ಉಪ್ಪಳ: ದ್ವೇಷದ ಪ್ರಚಾರದ ಮೂಲಕ ವಿಭಜಿಸಲು ಪ್ರಯತ್ನಿಸುತ್ತಿರುವವರನ್ನು ಮತ್ತು ಕೋಮುವಾದದ ಮೂಲಕ ಮತಗಳನ್ನು ಪಡೆಯಲು ಪ್ರಯತ್ನಿಸುತ್ತಿರುವ ಕೇರಳದ ಎಡ ಸರ್ಕಾರದ ತಂತ್ರಗಳನ್ನು ಕೇರಳದ ಜನರು ಗುರುತಿಸುತ್ತಾರೆ ಎಂದು ವೆಲ್ಫೇರ್ ಪಾರ್ಟಿ ರಾಜ್ಯ ಸಮಿತಿ ಸದಸ್ಯೆ ಪ್ರೇಮಾ ಜಿ ಪಿಶಾರಡಿ ಹೇಳಿದರು.
ವೆಲ್ಫೇರ್ ಪಾರ್ಟಿಯ ರಾಜ್ಯವ್ಯಾಪಿ ಅಭಿಯಾನ 'ದ್ವೇಷ ಪ್ರತಿಪಾದಕರನ್ನು ತಿರಸ್ಕರಿಸಿ ಮತ್ತು ವಿಭಜಿಸುವ ರಾಜಕೀಯವನ್ನು ವಿರೋಧಿಸಿ' ಅಭಿಯಾನವನ್ನು ಗುರುವಾರ ಉಪ್ಪಳದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವೆಲ್ಫೇರ್ ಪಾರ್ಟಿ ಮಂಜೇಶ್ವರ ಕ್ಷೇತ್ರದ ಅಧ್ಯಕ್ಷ ಅಬ್ದುಲ್ಲ ಲತೀಫ್ ಕುಂಬಳೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಸಿಎಚ್ ಮುತ್ತಲಿಬ್,
ಜಿಲ್ಲಾ ಅಧ್ಯಕ್ಷ ಮೊಹಮ್ಮದ್ ವಡಕ್ಕಕ್ಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಜೀದ್ ನರಿಕೋಡನ್, ಜಿಲ್ಲಾ ಖಜಾಂಚಿ ಅಂಬುಂಞÂ್ಞ ತಲಕ್ಲಾಯಿ, ದಕ್ಷಿಣ ಕನ್ನಡ ಪಿಆರ್ ಕಾರ್ಯದರ್ಶಿ ಅಬ್ದುಲ್ ಖಾದರ್ ಕುಕ್ಕಾಜೆ, ಜಿಲ್ಲಾ ಕಾರ್ಯದರ್ಶಿ ಸಹಿದಾ ಇಲ್ಯಾಸ್, ಜಿಲ್ಲಾ ಸಮಿತಿ ಸದಸ್ಯ ಕೆ ರಾಮಕೃಷ್ಣನ್, ಮೊಯ್ದೀನ್ ಕುಂಞÂ್ಞ ಕುಂಜತ್ತೂರು, ಹಕೀಂ ಮಂಜೇಶ್ವರ ಮತ್ತು ಹಸೈನಾರ್ ಉಪ್ಪಳ ಮಾತನಾಡಿದರು. ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಹಮೀದ್ ಅಂಬಾರ್ ಸ್ವಾಗತಿಸಿ,ಮಂಡಲ ಕನ್ವೀನರ್ ಅಸ್ಲಂ ಸೂರಂಬೈಲು ವಂದಿಸಿದರು.