HEALTH TIPS

ಕೋವಿಡ್ ಮುಂಚೂಣಿಯ ಹೋರಾಟಗಾರರಿಗೆ ಗೌರವ-ಬೇಕಲ, ಕಣ್ಣೂರು ಕೋಟೆಗಳಲ್ಲಿ ದೀಪಾಲಂಕಾರ

                             

              ಕಾಸರಗೋಡು: ಕೋವಿಡ್ ಪ್ರತಿರೋಧ ಲಸಿಕೆ ಯಜ್ಞದ 100 ಕೋಟಿ ಡೋಸ್ ಚುಚ್ಚುಮದ್ದು ನೀಡಿಕೆ ನಡೆಸಿದ ಆರೋಗ್ಯ ಕಾರ್ಯಕರ್ತರಿಗೆ ಗೌರವ ಸೂಚಕವಾಗಿ ಕೇಂದ್ರ ಪ್ರಾಚ್ಯ ವಸ್ತು ಇಲಾಖೆ ವತಿಯಿಂದ ಕಾಸರಗೊಡು ಜಿಲ್ಲೆಯ ಬೇಕಲ ಕೋಟೆಯಲ್ಲಿ ದೀಪಾಲಂಕಾರ ನಡೆಸಲಾಯಿತು.

             ಈ ಸಂದರ್ಭ ತ್ರಿವರ್ಣ ಬೆಳಕು ವಿಧಾನ ಮೂಲಕ ಕೋವಿಡ್ ಪ್ರತಿರೋಧ ಮುಂಚೂಣಿ ಹೋರಾಟಗಾರರಿಗೆ ಗೌರವ ಸೂಚಿಸಲಾಯಿತು. ಯುನೆಸ್ಕೋದ ಜಾಗತಿಕ ಸಂಸ್ಕøತಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ದೇಶದ 100 ಚಾರಿತ್ರಿಕ ಸ್ಮಾರಕಗಳಲ್ಲಿ ತ್ರಿವರ್ಣ ಧ್ವಜದ ಬಣ್ಣದ ಬೆಳಕಿನ ವ್ಯವಸ್ಥೆ ನಡೆಸುವ ಮೂಲಕ ಈ ಕಾರ್ಯಕ್ರಮ ನಡೆಸಲಾಗಿದ್ದು, ಕೇರಳದಲ್ಲಿ ಕಾಸರಗೊಡು ಜಿಲ್ಲೆಯ ಬೇಕಲಕೋಟೆ, ಕಣ್ಣೂರು ಜಿಲ್ಲೆಯ ಕಣ್ಣೂರು ಕೋಟೆಗಳಲ್ಲಿ ಪ್ರವಾಸಿಗರನ್ನು ಸೆಳೆಯುವ ರೀತಿಯಲ್ಲಿ ಈ ಕಾರ್ಯಕ್ರಮಗಳು ಜರುಗಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries