ಕಾಸರಗೋಡು: ನವರಾತ್ರಿ ಉತ್ಸವಗಳನ್ನು ಕೋವಿಡ್ ಮಾನದಂಡದೊಂದಿಗೆ ಕ್ಷೇತ್ರದೊಳಗೆ ಮಾತ್ರ ಆಚರಿಸಲು ಅನುಮತಿ ನೀಡುವ ಬಗ್ಗೆ ಜಿಲ್ಲಾ ಕರೊನಾ ಕೋರ್ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜಿಲ್ಲೆಯ ಪ್ರತಿಷ್ಠಿತ ಶಕ್ತಿ ಕ್ಷೇತ್ರಗಳಲ್ಲಿ ಒಂದಾದ ಕೊರಕ್ಕೋಡು ಶ್ರೀ ಆರ್ಯಕತ್ರ್ಯಾಯಿನಿ ಮಹಾದೇವಿ ದೇವಸ್ಥಾನದಲ್ಲಿ ಅ. 7ರಿಂದ 15ರ ವರೆಗೆ ನಡೆಯಲಿರುವ ನವರಾತ್ರಿ ಮಹೋತ್ಸವಕ್ಕೆ ಅನುಮತಿ ಮಂಜೂರುಗೊಳಿಸುವ ಬಗ್ಗೆ ಸಲ್ಲಿಸಿದ ಮನವಿ ಪರಿಗಣಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್‍ವೀರ್‍ಚಂದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯಲ್ಲಿ ಶೇ. 90ರಷ್ಟು ವ್ಯಾಕ್ಸಿನೇಶನ್ ಪೂರ್ತಿಗೊಂಡಿದ್ದು, ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳಲು ಹಿಂದೇಟುಹಾಕುವವರಲ್ಲಿ ಜಾಗೃತಿ ಮೂಡಿಸಲಾಗುವುದು. ಅಪರ ಜಿಲ್ಲಾಧಿಕಾರಿ ಡಿ.ಎಸ್. ಮೇಘಶ್ರೀ, ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಎ.ಕೆ ರಮೇಂದ್ರನ್, ಪ್ರಭಾರ ಜಿಲ್ಲಾ ವೈದ್ಯಾಧಿಕಾರಿ ಡಾ. ಮೋಹನನ್ ಉಪಸ್ಥಿತರಿದ್ದರು.