ಬದಿಯಡ್ಕ: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬದಿಯಡ್ಕ ಘಟಕದ ಮಹಾಸಭೆ ನೀರ್ಚಾಲು ವರ್ಣ ಸ್ಟುಡಿಯೋದಲ್ಲಿ ಜರಗಿತು. ಕುಂಬಳೆ ವಲಯ ಅಧ್ಯಕ್ಷ ವೇಣು ಉದ್ಘಾಟಿಸಿದರು. ಬದಿಯಡ್ಕ ಘಟಕದ ಅಧ್ಯಕ್ಷ ಉದಯ ಕಂಬಾರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜೊತೆಕಾರ್ಯದರ್ಶಿ ಸುನಿಲ್, ಕುಂಬಳೆ ವಲಯ ಕಾರ್ಯದರ್ಶಿ ರಾಮಚಂದ್ರ ಕುಂಬಳೆ, ಕೋಶಾಧಿಕಾರಿ ವಿಜಯನ್, ಜಿಲ್ಲಾ ಸಮಿತಿಯ ಸುದರ್ಶನ್ ಶುಭಾಶಂಸನೆಗೈದರು. ಇದೇ ಸಂದರ್ಭದಲ್ಲಿ ನೂತನ ಸಮಿತಿಯನ್ನು ರೂಪೀಕರಿಸಲಾಯಿತು.
ಅಧ್ಯಕ್ಷರಾಗಿ ಅಪ್ಪಣ್ಣ ಸೀತಾಂಗೋಳಿ, ಕಾರ್ಯದರ್ಶಿಯಾಗಿ ಶ್ಯಾಮಪ್ರಸಾದ ಸರಳಿ, ಕೋಶಾಧಿಕಾರಿಯಾಗಿ ಬಾಲಕೃಷ್ಣ ನಿಡುಗಳ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಮುರಳೀಧರ ತಲ್ಪಣಾಜೆ, ಜೊತೆಕಾರ್ಯದರ್ಶಿಯಾಗಿ ದೇವಾನಂದ ಆಚಾರ್ಯ ಸೀತಾಂಗೋಳಿ, ವಲಯ ಸಮಿತಿಗೆ ವೇಣುಗೋಪಾಲ ಆರೋಳಿ ಹಾಗೂ ಉದಯ ಕುಮಾರ್ ಮೈಕುರಿ, ಪದಾಧಿಕಾರಿಗಳಾಗಿ ಉದಯ ಕಂಬಾರು, ನಾರಾಯಣ ಓಡಂಗಲ್ಲು, ಗೋಪಾಲಕೃಷ್ಣ ಎ. ಆಯ್ಕೆಯಾದರು.