ಮುಳ್ಳೇರಿಯ: ಕಯ್ಯಾರ ಕಿಞ್ಞಣ್ಣ ರೈ ಸ್ಮಾರಕ ವಾಚನಾಲಯ ಮತ್ತು ಗ್ರಂಥಾಲಯದ ನೇತೃತ್ವದಲ್ಲಿ ಗಾಂಧಿ ಜಯಂತಿ ದಿನಾಚರಣೆಯ ಭಾಗವಾಗಿ ವಾಚನಾ ಸ್ಪರ್ಧೆ ನಡೆಸಲಾಯಿತು. ಮುಳ್ಳೇರಿಯ ಹೈಸ್ಕೂಲ್ ನಲ್ಲಿ ನಡೆದ ಕಾರ್ಯಕ್ರಮವನ್ನು ಪ್ರವೀಣ್ ಕಾರಡ್ಕ ಉದ್ಘಾಟಿಸಿದರು. ಜ್ಯೋತಿ ಕುಮಾರಿ ಪಾಣೂರು ಅವರು ಮುಖ್ಯ ಭಾಷಣ ಮಾಡಿದರು. ಡಾ.ನವೀನ್ ಕುಮಾರ್ ಕುಂಟಾರ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾರ್ಯಕ್ರಮದಲ್ಲಿ ಚಂದ್ರನ್ ಮೊಟ್ಟಮ್ಮಲ್, ಕೆ.P.É ಮೋಹನ್, ಗಾಯತ್ರಿ ಎ ಎಸ್, ಪದ್ಮನಾಭನ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಆರಿಸಿದ ಪುಸ್ತಕಗಳ ಭಾಗಗಳನ್ನು ವಾಚಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಪ್ರಾರ್ಥನಾ ವಿನೋದ್ ಅಡ್ಕ ಪ್ರಥಮ, ಐಶ್ವರ್ಯ ಎಂ ಮಿಂಚಿಪದವು ದ್ವಿತೀಯ, ಆದಿತ್ಯ ರಾಜೇಶ್ ನಾರಲಂ ತೃತೀಯ ಬಹುಮಾನ ವಿಜೇತರಾದರು. ಯಶಸ್ಸಿ ಮುಳ್ಳೆರಿಯ ಹಾಗೂ ಅರೀಝ್ ಆಯಿಷಾ ಆದೂರ್ ಪ್ರೋತ್ಸಾಹಕ ಬಹುಮಾನ ಪಡೆದರು.