HEALTH TIPS

ಅಗಲಿದ ಪುನೀತ್ ರಾಜ್ ಗೆ ಕುಂಬಳೆಯಲ್ಲಿ ಶ್ರದ್ದಾಂಜಲಿ: ಸ್ಪಂದನ ಹಾಗೂ ಶಂಕರನಾಗ್ ಅಭಿಮಾನಿಗಳಿಂದ ಆಯೋಜನೆ:ಅಳಿಸಲಾರದ ವ್ಯಕ್ತಿತ್ವ ನಿರ್ಮಾಣ ಸುಲಭವಲ್ಲ: ಶಾಸಕ ಎಕೆಎಂ

              ಕುಂಬಳೆ: ಅಭಿನಯ, ಸಜ್ಜನಿಕೆ ಮತ್ತು ಸೇವಾ ತತ್ಪರ ಹೃದಯ ವಿಶಾಲತೆಯ ಮೂಲಕ ಎಲ್ಲರಿಗೂ ಮಾದರಿಯಾಗಿದ್ದ ಪುನೀತ್ ರಾಜ್ ಅವರ ಅನಿರೀಕ್ಷಿತ ಕಣ್ಮರೆ ತೀರ್ವ ಆಘಾತಕಾರಿ.ಬಾಲ್ಯದಿಂದಲೇ ಗಮನಾರ್ಹ ಪಾತ್ರಗಳ ಮೂಲಕ ಮನಸೂರೆಗೊಂಡಿದ್ದ ಪುನೀತ್ ಅವರು ಬಿಟ್ಟುಹೋಗಿರುವ ನೆನಪುಗಳು ಚಿರಸ್ಥಾಯಿ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅವರು ತಿಳಿಸಿದರು.
            ಸ್ಪಂದನ ಕುಂಬಳೆ ಮತ್ತು ಶಂಕರ್ ನಾಗ್ ಅಭಿಮಾನಿ ಬಳಗ ಕುಂಬಳೆ ಇದರ ನೇತೃತ್ವದಲ್ಲಿ ಅಗಲಿದ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಅವರಿಗೆ ಶನಿವಾರ ಸಂಜೆ ಕುಂಬಳೆ ಪೇಟೆಯಲ್ಲಿ ಆಯೋಜಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.



            ಅಳಿಸಲಾರದ ವ್ಯಕ್ತಿತ್ವ ನಿರ್ಮಾಣ ಸುಲಭವಲ್ಲ. ಚಾರಿತ್ರ್ಯವನ್ನು ಕಾಪಿಟ್ಟು, ಅಜಾತಶತ್ರುವಾಗಿ ನಟನಾ ಕೌಶಲ್ಯದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಪುನೀತ್ ರಾಜ್ ಅವರ ಕೊಡುಗೆಗಳ ಬಗ್ಗೆ ನೆನಪಿಸಿದ ಶಾಸಕರು ವಿವಿಧ ಕನ್ನಡ ಚಿತ್ರಗಳಲ್ಲಿನ ಮನೋಜ್ಞ ಅಭಿನಯ, ಸಂದೇಶಗಳ  ಬಗ್ಗೆ ಉಲ್ಲೇಖಿಸಿದರು.
            ಸ್ಪಂದನದ ಅಧ್ಯಕ್ಷ ನ್ಯಾಯವಾದಿ ಉದಯಕುಮಾರ್ ಆರ್.ಅಧ್ಯಕ್ಷತೆ ವಹಿಸಿ ಮಾತನಾಡಿ, ಮೇರು ವ್ಯಕ್ತಿತ್ವದ ಪುನೀತ್ ರಾಜ್ ಸರಳ ಸಜ್ಜನರಾಗಿ ಎಲ್ಲರ ಪ್ರೀತಿಗೆ ಪಾತ್ರರಾದವರು. ಸಿನಿಮಾದಲ್ಲಷ್ಟೇ ಅಲ್ಲದೆ ಎಲ್ಲಾ ಕ್ಷೇತ್ರಗಳಲ್ಲೂ ಎಲ್ಲರಿಗೂ ಮಾದರಿಯಾದವರು ಎಂದು ತಿಳಿಸಿದರು. ಅವರ ಅನಿರೀಕ್ಷಿತ ಅಗಲುವಿಕೆಯಿಂದ ಅವರು ಬಿಟ್ಟುಹೋದ ನೆನಪುಗಳೊಂದಿಗೆ ತೋರಿಸಿಕೊಟ್ಟ ಮಾರ್ಗದರ್ಶಿ ವ್ಯಕ್ತಿತ್ವದ ಅನುಸರಣೆಯೊಂದಿಗೆ ಮುಂದುವರಿಯೋಣ ಎಂದರು.

       ಉಪಸ್ಥಿತರಿದ್ದು ಮಾತನಾಡಿದ ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಅವರು, ವ್ಯೆದ್ಯನಿಗಿಂತಲೂ ಮಿಗಿಲಾದ ಶಕ್ತಿ ಸಮಾಜದ ವ್ಯಾದಿ ಚಿಕಿತ್ಸೆಯಲ್ಲಿ ಕಲಾವಿದನಿಗಿರುತ್ತದೆ.ಪುನೀತ್ ರಾಜ್ ಅವರು ಅಂತಹ ವ್ಯಕ್ತಿತ್ವ,ಅಭಿನಯ, ಸೇವೆಗಳ ಮೂಲಕ ಮಾದರಿಯಾದವರು ಎಂದರು.

       ಸ್ಪಂದನದ ಗೌರವಾಧ್ಯಕ್ಷ ಲಕ್ಷ್ಮಣ ಪ್ರಭು ಕುಂಬಳೆ,ಕೃಷ್ಣ ಗಟ್ಟಿ, ಪತ್ರಕರ್ತ ಪುರುಷೋತ್ತಮ ಭಟ್,ಸಾಮಾಜಿಕ ನೇತಾರ ರವಿ ಪೂಜಾರಿ, ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯ ವಿಜಯನ್ ಮಾಸ್ತರ್, ಮಹಮ್ಮದ್ ಕುಂಞಿ ಭಾವ ನಮನ ಸಲ್ಲಿಸಿದರು.
 ಪುನೀತ್ ರಾಜಕುಮಾರ ನೆಚ್ಚಿನ ಹಾಡನ್ನು ಅಭಿಮಾನಿ ಆಕಾಶ್ ಹಾಡಿದರು. ಸ್ಪಂದನದ ಕಾರ್ಯದರ್ಶಿ
 ಪೃಥ್ವಿರಾಜ್ ಶೆಟ್ಟಿ ಕುಂಬಳೆ ಸ್ವಾಗತಿಸಿ  ಕಾರ್ಯಕ್ರಮ ನಿರ್ವಹಿಸಿದರು. ಕೃಷ್ಣಗಟ್ಟಿ ಚಿರಂಜೀವಿ ಕುಂಬಳೆ ವಂದಿಸಿದರು. ಜಯಪ್ರಕಾಶ್ ಶೆಟ್ಟಿ ನಾರಾಯಣ ಮಂಗಲ, ಸತೀಶ್ ಕುಮಾರ್ ಕುಂಬಳೆ, ಸತೀಶ್ ಶೆಟ್ಟಿ ಬಂಬ್ರಾಣ, ಪ್ರಸನ್ನ ಸುವರ್ಣ, ಅರುಣ್ ಗಟ್ಟಿ, ರಘುರಾಮ್ ಚತ್ರಂಪಳ್ಳ, ಪ್ರಶಾಂತ್ ಗಟ್ಟಿ, ಚರಣ್ ರಾಜ್,ಉಮೇಶ್ ಚೌಟ ಸಹಕರಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries