ತಿರುವನಂತಪುರ : ಪಾಲಕರಿಂದ ಪ್ರತ್ಯೇಕವಾಗಿ ವಾಸ ಮಾಡಬೇಕು ಎಂದು ಪತಿಯನ್ನು ಪೀಡಿಸುವಂತ ಪತ್ನಿಗೆ ವಿಚ್ಛೇದನ ನೀಡಬಹುದು ಎಂಬುದಾಗಿ ಕೇರಳ ಹೈಕೋರ್ಟ್ ತಿಳಿಸಿದೆ.
ಕುರಿತಂತೆ ಪ್ರಕರವೊಂದರ ವಿಚಾರಣೆ ನಡೆಸಿದಂತ ಕೇರಳ ಹೈಕೋರ್ಟ್ ನ್ಯಾಯಪೀಠವು, ವೃದ್ಧ ಪಾಲಕರನ್ನು ಸಲಹುತ್ತಿರುವ ಪತಿಗೆ ಅವರನ್ನು ಬಿಟ್ಟು ಬಾ ಎಂದು ಪತ್ನಿ ಒತ್ತಾಯಿಸುತ್ತಿದ್ದರೇ, ಇದನ್ನೂ ವಿಚ್ಛೇದನಕ್ಕೆ ಕಾರಣವೆಂದು ಪರಿಗಣಿಸಬಹುದು ಎಂದು ಅಭಿಪ್ರಾಯ ಪಟ್ಟಿದೆ.
ಮುಂದುವರೆದು ಪತ್ನಿಯಿಂದ ಇಂತ ನಿರ್ದಯ ಬೇಡಿಕೆ ಬಂದರೇ, ಪತಿಗೆ ಇದು ಉಭಯ ಸಂಕಟದ ಸಂದರ್ಭವಾಗುತ್ತದೆ. ಆಗ ಆತ ಪಾಲಕರು ಅಥವಾ ಜೀವನ ಸಂಗಾತಿಯಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವ ಇಕ್ಕಟ್ಟಿಗಿ ಸಿಲುಕುತ್ತಾನೆ. ಪತಿ ಬಯಸಿದರೇ ಈ ಕಾರಣವನ್ನು ಮುಂದಿಟ್ಟುಕೊಂಡು ಪತ್ನಿಯಿಂದ ಕಾನೂನಾತ್ಮಕವಾಗಿ ಬೇರ್ಪಡಬಹುದು ಎಂದು ಹೇಳಿದೆ.