವೇದಿಕೆ ಪೆರ್ಲ, ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ಪೆರ್ಲ ಇದರ ಆಶ್ರಯದಲ್ಲಿ ಮರಾಟಿ ಬೋರ್ಡಿಂಗ್ ಹಾಲ್ ನ 3 ನೇ ವಾರ್ಷಿಕೋತ್ಸವ ನಡೆಯಿತು.
ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್.ದೀಪ ಬೆಳಗಿಸಿ ಉದ್ಘಾಟಿಸಿದರು. ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಜಿ.ನಾಯ್ಕ ಅಧ್ಯಕ್ಷತೆ ವಹಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸೇವಾ ಸಂಘದ ಮಾಜಿ ಅಧ್ಯಕ್ಷ ರಾಮ ನಾಯ್ಕ ನಟ್ಟಿ, ಕೇರಳ ಮರಾಟಿ ಸಂರಕ್ಷಣಾ ಸಮಿತಿಯ ರಾಜ್ಯ ಅಧ್ಯಕ್ಷ ಶ್ಯಾಮ ಪ್ರಸಾದ ಮಾನ್ಯ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಜಿಲ್ಲಾ ಪಂಚಾಯತು ಅಧ್ಯಕ್ಷ ನಾರಾಯಣ ನಾಯ್ಕ ಅಡ್ಕಸ್ಥಳ ವೈದ್ಯಾದಿಕಾರಿ ಡಾ.ಜನಾರ್ಧನ ನಾಯ್ಕ, ಪುಷ್ಪ ಅಮೆಕ್ಕಳ, ವಿದ್ಯುತ್ ಇಲಾಖೆಯ ಇಂಜಿನಿಯರ್ ರಾಜಗೋಪಾಲ ನಾಯ್ಕ, ವೈದ್ಯಾಧಿಕಾರಿ ಡಾ.ನಾರಾಯಣ ನಾಯ್ಕ, ನಾರಾಯಣ ನಾಯ್ಕ ಈಳಂತೋಡಿ, ಗೋಪಿಕೃಷ್ಣ, ಪೂರ್ಣಿಮ ಪುರಂದರ ಮೊದಲಾದವರು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಎಸ್.ಎಸ್‍ಎಲ್.ಸಿಯಿಂದ ಮೇಲ್ಪಟ್ಟ ತರಗತಿಯಲ್ಲಿ ಗರಿಷ್ಠ ಅಂಕ ಗಳಿಸಿದವರಿಗೆ, ಕೋವಿಡ್ ಸೇನಾನಿಗಳಿಗೆ, ನಿವೃತ್ತ ಉದ್ಯೋಗಸ್ಥರಿಗೆ, ಸ್ಥಳೀಯಾಡಳಿತ ಚುನಾವಣೆಯಲ್ಲಿ ಗೆಲುವು ಸಾಧಿಸಿದವರನ್ನು ಗೌರವಿಸಿ ಸನ್ಮಾನಿಸಲಾಯಿತು. ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಐತ್ತಪ್ಪ ನಾಯ್ಕ ಸ್ವಾಗತಿಸಿ, ಸತೀಶ್ ಕುಮಾರ್ ಕಯ್ಯಾರು ನಿರೂಪಿಸಿದರು. ಲಕ್ಷ್ಮಿ ಟೀಚರ್ ನಲ್ಕ ವಂದಿಸಿದರು.