ಕಾಸರಗೋಡು: ಸರ್ದಾರ್ ವಲ್ಲಭಾ ಬಾಯಿ ಪಟೇಲರ ಜನ್ಮ ಶತಾಬ್ಧಿ ಆಚರಣೆ ಅಂಗವಾಗಿ ಸಿ.ಐ.ಎಸ್.ಎಫ್. ವತಿಯಿಂದ ನಡೆಸುತ್ತಿರುವ ಅಂತಾರಾಜ್ಯ ಮಟ್ಟದ ಸೈಕಲ್ ರಾಲಿಗೆ ಕಾಸರಗೋಡಿನಲ್ಲಿ ಸ್ವಾಗತ ನೀಡಲಾಯಿತು. ತಿರುವನಂತಪುರಂ ನಿಂದ ಗುಜರಾತ್ ವರೆಗೆ ಈ ತಂಡ ಸೈಕಲ್ ರಾಲಿ ನಡೆಸುತ್ತಿದೆ. ಕಾಸರಗೋಡು ನೂತನ ಬಸ್ ನಿಲ್ದಾಣ ಬಳಿ ಈ ಸಂಬಂಧ ಜರುಗಿದ ಸಭೆಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಬಿ.ರಾಜೀವನ್ ಸ್ವಾಗತಕ್ಕೆ ನೇತೃತ್ವ ನೀಡಿದರು.