HEALTH TIPS

ಗೂಗಲ್​ ಮ್ಯಾಪ್​ ನೆರವಿನಿಂದ ಗುರಿ ಮುಟ್ಟಲು ಹೊರಟ ಲಾರಿಗಳಿಗೆ ಮಾರ್ಗ ಮಧ್ಯೆ ಕಾದಿತ್ತು ಶಾಕ್​​..!

                 ಅಗಲಿ: ಯಾವುದಾದರೂ ಸ್ಥಳಕ್ಕೆ ಹೋಗಬೇಕಾದಾಗ, ಯಾವುದಾದರೂ ಸ್ಥಳವನ್ನು ನೋಡಿ ತಿಳಿಯಬೇಕಾದಾಗ ಸಾಮಾನ್ಯವಾಗಿ ನಾವೆಲ್ಲ ಒಂದಲ್ಲ ಒಂದು ಸಲ ಗೂಗಲ್ ಮ್ಯಾಪ್​, ಗೂಗಲ್​ ಸರ್ಚ್​ನ ಮೊರೆ ಹೋಗಿರುತ್ತೇವೆ. ಅದರಲ್ಲೂ ಗೂಗಲ್​ ಮ್ಯಾಪ್ ಹೆಚ್ಚಾಗಿ ಬಳಕೆ ಮಾಡುತ್ತೇವೆ. ಆದರೆ, ಗೂಗಲ್​ ಮ್ಯಾಪ್​ ಬಳಸುವಾಗ ಸ್ವಲ್ಪ ಎಚ್ಚರ ತಪ್ಪಿದರೆ ಏನಾಗಬಹುದು ಎಂಬುದಕ್ಕೆ ಕೇರಳದಲ್ಲಿ ನಡೆದ ಈ ಒಂದು ಘಟನೆ ತಾಜಾ ಉದಾಹರಣೆ ಆಗಿದೆ.

           ಟ್ರೈಲರ್​ ಲಾರಿ ಉರುಳಿಬಿದ್ದ ಪರಿಣಾಮ ಹಿಂದೆ ಬರುತ್ತಿದ್ದ ಮತ್ತೊಂದು ಲಾರಿ ಸಿಲುಕಿ ಭಾರೀ ಪ್ರಮಾಣದಲ್ಲಿ ಟ್ರಾಫಿಕ್​ ಜಾಮ್​ ಉಂಟಾದ ಘಟನೆ ಕೇರಳದ ಅಟ್ಟಪ್ಪಾಡಿ ಘಾಟ್​ನಲ್ಲಿ ನಡೆದಿದೆ. ಸುಮಾರು 12 ಗಂಟೆಗಳ ಕಾಲ ಟ್ರಾಫಿಕ್​ ಬಿಸಿ ಸವಾರರಿಗೆ ತಟ್ಟಿದೆ. ಬುಧವಾರ ಮಧ್ಯರಾತ್ರಿ 12 ಗಂಟೆಗೆ ಲಾರಿಗಳು ಅಟ್ಟಪ್ಪಾಡಿ ಘಾಟ್​ನಲ್ಲಿ ಸಿಲುಕಿದವು. ಸಮೀಪದ ಮನ್ನಾರ್​ಕ್ಕಾಡ್​ನಿಂದ ಕ್ರೇನ್​ ತರಿಸಿ ಲಾರಿಗಳನ್ನು ತೆರವುಗೊಳಿಸಿ ಮತ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

            ಇಷ್ಟೆಲ್ಲ ಅವಾಂತರಕ್ಕೆ ಕಾರಣ ಗೂಗಲ್​ ಮ್ಯಾಪ್​ ಎಂಬುದು ಕುತೂಹಲಕಾರಿ ಸಂಗತಿ. ಅಂದಹಾಗೆ ಲಾರಿಗಳು ಎಲೆಕ್ಟ್ರಿಕ್​ ಮೋಟರ್ಸ್​ಗೆ ಬಳಸುವ ಕಾಯಿಲ್​ಗಳನ್ನು ತುಂಬಿದ್ದ ಲಾರಿಗಳು ಮಂಗಳೂರಿನಿಂದ ತಮಿಳುನಾಡಿನ ಈರೋಡ್​ಗೆ ತೆರಳುತ್ತಿದ್ದವು. ಚಾಲಕರಿಗೆ ದಾರಿ ಹೊಸದಾದ್ದರಿಂದ ಗೂಗಲ್​ ಮ್ಯಾಪ್​ ಮೊರೆ ಹೋಗಿದ್ದಾರೆ. ವಾಸ್ತವವಾಗಿ ಲಾರಿಗಳು ಪಲಕ್ಕಾಡ್​-ವಾಲಾಯಾರ್​ ನಡುವಿನ ಮಾರ್ಗದಲ್ಲಿ ಚಲಿಸಬೇಕಾಗಿತ್ತು. ಆದರೆ, ಗೂಗಲ್​ ಮ್ಯಾಪ್​ ಅವರನ್ನು ನೆಲ್ಲಿಪುಳಾ ಕಡೆಗೆ ಕರೆದೊಯ್ದಿದೆ. ಕೊನೆಗೆ ಅಟ್ಟಪ್ಪಾಡಿ ಘಾಟ್​ ದಾರಿ ಹಿಡಿದ ಲಾರಿ ಚಾಲಕರಿಗೆ ಬಿಗ್​ ಶಾಕ್​ ಕಾದಿತ್ತು.

ಆನಾಮೂಲಿ ಚೆಕ್​ಪೋಸ್ಟ್​ ದಾಟಿ ಘಾಟ್​ ರಸ್ತೆ ಪ್ರವೇಶಿಸಿದ ಲಾರಿಗಳು ಮಾರ್ಗಮಧ್ಯೆಯೇ ಸಿಲುಕಿವೆ. ಈ ಬಗ್ಗೆ ಮಾತನಾಡಿರುವ ಮಣ್ಣರಕ್ಕಾಡ್ ಡಿಎಫ್‌ಒ ಸುರ್ಜಿತ್, ಘಾಟ್ ರಸ್ತೆಯ ಮೂಲಕ ಯಾವ ರೀತಿಯ ವಾಹನಗಳಿಗೆ ಅನುಮತಿ ನೀಡಬೇಕು ಎಂಬುದರ ಕುರಿತು ಅರಣ್ಯ ಇಲಾಖೆಗೆ ಯಾವುದೇ ಮಾರ್ಗಸೂಚಿ ಬಂದಿಲ್ಲ ಎಂದು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries