ತಿರುವನಂತಪುರ: ಕೊಲೆಗಡುಕರು ಸುಳಿವೇ ಸಿಗದಂತೆ ಹತ್ಯೆ ಮಾಡಲು ನಾನಾ ಅಡ್ಡದಾರಿ ಕಂಡುಕೊಳ್ಳುತ್ತಾರೆ. ಅಂಥವರ ಪೈಕಿ ಇಲ್ಲೊಬ್ಬ ಕೊಲೆ ಮಾಡಿದ್ದು ಸುಲಭದಲ್ಲಿ ಗೊತ್ತಾಗಬಾರದು ಎಂಬ ಅಂದಾಜಿನಲ್ಲಿ ಹೆಂಡತಿಯನ್ನು ಹಾವಿನಿಂದ ಕಚ್ಚಿಸಿ ಸಾಯಿಸಿದ್ದಾನೆ.
ಹೀಗೆ ಅತ್ಯಂತ ವಿಚಿತ್ರ ರೀತಿಯಲ್ಲಿ ಹೆಂಡತಿಯನ್ನು ಕೊಲೆ ಮಾಡಿದ್ದ ವ್ಯಕ್ತಿಯ ಅಪರಾಧ ಕೊನೆಗೂ ಸಾಬೀತಾಗಿದ್ದು, ನ್ಯಾಯಾಲಯ ಬುಧವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ. ಕೊಲ್ಲಮ್ನ ಹೆಚ್ಚುವರಿ ಸೆಷನ್ಸ್ ಕೋರ್ಟ್ ಈ ತೀರ್ಪನ್ನು ಪ್ರಕಟಿಸಿದೆ. ಈ ಪ್ರಕರಣದಲ್ಲಿ ಸೂರಜ್ ಎಂಬಾತನೇ ಅಪರಾಧಿಯಾಗಿದ್ದು, ಆತ ಪತ್ನಿ ಉತ್ತರಾಳನ್ನು ಕೊಲೆ ಮಾಡಿದ್ದ.
2020ರ ಮೇ 7ರಂದು ಈ ಕೊಲೆ ನಡೆದಿದ್ದು. ಕೇರಳದ ಕೊಲ್ಲಮ್ನ ಅಂಚಲ್ ಎಂಬಲ್ಲಿನ ಮನೆಯಲ್ಲಿ ಈ ಕೊಲೆ ಮಾಡಲಾಗಿತ್ತು. ಅಷ್ಟಕ್ಕೂ ಆರ್ಥಿಕ ಲಾಭಕ್ಕಾಗಿಯೇ ಮದುವೆಯಾಗಿದ್ದ ಸೂರಜ್, ಹಾವಿನಿಂದ ಕಚ್ಚಿಸಿ ಸಾಯಿಸಿದರೆ ಇದು ಕೊಲೆ ಎಂಬ ಅನುಮಾನ ಬರುವುದಿಲ್ಲ ಎಂದು ಪತಿ ಹೀಗೆ ಮಾಡಿಸಿದ್ದ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಗೆ ಇಳಿದಿದ್ದು, ಅದಾಗಿ 82ನೇ ದಿನಕ್ಕೆ ಪ್ರಕರಣವನ್ನು ಭೇದಿಸಿದ ಪೊಲೀಸರು ಸೂರಜ್ನನ್ನು ಬಂಧಿಸಿದ್ದರು. ಈ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ಆರೋಪವನ್ನು ಸಾಬೀತುಪಡಿಸಿಕೊಂಡು ಅಪರಾಧಿ ಎಂದು ಘೋಷಿಸಿದೆ.