ತಿರುವನಂತಪುರಂ: ಯಾವುದೇ ಪಡಿತರ ಚೀಟಿಯಲ್ಲಿ ಹೆಸರಿಲ್ಲದ ಆಧಾರ್ ಕಾರ್ಡ್ ಹೊಂದಿರುವವರಿಗೆ ಪಡಿತರ ಚೀಟಿ ನೀಡಲಾಗುವುದು ಎಂದು ಆಹಾರ ಸಚಿವ ಜಿಆರ್ ಅನಿಲ್ ಹೇಳಿದ್ದಾರೆ. ವಿಕಲಚೇತನ ಸದಸ್ಯರನ್ನು ಹೊಂದಿರುವ ಕುಟುಂಬಗಳನ್ನು ಆದ್ಯತಾ ಪಟ್ಟಿಯಲ್ಲಿ ಸೇರಿಸುವುದು ಪರಿಗಣನೆಯಲ್ಲಿದೆ ಎಂದು ಸಚಿವರು ವಿಧಾನಸಭೆಗೆ ಮಾಹಿತಿ ನೀಡಿದರು.
ಪಡಿತರ ಚೀಟಿ ಆದ್ಯತೆಯ ಮಿತಿಯನ್ನು ಹೆಚ್ಚಿಸಲು ಸಾಧ್ಯವಿಲ್ಲ. ಕೇರಳದ ಬೇಡಿಕೆಯನ್ನು ಕೇಂದ್ರ ಒಪ್ಪಿಕೊಂಡಿಲ್ಲ ಎಂದು ಅವರು ಹೇಳಿದರು. ಪಡಿತರ ಅಂಗಡಿಗಳಲ್ಲಿ ಸಿಸಿಟಿವಿ ಅಳವಡಿಸಲಾಗುವುದು. ಓಣಂ ಕಿಟ್‍ನಲ್ಲಿ ಏಲಕ್ಕಿ ಹಗರಣದ ಆರೋಪವನ್ನು ಆಹಾರ ಸಚಿವರು ನಿರಾಕರಿಸಿದರು. ಕಿಟ್ ವಿತರಣೆ ಸಂಬಂಧ ಮುಂದುವರಿಯಲಿದೆಯೇ, ಇಲ್ಲವೇ ಎಮದು ನಿರ್ಧರಿಸಿಲ್ಲ ಎಂದು ಆಹಾರ ಸಚಿವರು ಹೇಳಿದರು.