ಲಕ್ನೋ: ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ಕ್ಷೇತ್ರದ (Shri Ram Janmabhoomi Teerth Kshetra) ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ (Mahant Nitya Gopal Da) (83) ಆರೋಗ್ಯ ಮತ್ತಷ್ಟು ಬಿಗಡಾಯಿಸುತ್ತಿದೆ. ಭಾನುವಾರ ಬೆಳಗಿನ ಜಾವ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆ ಲಕ್ನೋ ನಗರದ ಮೇದಾಂತಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಮಹಂತ್ ಅವರಿಗೆ ಶ್ವಾಸಕೋಶ ಮತ್ತು ಯೂರಿನ್ ಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದು, ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ. ಮಹಂತ್ ಅವರಿಗೆ ಉಸಿರಾಟಕ್ಕಾಗಿ ಕೃತಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮೇದಾಂತ್ ಆಸ್ಪತ್ರೆಯ ವೈದ್ಯರ ತಂಡ ಮಾಹಿತಿ ನೀಡಿದೆ. ಡಾ.ರಾಕೇಶ್ ಕಪೂರ್ ಅವರ ನಿಗಾರಣೆಯಲ್ಲಿ ಮಹಂತ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮಹಂತ್ ಅವರನ್ನ ಆಕ್ಸಿಜನ್ ಸಪೋರ್ಟ್ ಮೇಲೆ ಇರಿಸಲಾಗಿದೆ. ಈ ನಡುವೆ ಮುಖ್ಯಮಂತ್ರಿಗಳ ಕಾರ್ಯಲಯ ಸಹ ನಿರಂತರವಾಗಿ ಆರೋಗ್ಯದ ಮಾಹಿತಿಯನ್ನು ಪಡೆದುಕೊಳ್ಳುತ್ತಿದೆ. ಈ ಮೊದಲು ಡಾ.ರಾಕೇಶ್ ಕಪೂರ್ ಅಯೋಧ್ಯೆ(Ayodhya)ಗೆ ತೆರಳಿ ಮಹಂತ್ ಅವರಿಗೆ ಚಿಕಿತ್ಸೆ ನೀಡುವ ಬಗ್ಗೆ ಹೇಳಿದ್ದರು. ಆದ್ರೆ ರಾತ್ರಿ ಆರೋಗ್ಯ ಕ್ಷೀಣವಾಗಿದ್ದ ಹಿನ್ನೆಲೆ ಆಸ್ಪತ್ರೆ ಕರೆತರಲಾಗಿದೆ. ಆಸ್ಪತ್ರೆಗೆ ರಾಜಕಾರಣಿಗಳು, ವಿವಿಧ ಮಠಾಧೀಶರು ಭೇಟಿ ಮಹಂತ್ ಅವರ ಆರೋಗ್ಯದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ರಾತ್ರಿ ಆಕ್ಸಿಜನಲ್ ಲೆವಲ್ 83ಕ್ಕೆ ಇಳಿದಿತ್ತು"
ಗುರುಗಳ ಆಕ್ಸಿಜನ್ ಲೆವಲ್ 83ಕ್ಕೆ ಇಳಿದಿತ್ತು. ಕೆಮ್ಮು ಮತ್ತು ಯೂರಿನ್ ಡಿಸ್ಚಾರ್ಜ್ ಹೆಚ್ಚಾಗಿತ್ತು. ಜೊತೆಗೆ ಅವರ ದೇಹ ನಿರಂತರವಾಗಿ ಕಂಪಿಸುತ್ತಿತ್ತು. ರಾತ್ರಿ ವೈದ್ಯರ ತಂಡ ಅವರನ್ನ ಪರೀಕ್ಷಿಸಿ ಕೆಲ¸ ಔಷಧಿ ಸಹ ನೀಡಿದ್ದರು. ಔಷಧಿ ಸೇವಿಸಿದ ನಂತರ ಗುರುಗಳಿಗೆ ಚೆನ್ನಾಗಿದ್ದರು. ಆದ್ರೆ ದಿಢೀರ್ ಅಂತ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಲಾರಂಭಿಸಿತು. ಸದ್ಯ ಗುರುಗಳು ಆಕ್ಸಿಜನ್ ಸಪೋರ್ಟ್ ಮೇಲಿದ್ದು, ಬೈಪಾಸ್ ಮೂಲಕ ಯೂರಿನ್ ಪಾಸ್ ಮಾಡಿಸಲಾಗುತ್ತಿದೆ ಎಂದು ಮಹಂತ್ ನೃತ್ಯ ಗೋಪಾಲ ದಾಸ್ ಅವರ ಉತ್ತರಾಧಿಕಾರಿ ಕಮಲ್ ನಯನ್ ದಾಸ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.