ಕಾಸರಗೋಡು: ವಲಿಯ ಪರಂಬ ದ್ವೀಪಕ್ಕೆ ಎರಡು ರಸ್ತೆ ಸೇತುವೆಗಳು ನಿರ್ಮಾಣಗೊಳ್ಳಲಿದ್ದು, ಇನ್ವೆಸ್ಟಿಗೇಷನ್ ಚಟುವಟಿಕೆ ಶೀಘ್ರ ಆರಂಭಗೊಳ್ಳಲಿದೆ ಎಂದು ಶಾಸಕ ಎಂ.ರಾಜಗೋಪಾಲನ್ ತಿಳಿಸಿದರು.
ಕಿಫ್ ಬಿ ಯೋಜನೆಗಳ ಅಂಗವಾಗಿ ಇವು ನಡೆಯಲಿವೆ. ವಲಿಯಪರಂಬ ಗ್ರಾಮ ಪಂಚಾಯತ್ ನ ತೂಗು ಸೇತುವೆ ಕಡಿದುಹೋಗಿರುವ ಹಿನ್ನೆಲೆಯಲ್ಲಿ ಮಾಡಕ್ಕಾಲ್ ಕಡವು, ತ್ರಿಕರಿಪುರ ಕಡಪ್ಪುರಂ ವಡಕ್ಕೇವಳಪ್ ಪ್ರದೇಶಗಳನ್ನು ಸಂಪರ್ಕಿಸುವ ಮತ್ತು ವಲಿಯಪರಂಬ ಗ್ರಾಮ ಪಂಚಾಯತ್ , ಪಡನ್ನ ಗ್ರಾಮ ಪಂಚಾಯತ್ ನ್ನು ಸಂಪರ್ಕಿಸುವ ರಸ್ತೆಗಳ ಸೇತುವೆ ನಿರ್ಮಿಸಲಾಗುವುದು.
ಯೋಜನೆ ಪ್ರದೇಶಗಳನ್ನು ಶಾಸಕ ಎಂ.ರಾಜಗೋಪಾಲನ್, ವಲಿಯಪರಂಬ ಗ್ರಾಮ ಪಂಚಾಯತ್ ಅಧ್ಯಕ್ಷ ವಿ.ವಿ.ಸಂಜೀವನ್, ಪಡನ್ನ ಗ್ರಾಮ ಪಂಚಾಯತ್ ಅಧ್ಯಕ್ಷ ಪಿ.ವಿ. ಮುಹಮ್ಮದ್ ಅಸ್ಲಾಂ, ಇತರ ಪದಾಧಿಕಾರಿಗಳು, ಇಂಜಿನಿಯರ್ ಗಳು ಮೊದಲಾದವರು ಸಂದರ್ಶಿಸಿದರು.