ತಿರುವನಂತಪುರಂ: ಕೂಟಿಕಲ್‌ನಲ್ಲಿ ಭೂಕುಸಿತ ಸಂಭವಿಸಿದ ಪ್ರದೇಶವನ್ನು ಗಾಡ್ಗಿಲ್ ಸಮಿತಿಯು ಪರಿಸರಕ್ಕೆ ಹಾನಿಕಾರಕ ಪ್ರದೇಶವೆಂದು ಗುರುತಿಸಿತ್ತು. ರಾಕ್ ಬ್ಲಾಸ್ಟಿಂಗ್ ( ಬಂಡೆ ಒಡೆಯುವಿಕೆ-ಘನಿಗಾರಿಕೆ) ಮತ್ತು ನಿರ್ಮಾಣವನ್ನು ಸಂಪೂರ್ಣವಾಗಿ ನಿಷೇಧಿಸಬೇಕಾದ ಪ್ರದೇಶಗಳ ಹೆಸರುಗಳನ್ನು ಈ ಹಿಂದೆಯೇ ಗಾಡ್ಗೀಲ್ ತಮ್ಮ ವರದಿಯಲ್ಲಿ ಸೇರಿಸಿದ್ದರು. ವಲೆಂತಾ, ಎಲಂಗಡ್ ಮತ್ತು ಈ ಪ್ರದೇಶದ ಸುತ್ತುಮುತ್ತಲು ರಾಕ್ ಬ್ಲಾಸ್ಟಿಂಗ್ ವ್ಯಾಪಕವಾಗಿ ಹರಡಿದೆ. ಇದು ನಿಖರವಾಗಿ ಭೂಕುಸಿತಕ್ಕೆ ಕಾರಣವಾಗುವುದೆಂದು ಗಾಡ್ಗಿಲ್ ವರದಿಯಿಂದ ಸ್ಪಷ್ಟಪಡಿಸಿತ್ತು.
ಕೂಟ್ಟಿಕ್ಕಲ್, ಪ್ಲಾಪಲ್ಲಿ ಮತ್ತು ಪಾವಲಿಯಲ್ಲಿ ಶನಿವಾರ ಭೂಕುಸಿತ ಸಂಭವಿಸಿದೆ. ಮೊದಲ ಭೂಕುಸಿತದಲ್ಲಿ ಹೆಚ್ಚಿನ ಜನರು ನಾಪತ್ತೆಯಾಗಿದ್ದಾರೆ. ಅನಿಯಂತ್ರಿತ ಪ್ರವಾಹ ಮತ್ತು ಮಣ್ಣು ಕುಸಿತದಿಂದ ರಸ್ತೆಗಳು ಕೊಚ್ಚಿಹೋಗಿವೆ. ಭೂಕುಸಿತದ ಸ್ಥಳದಿಂದ ಈಗಾಗಲೇ ಎಂಟು ಜನರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಈ ಪ್ರದೇಶದಲ್ಲಿ ನಾಪತ್ತೆಯಾದ ನಾಲ್ವರಿಗಾಗಿ ಶೋಧ ಮುಂದುವರಿದಿದೆ.
ಪ್ರತಿ ಬಾರಿ ರಾಜ್ಯದಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗ, ಮೌಲ್ಯಮಾಪನಗಳು ಮತ್ತು ಅವಲೋಕನಗಳು ಅಂತಿಮವಾಗಿ ಗಾಡ್ಗಿಲ್ ಸಮಿತಿಯಿಂದ ಸಲ್ಲಿಸಿದ ವರದಿಯನ್ನು ಸೂಚಿಸುತ್ತವೆ. ಗಾಡ್ಗಿಲ್ ವರದಿಯಲ್ಲಿ ಉಲ್ಲೇಖಿಸಲಾಗಿರುವ ಪರಿಸರ ಸೂಕ್ಷ್ಮ ಪ್ರದೇಶಗಳ ಪಟ್ಟಿಯನ್ನು ರಾಜ್ಯದಲ್ಲಿ ಈ ಹಿಂದೆ ಕವಲಪ್ಪಾರ ಮತ್ತು ಪುತ್ತುಮಲೈ ಭೂಕುಸಿತದ ಸಂದರ್ಭದಲ್ಲಿ ಮತ್ತು ಭಾರೀ ಮಳೆಯಿಂದಾಗಿ ಭೂಕುಸಿತಗಳು ವ್ಯಾಪಕವಾಗಿ ಹರಡಿದಾಗ ಚರ್ಚಿಸಲಾಗುತ್ತದೆ. ಆ ಬಳಿಕ ಅದರ ಗೋಜಿಗೆ ಯಾರೂ ತಲೆಹಾಕುತ್ತಿಲ್ಲ.