HEALTH TIPS

ಜಲ ಜೀವನ ಮಿಷನ್ ದೇಶದ ಮಹಿಳೆಯರ ಸಬಲೀಕರಣಗೊಳಿಸುತ್ತಿದೆ: ಪ್ರಧಾನಿ ಮೋದಿ

             ನವದೆಹಲಿ: ಜಲ ಜೀವನ ಮಿಷನ್ ದೇಶದ ಮಹಿಳೆಯರ ಸಮಯವನ್ನು ಉಳಿಸುವ ಮೂಲಕ ಅವರ ಸಬಲೀಕರಣಕ್ಕೆ ಸಹಾಯಕವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ.

        ಜಲ ಜೀವನ ಮಿಷನ್ ಆಯಪ್ ಮತ್ತು ರಾಷ್ಟ್ರೀಯ ಜಲ ಜೀವನ ಕೋಶವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿಯವರು ಇಂದು ಬಿಡುಗಡೆ ಮಾಡಿದರು.

           ಬಳಿಕ ಮಾತನಾಡಿದ ಅವರು, ಗೌರವಾನ್ವಿತ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯಂತಹ ಮಹಾನ್ ವ್ಯಕ್ತಿಗಳ ಹೃದಯದಲ್ಲಿ ಭಾರತದ ಹಳ್ಳಿಗಳು ನೆಲೆಗೊಂಡಿದ್ದವು. ಈ ದಿನ ದೇಶಾದ್ಯಂತ ಲಕ್ಷ ಗ್ರಾಮಗಳ ಜನರು ಗ್ರಾಮ ಸಭೆಗಳ ರೂಪದಲ್ಲಿ ಜಲ ಜೀವನ ಸಂವಾದವನ್ನು ಮಾಡುತ್ತಿರುವುದು ನನಗೆ ಸಂತೋಷವಾಗಿದೆ. ಇಂತಹ ಅಭೂತಪೂರ್ವ ಮತ್ತು ರಾಷ್ಟ್ರವ್ಯಾಪಿ ಮಿಷನ್ ಅನ್ನು ಈ ಉತ್ಸಾಹ, ಶಕ್ತಿಯಿಂದ ಯಶಸ್ವಿಯಾಗಿಸಬಹುದು ಎಂದು ಹೇಳಿದರು.

         ಇದೇ ವೇಳೆ ಈ ಯೋಜನೆಗಳ ಉಪಯೋಗದ ಬಗ್ಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಗ್ರಾಮ ಪಂಚಾಯತ್​ ಮತ್ತು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿಗಳಿಗೆ ಅರಿವು ಮೂಡಿಸುತ್ತಿದ್ದಾರೆ. ಹಾಗೇ, ನಮ್ಮ ತಾಯಂದಿರು-ಸಹೋದರಿಯರಿಗೆ ಇನ್ನು ಮುಂದೆ ನೀರಿನ ವಿಚಾರದಲ್ಲಿ ತೊಂದರೆ ಆಗುವುದಿಲ್ಲ ಎಂದು ಭರವಸೆ ನೀಡಿದರು.

             ಕುಡಿಯುವ ನೀರಿಗಾಗಿ ಮಹಿಳೆಯರು ಬಹಳ ದೂರ ನಡೆದುಕೊಂಡು ಹೋಗಬೇಕಿತ್ತು. ಆದರೆ, ಮನೆಗಳ ಬಳಿ ನಲ್ಲಿಗಳನ್ನು ಸ್ಥಾಪನೆ ಮಾಡಿರುವುದರಿಂದ ಮಹಿಳೆಯರ ಸಮಯ ಉಳಿತಾಯವಾಗುತ್ತಿದ್ದು, ಇದರಿಂತ ಮಹಿಳೆಯರು ಇತರೆ ಚಟುಟಿಕೆಗಳಲ್ಲಿ ತೊಡಗಿಕೊಳ್ಳಲು ಸಹಾಯಕವಾಗಿದೆ. ಮಕ್ಕಳ ವಿದ್ಯಾಭ್ಯಾಸಗಳತ್ತ ಗಮನಹರಿಸುತ್ತಿದ್ದಾರೆ. ಜಲ ಜೀವನ ಮಿಷನ್ ಮಹಿಳೆಯರ ಸಬಲೀಕರಣಕ್ಕೆ ಸಹಾಯಕವಾಗಿದೆ ಎಂದು ತಿಳಿಸಿದ್ದಾರೆ.

              ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2019ರ ಆಗಸ್ಟ್​ 15ರಂದು ಈ ಜಲ ಜೀವನ ಮಿಷನ್​ನ್ನು ಘೋಷಿಸಿದ್ದರು. ಭಾರತದ ಪ್ರತಿಮನೆಗೂ ಶುದ್ಧ ನೀರಿನ ನಲ್ಲಿಯನ್ನು ಅಳವಡಿಸುವ ಗುರಿ ಹೊಂದಲಾಗಿದೆ. ಈ ಯೋಜನೆ ಪರಿಚಯಿಸುವ ಹೊತ್ತಿಗೆ ಅಂದರೆ 2019ರಲ್ಲಿ ಕೇವಲ 323.23 ಕೋಟಿ ಮನೆಗಳು (ಶೇ.17) ಮಾತ್ರ ನಲ್ಲಿನೀರಿನ ಸೌಲಭ್ಯ ಹೊಂದಿದ್ದವು. ಆದರೆ ಕಳೆದ ಎರಡು ವರ್ಷಗಳಲ್ಲಿ 5 ಕೋಟಿಗೂ ಅಧಿಕ ಮನೆಗಳಿಗೆ ಶುದ್ಧ ನಲ್ಲಿ ನೀರಿನ ಸೌಲಭ್ಯ ಒದಗಿಸಲಾಗಿದೆ.

         ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆಯೂ ಯಶಸ್ವಿಯಾಗಿ ಯೋಜನೆಯನ್ನು ಮುನ್ನಡೆಸಲಾಗಿದೆ. ಇದೀಗ ಜಲಜೀವನ ಮಿಷನ್​ ಮೊಬೈಲ್ ಆಯಪ್​ ಕೂಡ ಬಿಡುಗಡೆ ಮಾಡಿದ್ದಾರೆ. ಅಂದಹಾಗೆ ಈ ಯೋಜನೆಗಾಗಿ ಕೇಂದ್ರ ಸರ್ಕಾರ 3.60 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಿದೆ.

ರಾಷ್ಟ್ರೀಯ ಜಲ ಜೀವನ ಕೋಶ್​ ಯೋಜನೆಯಡಿ ಗ್ರಾಮೀಣ ಪ್ರದೇಶಗಳ ಮನೆಗಳು, ಶಾಲೆ, ಅಂಗನವಾಡಿ ಕೇಂದ್ರಗಳಿಗೆ ನೀರಿನ ಪೂರೈಕೆ ಮಾಡುವ ಮಹದುದ್ದೇಶ ಹೊಂದಲಾಗಿದೆ. ಹಾಗೆಯೇ ನಲ್ಲಿಗಳನ್ನು ಅಳವಡಿಸಲಾಗುವುದು ಎಂದು ಈಗಾಗಲೇ ಪ್ರಧಾನಮಂತ್ರಿ ಕಚೇರಿ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries