ಕುಂಬಳೆ: ಕುಂಬಳೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲೊಂದಾದ ಮಹಾತ್ಮಾ ಕಾಲೇಜಿನಲ್ಲಿ ಪದವಿ ಮತ್ತು ಪ್ಲಸ್ ಟು ಕೋರ್ಸ್‍ಗಳ ಜೊತೆಗೆ ವೃತ್ತಿಪರ ಆಡ್-ಆನ್ ಕೋರ್ಸ್‍ಗಳನ್ನು ಸಹ ನೀಡಲಾಗುತ್ತಿದೆ ಎಂದು ಸಂಬಂಧಪಟ್ಟವರು ಶುಕ್ರವಾರ ಪ್ರೆಸ್ ಪೋರಂ ನಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಳೆದ ಇಪ್ಪತ್ತೇಳು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆಯನ್ನು ಮಾಡುತ್ತಿರುವ ಮಹಾತ್ಮ ಕಾಲೇಜು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಸ ಪಠ್ಯಕ್ರಮಕ್ಕೆ ಅನುಗುಣವಾಗಿ ನವೀನ ತರಗತಿಗಳನ್ನು ಪರಿಚಯಿಸುತ್ತಿದೆ. ಪ್ಲಸ್ ಟು, ಪದವಿ ತರಗತಿಗಳಿಗೆ ಡಾಟಾ ಸೈನ್ಸ್, ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‍ಮೆಂಟ್ ಮತ್ತು ಇಸ್ಲಾಮಿಕ್ ಬ್ಯಾಂಕಿಂಗ್, ಪತ್ರಿಕೋದ್ಯಮ ಸಹಿತ ಹಲವು ಹೊಸ ಪೀಳಿಗೆಯ ವಿಶ್ವವಿದ್ಯಾಲಯದ ಕೋರ್ಸ್‍ಗಳನ್ನು ಆರಂಭಿಸಲಿದೆ. ಇದು ದೇಶ-ವಿದೇಶಗಳಲ್ಲಿ ಸುಲಭವಾಗಿ ಉದ್ಯೋಗವನ್ನು ಒದಗಿಸುತ್ತದೆ. ಮಹಾತ್ಮ ಕಾಲೇಜು ಈ ಕೋರ್ಸ್‍ಗಳಿಗೆ ಅತ್ಯಲ್ಪ ಶುಲ್ಕವನ್ನು ವಿಧಿಸುತ್ತದೆ. ಪದವಿ ಮಟ್ಟದಲ್ಲಿ, ಬಿ.ಕಾಂ, ಬಿಬಿಎ, ಬಿಎ ಇಂಗ್ಲಿಷ್, ಇತಿಹಾಸ ಮತ್ತು ಅರ್ಥಶಾಸ್ತ್ರ ಕೋರ್ಸ್‍ಗಳು ಹಾಗೂ ಹೈಯರ್ ಸೆಕೆಮಡರಿಯಲ್ಲಿ ವಾಣಿಜ್ಯ ಮತ್ತು ಮಾನವಿಕ ಕೋರ್ಸ್‍ಗಳನ್ನು ಒದಗಿಸುತ್ತದೆ. ಹಲವು ವರ್ಷಗಳಿಂದ ಪ್ಲಸ್ ಟು ಪದವಿ ಪರೀಕ್ಷೆಗಳಲ್ಲಿ 80 ಶೇ. ಕ್ಕಿಂತ ಹೆಚ್ಚು ಫಲಿತಾಂಶಗಳನ್ನು ಗಳಿಸಿರುವ ಮಹಾತ್ಮ ಕಾಲೇಜಿಗೆ ಐ ಎಸ್ ಓ 2009-2015 ಶ್ರೇಷ್ಠತೆಯ ಪ್ರಮಾಣಪತ್ರವನ್ನೂ ನೀಡಲಾಗಿದೆ ಎಂದು ಪ್ರಾಂಶುಪಾಲ ಕೆಎಂಎ ಸತ್ತಾರ್ ಹಾಗೂ ಸಹ ಪ್ರಾಂಶುಪಾಲ ಅಬ್ದುಲ್ ಲತೀಫ್ ಉಳುವಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿರುವರು.