HEALTH TIPS

ತೆಂಗಿನ ನೀರಾ ಒಂದೇ ಸಾಕೆ?: ನೂರು ಉತ್ಪನ್ನಗಳು ಸಾಧ್ಯ: ?ಕೇಂದ್ರ ತೆಂಗು ಅಭಿವೃದ್ಧಿ ಮಂಡಳಿ ಸದಸ್ಯ-ಸಂಸದ, ಚಿತ್ರನಟ ಸುರೇಶ್ ಗೋಪಿ: ಎಡನೀರು ಮಠದಲ್ಲಿ ಅಭಿಮತ

           ಬದಿಯಡ್ಕ: ಕೇರಳದ ಐತಿಹಾಸಿಕ ಕೃಷಿ ಪರಂಪರೆ,ಸಂಪತ್ತನ್ನು ಮರಳಿ ಮುನ್ನೆಲೆಗೆ ತರಲು ಸ್ಥಳೀಯ ತಳಿಗಳ ತೆಂಗಿನ ಸಸಿಗಳನ್ನು ನೆಡಬೇಕು ಎಂದು ಸಂಸದ, ಚಲನಚಿತ್ರ ನಟ ಸುರೇಶ್ ಗೋಪಿ ಹೇಳಿದರು.

          ರಾಜ್ಯಾದ್ಯಂತ ತಮ್ಮ ಕನಸಿನ ಯೋಜನೆಯಾದ ಕಲ್ಪವೃಕ್ಷ ಯಜ್ಞದ ಭಾಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಚಾಲನೆಯ ಭಾಗವಾಗಿ ಸೋಮವಾರ ಶ್ರೀಮದ್ ಎಡನೀರು ಮಠದ ಆವರಣದಲ್ಲಿ ತೆಂಗಿನ ಸಸಿ ನೆಟ್ಟು ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು.


      ತೆಂಗಿನಿಂದ ನೀರ ಮಾತ್ರ ಉತ್ಪಾದಿಸುವುದು ಇಮದು ಫ್ಯಾಶನ್ ಆಗುತ್ತಿದೆ. ಆದರೆ ತೆಂಗಿನಿಂದ 100 ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಿದೆ. ಇದಕ್ಕೆ ತೆಂಗಿನ ಕೊಂಬುಗಳು ಬೇಕಾಗುತ್ತದೆ. ಅದು ಬಲಿತು ತೆಂಗು ಬೆಳೆಯುತ್ತದೆ. ಅದಕ್ಕಾಗಿಯೇ ನಾವು ಸ್ಥಳೀಯ ತೆಂಗಿನ ಸಸಿಗಳನ್ನು ನೆಡಲು ಪೆÇ್ರೀತ್ಸಾಹಿಸುತ್ತಿದ್ದೇವೆ ಎಂದು ಅವರು ಹೇಳಿದರು. ರಾಜ್ಯಾದ್ಯಂತ ಒಂದು ಕೋಟಿ ತೆಂಗಿನ ಸಸಿಗಳನ್ನು ನೆಡುವ ಲಕ್ಷ್ಯವಿರಿಸಲಾಗಿದೆ. ಎಲ್ಲರೂ ಕೈಜೋಡಿಸಿದರೆ ಅದು 3 ಕೋಟಿ 40 ಲಕ್ಷ ತಲುಪಬಹುದು. ಶಬರಿಮಲೆ ಸನ್ನಿಧಿಗೆ ತೆರಳುವವರು 18ವರ್ಷ ಪೂರ್ತಿಗೊಂಡ ನೆನಪಿಗೆ ತೆಂಗಿನ ಸಸಿ ನೆಡುವ ಸಂಪ್ರದಾಯವಿದೆ. ಸನಾತನತೆಯ ಇಂತಹ ಸಂಪ್ರದಾಯ, ವಿಶದ್ವಾಸಗಳ ಹಿಂದೆ ಪರಿಸರ ವಿಜ್ಞಾನ ಅಡಗಿದೆ. ಇತರ ವಿಶೇಷ ಸಂದರ್ಭಗಳಲ್ಲಿ ತೆಂಗಿನ ಸಸಿ ನೆಡುವ ಚಿಂತನೆ ಮೂಡಿಬರಬೇಕು. ಯೋಜನೆಯ ಭಾಗವಾಗಿ, ಕೃತಕ ವ್ಯವಸ್ಥೆಯ ಮೂಲಕ ಅಭಿವೃದ್ದಿಪಡಿಸಿದ ಸಸಿಗಳಿಗಿಂತ ಸಾಂಪ್ರದಾಯಿಕ ಗಿಡಗಳಿಗೆ ಆದ್ಯತೆ ನೀಡಬೇಕು ಎಮದವರು ಕರೆನೀಡಿದರು.


           ರೈತರನ್ನು ಶೋಷಿಸುತ್ತಿರುವ ದೊಡ್ಡ ಬಂಡವಾಳಶಾಹಿಗಳು ರೈತರ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಗೋಡಂಬಿ ಉದ್ಯಮ ಸ್ಥಗಿತಗೊಂಡಾಗ ಮುಷ್ಕರದಿಂದ ಸುಮಾರು ನಾಲ್ಕು ಲಕ್ಷ ಕುಟುಂಬಗಳು ತೊಂದರೆಗೊಳಗಾದವು. ಮಣ್ಣು ನಮ್ಮ ದೇವರು. ಯಾವುದೇ ಮರವನ್ನು ವ್ಯರ್ಥ ಮಾಡಬಾರದು. ಉತ್ತಮ ಮರಗಳನ್ನು ನೆಡಬೇಕು ಎಂದೂ ಅವರು ಹೇಳಿದರು. 

               ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಉಪಸ್ಥಿತರಿದ್ದು ಮಾತನಾಡಿ, ಭಾರತೀಯ ಪರಂಪರೆ, ಸಂಪ್ರದಾಯದಲ್ಲಿ ತೆಂಗಿಗೆ ಮಹತ್ವದ ಸ್ಥಾನವಿದೆ. ಎಲ್ಲಾ ಕರ್ಮಗಳಿಗೂ ತೆಂಗು ಬಳಕೆಯಾಗುತ್ತದೆ. ಮನೆಗಿಂತ ಮೊದಲು ತೆಂಗು ನೆಡುವ ಮೂಲಕ ಹಿಂದಿನ ಪರಂಪರೆ ನಿರ್ಮಿಸಿದ ಪರಿಸರ ಸ್ನೇಹೀ ಚಿಂತನೆ ಉದಾತ್ತವಾದುದು. ಮತ್ತೆ ಅಂತಹದೊಂದು ಚಿಂತನೆ ಸಂಸದರ ಮೂಲಕ ಪ್ರಚುರಗೊಳ್ಳುತ್ತಿರುವುದು ಸ್ತುತ್ಯರ್ಹ ಎಂದರು.

               ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಶ್ರೀಮಠದ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿದರು. ಕುಂಟಾರು ರವೀಶ ತಂತ್ರಿ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries