ಕಾಸರಗೋಡು: ಕಾಸರಗೋಡು ಜಿಲ್ಲೆಯ ಕಂಟೈನ್ಮೆಂಟ್ ಝೋನ್, ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳಲ್ಲಿ ಸೆಕ್ಟರ್ ಮೆಜಿಸ್ಟ್ರೇಟ್ ಗಳ ಚಟುವಟಿಕೆ ಮುಂದುವರಿಸಲು ಮತ್ತು ಪೆÇಲೀಸರ ನಿಗಾ ಬಿಗಿಗೊಳಿಸಲು ತೀರ್ಮಾನಿಸಲಾಗಿದೆ.
ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು.
ಶಾಲೆಗಳ ಚಟುವಟಿಕೆ ಆರಂಭಕ್ಕೆ ಮುನ್ನ ಸರಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಮುಂಜಾಗರೂಕತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆದೇಶಿಸಿದರು. ವಿಶೇಷಚೇತನರ ಮತ್ತು ಪರಿಶಿಷ್ಟ ಪಂಗಡ ಜನಾಂಗದವರ ವಾಕ್ಸಿನೇಷನ್ ಪ್ರಕ್ರಿಯೆ ಪೂರ್ತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ವೆಳ್ಳಿಕೋತ್ ಇನ್ಸ್ ಸ್ಟಿಟ್ಯೂಟ್ ನಲ್ಲಿ ಕೋವಿಡ್ ಕಟ್ಟುನಿಟ್ಟುಗಳನ್ನು ಪಾಲಿಸಿ ತರಬೇತಿಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ. ಸಮಾಜನೀತಿ ಇಲಾಖೆ ಸ್ಥಳೀಯಾಡಳಿತ ಸಂಸ್ಥೆಗಳೊಂದಿಗೆ ಸಹಕರಿಸಿ ಜಾರಿಗೊಳಿಸುವ ಸ್ವಯಂ ಪ್ರಭಾ ಹೋಂ ವಯೋವೃದ್ಧ ಕೇಂದ್ರಗಳಲ್ಲಿ ವೃದ್ಧರ ಪ್ರವೇಶಾತಿ ನಡೆಸಲಾಗುವುದು. ಸಿ.ಎಫ್.ಎಲ್.ಟಿ.ಸಿ./ ಡೋಮಿಸಿಲಿಯರಿ ಕೇರ್ ಸೆಂಟರ್ ಗಳಾಗಿ ಚಟುವಟಿಕೆ ನಡೆಸುತ್ತಿರುವ ಗುರುವನಂ ಕಾಞಂಗಾಡ್, ಅಸಾಪ್ ಗಳ ರೋಗಿಗಳನ್ನು ಇತರ ಆಸ್ಪತ್ರೆಗಳಿಗೆ ವರ್ಗಾಯಿಸಲಾಗುವುದು ಎಂದು ತಿಳಿಸಲಾಗಿದೆ.