HEALTH TIPS

ಸಂಚಾರ ಅಯೋಗ್ಯವಾದ ಕುರುಡಪದವು ರಸ್ತೆ: ಕುಸಿಯುವ ಭೀತಿಯಲ್ಲಿ ಸೇತುವೆ


         ಉಪ್ಪಳ: ನೂರಾರು ವಾಹನಗಳು ದಿನನಿತ್ಯ ಸಂಚರಿಸುವ ಅತ್ಯಂತ ಹೆಚ್ಚು ಬಳಕೆಯ ಪೈವಳಿಕೆಯ ಲಾಲ್ ಬಾಗ್-ಕುರುಡಪದವು ರಸ್ತೆಯ ಶೋಚನೀಯಾವಸ್ಥೆಯಿಂದ ಸಂಚಾರ ಸಂಕಷ್ಟಕರವಾಗಿ ಗ್ರಾಮೀಣ ಪ್ರದೇಶದ ಸಾವಿರಾರು ಜನರು ತೊಂದರೆಗೊಳಗಾಗಿದ್ದಾರೆ. 

                 ಲಾಲ್ ಬಾಗಿನಿಂದ ಚಿಪ್ಪಾರು, ಸಿರಂತ್ತಡ್ಕ ಮೂಲಕ ಕುರುಡಪದವಿಗೆ ಸಂಚರಿಸುವ ಸುಮಾರು 9 ಕಿಲೋಮೀಟರ್ ದೂರದ ರಸ್ತೆ ಇದೀಗ ಸಂಪೂರ್ಣ ಹೊಂಡಮಯವಾಗಿದ್ದು ದಶ|ಕಗಳಿಂದ ದುರಸ್ಥಿ ಕಾಣದೆ ಸಮಸ್ಯೆ ಸೃಷ್ಟಿಯಾಗಿದೆ.


           ರಸ್ತೆಯಲ್ಲಿ ಸೃಷ್ಟಿಯಾಗಿರುವ ಬೃಹತ್ ಹೊಂಡಗಳಲ್ಲಿ ಕುಸಿದು ಹೋಗುವ ವಾಹನಗಳು ಬಾಕಿಯಾಗುತ್ತಿರುವುದು ನಿತ್ಯ ಘಟನೆಗಳಾಗಿದ್ದು, ವಾಹನಗಳು ಹಾನಿಗೊಳಗಾಗುತ್ತಿರುವುದಾಗಿಯೂ ದೂರಲಾಗಿದೆ. ರಸ್ತೆಯ ಒಂದು ಬದಿ ಇಳಿಜಾರು ಪ್ರದೇಶವಾಗಿದ್ದು, ಮತ್ತೊಂದು ಬದಿ ಗುಡ್ಡ ಪ್ರದೇಶವಾಗಿದೆ. ಅಗಲ ಕಿರಿದಾದ ಈ ರಸ್ತೆ ಈ ಕಾಲಘಟ್ಟದಲ್ಲೂ ಉನ್ನತೀಕರಣಗೊಳ್ಳದಿರುವುದು ಯಾಕೆಂಬ ಬಗ್ಗೆ ನಿಗೂಢತೆ ಇದೆ ಎನ್ನಲಾಗಿದೆ. 


          ಖಾಸಗೀ ಬಸ್ ಗಳು ಸಂಚರಿಸುವ ಈ ರಸ್ತೆಯಲ್ಲಿ ಉಪ್ಪಳದಿಂದ ಕುರುಡಪದವು ಮತ್ತು ವಿಟ್ಲದಿಂದ ಬಾಯಾರು, ಲಾಲ್ ಬಾಗ್, ಚಿಪ್ಪಾರು, ಸುಂಕದಕಟ್ಟೆ ಮೂಲಕ ಬೇಡಗುಡ್ಡೆಗೆ ಬಸ್ ಗಳು ಸಂಚರಿಸುತ್ತಿವೆ. ಜೊತೆಗೆ ನೂರಾರು ಇತರ ವಾಹನಗಳೂ ದಿನನಿತ್ಯ ಈ ರಸ್ತೆ ಮೂಲಕ ಸಂಚರಿಸುತ್ತಿದ್ದು, ಉಪ್ಪಳ, ಪೈವಳಿಕೆ, ಚಿಪ್ಪಾರು ಪ್ರದೇಶದ ಮೂಲಕ ಕರ್ನಾಟಕಕ್ಕೆ ನಕಟ ಸಂಪರ್ಕದ ರಸ್ತೆಯೂ ಇದಾಗಿದೆ. ಕುರಿಯ, ಸಾಯ, ಕುರುಡಪದವು, ಸುಂಕದಕಟ್ಟೆ, ಪೆರ್ಲ, ಕಜೆ, ಚಿಪ್ಪಾರು ಮೊದಲಾದ ಪ್ರದೇಶಗಳ ನೂರಾರು ವಿದ್ಯಾರ್ಥಿಗಳು, ಕೃಷಿಕರು, ಇತರ ಉದ್ಯೋಗಿಗಳು ಕರ್ನಾಟಕ ಸಹಿತ ವಿವಿಧೆಡೆಗಳಿಗೆ ಸಂಚರಿಸುವ ಈ ರಸ್ತೆಯ ದುರವಸ್ಥೆಯಿಂದ ಜನರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. 


               ರಸ್ತೆಯ ಇಕ್ಕೆಲಗಳಲ್ಲೂ ಕಾಡು ಪೊದೆಗಳು ಬೆಳೆದುನಿಂತಿದ್ದು ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ. ಸಂಜೆ ವೇಳೆ ಕಾಡು ಪ್ರಾಣಿಗಳೂ ಒಮ್ಮಿಂದೊಮ್ಮೆಗೆ ವಾಹನಗಳ ಎದುರಿಗೆ ದುಮುಖುತ್ತಿರುವುದು ಸಾಮಾನ್ಯ ಘಟನೆಗಳಾಗುತ್ತಿದ್ದು, ಅಪಘಾತಗಳು ಸಂಭವಿಸುತ್ತಿವೆ.ಈ ರಸ್ತೆಯಲ್ಲಿರುವ ಚಿಪ್ಪಾರು  ಸೇತುವೆ ಶೋಚನೀಯಾವಸ್ಥೆಯಲ್ಲಿದ್ದು, ಸೇತುವೆಯ ಹಳಮೆಯಿಂದ ಕುಸಿಯುವ ಭೀತಿ ಇದೆ. ಸೇತುವೆಯ ಅಡಿಭಾಗದ ಕಬ್ಬಿಣದ ಸರಳುಗಳು ಶಿಥಿಲಗೊಂಡು ಭೀತಿ ಸೃಷ್ಟಿಸಿದೆ. ಹಲವು ಬಾರಿ ಸ್ಥಳೀಯರು ಅ|ಧಿಕೃತರ ಗಮನಕ್ಕೆ ತಂದರೂ ರಸ್ತೆ ದುರಸ್ಥಿಗೊಳ್ಳದೆ  ಜನರ ಬೇಸರಕ್ಕೆ ಕಾರಣವಾಗಿದೆ. 


                    ಅಭಿಮತ: 

  1) ವಾಹನ ಮಾತ್ರವಲ್ಲದೆ ನಡೆದು ಸಾಗುವುದೂ ಇಲ್ಲಿ ಕಷ್ಟಕರವಾಗಿದೆ. ರಸ್ತೆ ಸಂಪೂರ್ಣ ಹಾನಿಗೊಂಡು ವರ್ಷಗಳೇ ಸಮದಿವೆ. ಹೊಂಡಗಳಲ್ಲಿ ಸಿಲುಕಿಕೊಳ್ಳುವ ವಾಹನಗಳಿಗೆ ಹಾನಿಯಾಗಿ ದೊಡ್ಡ ಮೊತ್ತದ |ಖರ್ಚು ಬೀಳುವ ಹಾನಿಗಳಾಗುತ್ತಿವೆ. ಇದೇ ರೀತಿ ಮುಂದುವರಿದರೆ ಬಸ್ ಸಂಚಾರ ಮೊಟಕುಗೊಳಿಸಬೇಕಾಗಬಹುದು.

                            -ಗಣೇಶ್ ಪ್ರಸಾದ್

                             ಖಾಸಗೀ ಬಸ್ ಕಂಡಕ್ಟರ್.

..............................................

  2)ಹಲವು ಕಾಲಗಳಿಂದ ದುರವಸ್ಥೆಯಲ್ಲಿರುವ ಈ ರಸ್ತೆಯ ನವೀಕರಣಕ್ಕೆ ಕಿಪ್ಬಿ ಮೂಲಕ ಯೋಜನೆ ಜಾರಿಗೊಳಿಸಬೇಕಾಗಿದೆ. ಅಂತರ್ ರಾಜ್ಯ ಸಂಪರ್ಕ ಕಲ್ಪಿಸುವ ಪ್ರಧಾನ ರಸ್ತೆಯಾಗಿದ್ದರೂ ಇನ್ನೂ ಈ ರಸ್ತೆ ಅಗಲ ಕಿರಿದಾಗಿ ಬಹಳಷ್ಟು ಹಿಂದುಳಿದಿದೆ. ಚಿಪ್ಪಾರು ಸೇತುವೆ ಕುಸಿಯುವ ಮೊದಲು ತುರ್ತು ಕ್ರಮಗಳಿಗೆ ಕೂಡಲೇ ಅಧಿಕೃತರು ಮುಂದಾಗಬೇಕು.

                                -ಅಜಿತ್ ಎಂ.ಸಿ. ಲಾಲ್ ಬಾಗ್

                           ಸಾಮಾಜಿಕ ಕಾರ್ಯಕರ್ತ.

..................................................

              3) ಲಾಲ್ ಬಾಗ್ ಕುರುಡಪದವು ರಸ್ತೆ ಅಭಿವೃದ್ದಿಗೆ ಹತ್ತು ಕೋಟಿ ರೂ.ಗಳ ಯೋಜನಾ ವೆಚ್ಚ ಅಂದಾಜಿಸಲಾಗಿದೆ.ಈ ಬಗ್ಗೆ ಸರ್ಕಾರಕ್ಕೆ ಸಮಗ್ರ ವರದಿಗಳನ್ನೊಳಗೊಂಡ ಯೋಜನಾ ವರದಿ ಸಲ್ಲಿಸಲಾಗಿದೆ. ಸರ್ಕಾರ ಮಂಜೂರಾತಿ ನೀಡುವಂತೆ ಒತ್ತಡವನ್ನೂ ಹೇರಲಾಗಿದೆ. ಮಂಜೂರಾತಿಯಾದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು.


                       -ರಾಜೀವನ್
              ಸಹಾಯಕ ಅಭಿಯಂತರ(ರೋಡ್)
               ಲೋಕೋಪಯೋಗಿ ಇಲಾಖೆ ಮಂಜೇಶ್ವರ ವಿಭಾಗ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries