ತಿರುವನಂತಪುರಂ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಪರಿಹಾರ ಮೊತ್ತವನ್ನು ಕೇಂದ್ರವು ಕೇರಳಕ್ಕೆ ಭಾರಿ ಮೊತ್ತವನ್ನು ನೀಡಲು ಬಾಕಿಯಿದೆ ಎಂದು ರಾಜ್ಯ ಹಣಕಾಸು ಸಚಿವ ಕೆಎನ್ ಬಾಲಗೋಪಾಲ್ ಹೇಳಿರುವರು.
ಹಣಕಾಸು ಸಚಿವರ ಪ್ರಕಾರ, ಕೇಂದ್ರವು 2020-21ರ ಆರ್ಥಿಕ ವರ್ಷದಲ್ಲಿ ಕೇರಳಕ್ಕೆ 1,473.34 ಕೋಟಿ ಮತ್ತು 2021-22ರ ಆರ್ಥಿಕ ವರ್ಷದಲ್ಲಿ (ಆಗಸ್ಟ್ ವರೆಗೆ) 2,921.84 ಕೋಟಿ ರೂ. ನೀಡಲು ಬಾಕಿಯಿದೆ. ಕೇರಳ ವಿಧಾನಸಭೆಗೆ ಸಚಿವರು ನಿನ್ನೆ ಲಿಖಿತ ರೂಪದಲ್ಲಿ ಈ ಮಾಹಿತಿ ನೀಡಿರುವರು.
2020-21ರ ಅವಧಿಯಲ್ಲಿ, ರಾಜ್ಯವು 12,144.85 ಕೋಟಿ ಜಿಎಸ್ಟಿ ಪರಿಹಾರವನ್ನು ಪಡೆಯಲು ಅರ್ಹವಾಗಿತ್ತು. ಆದರೆ ಆ ವರ್ಷ ರಾಜ್ಯಕ್ಕೆ ಸಿಕ್ಕಿದ್ದು ಕೇವಲ 10,671.51 ಕೋಟಿ ರೂ. 2021-22 (ಆಗಸ್ಟ್ ವರೆಗೆ) ಅವಧಿಯಲ್ಲಿ, ರಾಜ್ಯವು 7,044.11 ಕೋಟಿಗಳಿಗೆ ಅರ್ಹವಾಗಿತ್ತು, ಅದರಲ್ಲಿ 4,122.27 ಕೋಟಿಗಳನ್ನು ಸ್ವೀಕರಿಸಲಾಗಿದೆ. ಬಾಕಿ ಹಣವನ್ನು ಇನ್ನೂ ಸ್ವೀಕರಿಸಿಲ್ಲ ಎಮದು ಸಚಿವರು ತಿಳಿಸಿರುವರು.
ಜಿಎಸ್‍ಟಿ ಜಾರಿಗೆ ಬಂದ ಬಳಿಕ, 2019-20ರ ವರ್ಷದಲ್ಲಿ ಮಾತ್ರ ರಾಜ್ಯವು ಜಿಎಸ್‍ಟಿ ಪರಿಹಾರದ ಮೂಲಕ ಹೆಚ್ಚುವರಿ ಮೊತ್ತವನ್ನು ಪಡೆಯಿತು. ಆ ವರ್ಷ ರಾಜ್ಯಕ್ಕೆ ಹೆಚ್ಚುವರಿಯಾಗಿ 11.4 ಕೋಟಿ ರೂ. ಲಭ್ಯಗೊಂಡಿದೆ. ಅಂದಾಜಿನ ಪ್ರಕಾರ, ರಾಜ್ಯವು 2017-18ರಲ್ಲಿ ರೂ 2,102 ಕೋಟಿ, 2018-19ರಲ್ಲಿ ರೂ 3,532 ಕೋಟಿ, 2019-20ರಲ್ಲಿ ರೂ 8,111 ಕೋಟಿ, 2020-21ರಲ್ಲಿ ರೂ 10,671.51 ಕೋಟಿ ಮತ್ತು ಆಗಸ್ ್ಟ ವರೆಗೆ ರೂ 4,122.27 ಕೋಟಿ ಜಿಎಸ್ಟಿ ಪರಿಹಾರವನ್ನು ಪಡೆದಿದೆ.