ನವದೆಹಲಿ: ಭಾರತದಲ್ಲಿ ವಿದ್ಯುತ್ ಅಭಾವವು ದೊಡ್ಡ ಸಂಚಲನ ಮೂಡಿಸುವ ಮುನ್ಸೂಚನೆಯನ್ನು ದೈತ್ಯ ಐಟಿ ಕಂಪನಿಗಳಾದ ಟಿಸಿಎಸ್ ಹಾಗೂ ಇನ್ಫೋಸಿಸ್ ನೀಡಿವೆ.
ಭಾರತದಲ್ಲಿ ವಿದ್ಯುತ್ ಅಭಾವವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ತನ್ನ ಉದ್ಯೋಗಿಗಳಿಗೆ ಪವರ್ ಬ್ಯಾಕ್‌ಅಪ್ ವ್ಯವಸ್ಥೆ ಮಾಡಿಕೊಳ್ಳುವಂತೆ ಇ-ಮೇಲ್‌ನಲ್ಲಿ ಸೂಚನೆ ನೀಡಿವೆ. ದೇಶದಲ್ಲಿ ಕಳೆದ ಒಂದು ವಾರದಿಂದ ವಿದ್ಯುತ್ ಅಭಾವ ಸೃಷ್ಟಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಅದರಲ್ಲೂ ವಿಶೇಷವಾಗಿ ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ ಸೇರಿ ಕೆಲ ರಾಜ್ಯಗಳಲ್ಲಿ ಈಗಾಗಲೇ ಪವರ್ ಕಟ್ ಆರಂಭವಾಗಿದೆ. ಕರ್ನಾಟಕದಲ್ಲಿ ಈ ಸಮಸ್ಯೆ ಆರಂಭವಾಗಿದ್ದು, ನಗರ ಪ್ರದೇಶದಲ್ಲಿ ಆ ದೊಡ್ಡ ಪ್ರಮಾಣದ ಪವರ್ ಕಟ್ ಇನ್ನೂ ಆರಂಭವಾಗಿಲ್ಲ.
ಹೀಗಾಗಿ ಈ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಉದ್ಯೋಗಿಗಳು ಮನೆಯಲ್ಲಿ ಪವರ್ ಬ್ಯಾಕ್‌ಅಪ್‌ಗೆ ಸಂಪರ್ಕಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮುತುವರ್ಜಿಯನ್ನು ವಹಿಸಲು ಸೂಚಿಸಲಾಗಿದೆ. ಭಾರತ ಸೇರಿ ವಿಶ್ವದಾದ್ಯಂತ ಐಟಿ ಕಂಪನಿಗಳ ಶೇ.90ಕ್ಕೂ ಹೆಚ್ಚಿನ ಉದ್ಯೋಗಿಗಳು ವರ್ಕ್ ಫ್ರಂ ಹೋಂ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಹೀಗಾಗಿ ಟಿಸಿಎಸ್ ಹಾಗೂ ಇನ್ಫೋಸಿಸ್ ಕಂಪನಿಯ ಆಡಳಿತ ಮಂಡಳಿಯು ತನ್ನ ಹಿರಿಯ ಅಧಿಕಾರಿಗಳಿಗೆ ಇ-ಮೇಲ್ ಕಳುಹಿಸಿದ್ದು, ಎಲ್ಲಾ ಸಿಬ್ಬಂದಿಯು ಮುಂದಿನ ತುರ್ತು ಪರಿಸ್ಥಿತಿಯನ್ನು ಎದುರಿಸಲು ಮನೆಯಲ್ಲಿ ಪವರ್ ಬ್ಯಾಕ್‌ಅಪ್ ವ್ಯವಸ್ಥೆಯನ್ನು ಅಳವಡಿಸುವಂತೆ ಸೂಚಿಸಿ ಎಂದು ಕಟ್ಟು ನಿಟ್ಟಾಗಿ ಆದೇಶಿಸಲಾಗಿದೆ.
ಹೀಗಾಗಿ ಐಟಿ ದೈತ್ಯ ಕಂಪನಿಗಳಿಗೆ ಕೇಂದ್ರದಿಂದ ಮುನ್ಸೂಚನೆ ಬಂದಿದೆಯೇ ಅಥವಾ ಚೀನಾ ಹಾಗೂ ಯುರೋಪಿಯನ್ ದೇಶಗಳಲ್ಲಿ ಏರ್ಪಟ್ಟ ಪರಿಸ್ಥಿತಿಯನ್ನು ಆಧರಿಸಿ ಈ ರೀತಿ ಸಂದೇಶವನ್ನು ಕಳುಹಿಸಲಾಗಿದೆಯೇ ಎಂಬುದು ಇನ್ನೂ ತಿಳಿಯಬೇಕಿದೆ.
ಥರ್ಮಲ್ ಪವರ್ ಪ್ಲಾಂಟ್‌ಗಳಿಗೆ ಕಲ್ಲಿದ್ದಲು ಪೂರೈಕೆಯು ನಿನ್ನೆಗೆ ಒಟ್ಟು 2 ಮಿಲಿಯನ್ ಟನ್ ದಾಟಿದ್ದು ಒಣ ಇಂಧನವನ್ನು ಸ್ಥಾವರಗಳಿಗೆ ರವಾನಿಸಲಾಗುತ್ತಿದೆ ಎಂದು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಇತ್ತೀಚೆಗೆ ಹೇಳಿದ್ದರು.
ವಿವಿಧ ವಿದ್ಯುತ್ ಸ್ಥಾವರಗಳು ಇಂಧನ ಕೊರತೆಯನ್ನು ಎದುರಿಸುತ್ತಿವೆ. ಹೀಗಾಗಿ ಇಂಧನ ಪೂರೈಕೆಯನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. @CoalIndiaHQ ಸೇರಿದಂತೆ ಎಲ್ಲಾ ಮೂಲಗಳಿಂದ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಸಂಚಿತ ಕಲ್ಲಿದ್ದಲು ಪೂರೈಕೆಗಳನ್ನು ಹಂಚಿಕೊಳ್ಳಲು ಸಂತೋಷವಾಗಿದೆ.
ದಾಖಲೆಯ 2 ದಶಲಕ್ಷ ಟನ್‌ಗಳಿಗಿಂತ ಹೆಚ್ಚು ಕಲ್ಲಿದ್ದನ್ನು ಪೂರೈಸಲಾಗಿದೆ. ವಿದ್ಯುತ್ ಸ್ಥಾವರಗಳಲ್ಲಿ ಸಾಕಷ್ಟು ಕಲ್ಲಿದ್ದಲು ಸಂಗ್ರಹವನ್ನು ಖಚಿತಪಡಿಸಿಕೊಳ್ಳಲು ನಾವು ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ರವಾನೆಯನ್ನು ಹೆಚ್ಚಿಸುತ್ತಿದ್ದೇವೆ ಎಂದು ಜೋಶಿ ಟ್ವೀಟ್ ಮಾಡಿದ್ದಾರೆ.
ಕೋಲ್ ಇಂಡಿಯಾ ಅಧಿಕಾರಿಯ ಪ್ರಕಾರ, ವಿದ್ಯುತ್ ಕೇಂದ್ರಗಳಿಗೆ ಸರಬರಾಜು ಈಗಾಗಲೇ ಕಳೆದ ಎರಡು ದಿನಗಳಲ್ಲಿ ದಿನಕ್ಕೆ 1.62 ಮಿಲಿಯನ್ ಟನ್ ಮುಟ್ಟಿದೆ. ಇದೀಗ ದಿನಕ್ಕೆ 1.88 ಮಿಲಿಯನ್ ಟನ್‌ಗೆ ಹೆಚ್ಚಾಗಿದೆ. ತಿಂಗಳ ಸರಾಸರಿ 1.75 ಮಿಲಿಯನ್ ಟನ್‌ಗೆ ಹೋಲಿಸಿದರೆ.
ಕಳೆದ ಎರಡು ದಿನಗಳಲ್ಲಿ ಕಂಪನಿಯು ತನ್ನ ಉತ್ಪಾದನೆಯನ್ನು ದಿನಕ್ಕೆ 1.6 ಮಿಲಿಯನ್ ಟನ್‌ಗೆ ಹೆಚ್ಚಿಸಿದೆ ಮತ್ತು ದಸರಾ ನಂತರ ಕಾರ್ಮಿಕರು ರಜಾದಿನಗಳಿಂದ ಹಿಂದಿರುಗಿದಾಗ ಮತ್ತು ಹಾಜರಾತಿ ಹೆಚ್ಚಾದಾಗ ಸಿಐಎಲ್ ಉತ್ಪಾದನೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
'
ಈಗಿನಂತೆ... ಕೋಲ್ ಇಂಡಿಯಾದಲ್ಲಿ, ನಾವು ಸುಮಾರು 22 ದಿನಗಳ ದಾಸ್ತಾನು ಹೊಂದಿದ್ದೇವೆ. ನಿಮಗೆಲ್ಲರಿಗೂ ತಿಳಿದಿರುವಂತೆ ಈಗ ಮುಂಗಾರು ಕಡಿಮೆಯಾಗುತ್ತಿದೆ. ನಮ್ಮ ಪೂರೈಕೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಅವರು ಹೇಳಿದ್ದರು.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ರಾಜ್ಯಗಳ ಉಷ್ಣ ವಿದ್ಯತ್ ಸ್ಥಾವರಗಳಿಗೆ ಕಳೆದೆರಡು ದಿನಗಳಿಂದ 16.2 ಲಕ್ಷ ಟನ್‌ನಷ್ಟುಕಲ್ಲಿದ್ದಲು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಿತ್ಯ ಸರಾಸರಿ 18.8 ಲಕ್ಷ ಟನ್‌ನಷ್ಟುಕಲ್ಲಿದ್ದಲು ಪೂರೈಸಲಾಗುತ್ತದೆ. ಇದು ಮಾಸಿಕ ಸರಾಸರಿ 17.5 ಲಕ್ಷ ಟನ್‌ಗಳಿಗಿಂತಲೂ ಹೆಚ್ಚು ಎಂದರು. ಅಲ್ಲದೆ ದಸರಾ ಬಳಿಕ ಹಲವು ಕಾರ್ಮಿಕರು ಕೆಲಸಕ್ಕೆ ಮರಳಲಿದ್ದು, ಕಲ್ಲಿದ್ದಲು ಉತ್ಪಾದನೆ ಮತ್ತಷ್ಟುಹೆಚ್ಚಲಿದೆ ಎಂದು ಹೇಳಿದರು.
ಕೋಲ್ ಇಂಡಿಯಾ ದೇಶೀಯ ಕಲ್ಲಿದ್ದಲು ಉತ್ಪಾದನೆಯಲ್ಲಿ ಶೇಕಡಾ 80ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ.