ಪಣಜಿ: ವಿಶೇಷವಾಗಿ ಮದ್ಯಪ್ರಿಯರಲ್ಲಿ ಆಸಕ್ತಿ ಮೂಡಿಸಬಲ್ಲ ಭಾರತದ ಮೊಟ್ಟಮೊದಲ 'ಆಲ್ಕೊಹಾಲ್ ಮ್ಯೂಸಿಯಂ' ಗೋವಾದಲ್ಲಿ ನಿರ್ಮಾಣವಾಗಿದೆ. ಉತ್ತರ ಗೋವಾದ ಕ್ಯಾಂಡೋಲಿಂನಲ್ಲಿ ನಂದನ್ ಕುಡ್ಚಡ್ಕರ್ ಎಂಬ ಸ್ಥಳೀಯ ಬಿಸಿನೆಸ್ಮನ್ ಈ 'ಆಲ್ ಎಬೌಟ್ ಆಲ್ಕೊಹಾಲ್' ಎಂಬ ಮ್ಯೂಸಿಯಂಅನ್ನು ತೆರೆದಿದ್ದಾರೆ.
ಈ ಮ್ಯೂಸಿಯಂನಲ್ಲಿ ಶತಮಾನಗಳ ಹಿಂದಿನ ಆಲ್ಕೊಹಾಲ್ ಬಾಟಲಿಗಳು, ಗ್ಲಾಸ್ಗಳು ಮತ್ತು ಉತ್ಪಾದನಾ ಯಂತ್ರಗಳನ್ನು ಜೋಡಿಸಲಾಗಿದೆ. ಗೋವಾದ ಖ್ಯಾತ ಹಾಗೂ ಪಾರಂಪರಿಕ ಡ್ರಿಂಕ್ ಆದ ಫೇನಿ ಬಗ್ಗೆ ಕೂಡ ಜಗತ್ತಿಗೆ ತಿಳಿಸುವ ಪ್ರಯತ್ನ ಇದಾಗಿದೆ ಎಂದು ಕುಡ್ಚಡ್ಕರ್ ಹೇಳಿದ್ದಾರೆಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.