HEALTH TIPS

ಕೋವಿಡ್‌ ಬೆದರಿಕೆ: ಅಂಡಮಾನ್‌ ಬುಡಕಟ್ಟು ಜನಾಂಗ ಅಳಿವಿನ ಎಚ್ಚರಿಕೆ ನೀಡಿದ ವಿಜ್ಞಾನಿಗಳು

                   ನವದೆಹಲಿ: ಅಂಡಮಾನ್‌ನ ಒಂಗೆ ಮತ್ತು ಜರವಾ ಬುಡಕಟ್ಟು ಜನಾಂಗಗಳು ಈಗ ಅತೀ ಅಧಿಕ ಕೋವಿಡ್‌ ಬೆದರಿಕೆಯನ್ನು ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬುಡಕಟ್ಟು ಜನಾಂಗದ ರಕ್ಷಣೆಗೆ ಅಧಿಕ ಆದ್ಯತೆ ನೀಡುವುದು ಉತ್ತಮ ಎಂದು ಬುಡಕಟ್ಟು ಜನಾಂಗಗಳು ಸಲಹೆ ನೀಡಿದೆ. ನಾವು ಸುರಕ್ಷತಾ ಕ್ರಮವನ್ನು ಈಗಲೇ ಕೈಗೊಳ್ಳದಿದ್ದರೆ ಸಾವಿರಾರು ಈ ಬುಡಕಟ್ಟು ಜನಾಂಗದ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಬಹುದು, ಈ ಸ್ಥಳೀಯ ಬುಡಕಟ್ಟು ಜನಾಂಗ ಸಂಪೂರ್ಣವಾಗಿ ಅಳಿಯಬಹುದು ಎಂದು ಕೂಡಾ ಇತ್ತೀಚಿನ ಸಂಶೋಧನೆಯ ಹೇಳಿದೆ.

              ಕೊರೊನಾ ವೈರಸ್‌ ಸೋಂಕು ವಿಶ್ವದಾದ್ಯಂತ ಹಬ್ಬಿದೆ. ಬ್ರೆಜಿಲ್‌ನಲ್ಲಿರುವ ಸ್ಥಳೀಯ ಗುಂಪುಗಳು ಕೋವಿಡ್‌ ಸೋಂಕಿನಿಂದಾಗಿ ತೀವ್ರವಾಗಿ ಹಾನಿಗೆ ಒಳಗಾಗಿದೆ ಎಂದು ಸಂಶೋಧನೆಯೊಂದು ತಿಳಿಸಿದೆ. ಬ್ರೆಜಿಲ್‌ನಲ್ಲಿ ಈ ಸ್ಥಳೀಯ ಬುಡಕಟ್ಟು ಜನಾಂಗದಲ್ಲಿ ಕೋವಿಡ್‌ ಸಾವು ಪ್ರಮಾಣವು ವಿಶ್ವದಲ್ಲಿನ ಕೋವಿಡ್‌ ಸಾವು ಪ್ರಮಾಣಕ್ಕಿಂತ ದ್ವಿಗುಣವಾಗಿದೆ. ತಮ್ಮನ್ನು ತಾವು ಹೊರ ಪ್ರಪಂಚಕ್ಕೆ ಪರಿಚಯಿಸಿಕೊಳ್ಳದ ಸಾವಿರಾರು ಬುಡಕಟ್ಟು ಕುಟುಂಬಗಳು ಈಗ ಕೋವಿಡ್‌ ಕಾರಣದಿಂದಾಗಿ ಅಳಿವಿನ ಅಂಚಿನಲ್ಲಿ ಇದೆ.

             ಭಾರತವನ್ನು ಬುಡಕಟ್ಟು ಜನಾಂಗಗಳ ತವರೂರು ಎಂದೇ ನಾವು ಕರೆಯಬಹುದು. ಇನ್ನು ಕೇಂದ್ರಾಡಳಿತ ಪ್ರದೇಶ ಅಂಡಮಾನ್‌ ದ್ವೀಪವಾಸಿಗಳು ಅಧಿಕವಾಗಿ ಈ ಬುಡಕಟ್ಟು ಜನಾಂಗಕ್ಕೆ ಸೇರಿದವರು ಆಗಿದ್ದಾರೆ. ಇಲ್ಲಿ ಹಲವಾರು ಸಣ್ಣ ಸಣ್ಣ ಗುಂಪುಗಳು ಇದೆ.

              ಪ್ರಸ್ತುತ ಹೈದರಾಬಾದ್‌ ಸಿಡಿಎಫ್‌ಡಿಯ ನಿರ್ದೇಶಕ, ಸಿಎಸ್‌ಐಆರ್‌-ಸಿಸಿಎಂಬಿಯ ಡಾ. ಕುಮಾರಸ್ವಾಮಿ ತಂಗರಾಜ ಹಾಗೂ ವಾರಣಾಸಿಯ ಬಿಎಚ್‌ಯುನ ಪ್ರೋಫೆಸರ್‌ ಜ್ಞಾನೇಶ್ವರ ಚೌಬೆ, ಹಲವಾರು ಭಾರತೀಯ ಜನಸಂಖ್ಯೆಯ ಜೀನೋಮಿಕ್ ವಿಶ್ಲೇಷಣೆಯನ್ನು ನಡೆಸಿದ್ದಾರೆ. ತಮ್ಮ ಜೀನೋಮ್‌ನಲ್ಲಿ ಒಂದೇ ರೀತಿಯ ಡಿಎನ್‌ಎ ವಿಭಾಗಗಳನ್ನು (ಹೋಮೋಜೈಗಸ್) ಹೊಂದಿರುವ ಜನಸಂಖ್ಯೆಯು ಹೆಚ್ಚಾಗಿ ಕೋವಿಡ್‌ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ಅವರು ಕಂಡು ಕೊಂಡಿದ್ದಾರೆ. ಈ ಸಂಶೋಧನೆಯು ಜೀನ್ ಮತ್ತು ಇಮ್ಯೂನಿಟಿ ಜರ್ನಲ್‌ನ ಆನ್‌ಲೈನ್‌ ಆವೃತ್ತಿಯಲ್ಲಿ ಪ್ರಕಟವಾಗಿದೆ.

               ಅಂಡಮಾನ್ ದ್ವೀಪವಾಸಿಗಳ ಮೂಲವನ್ನು ಪತ್ತೆ ಮಾಡಿರುವ, ಸಿಎಸ್‌ಐಆರ್‌-ಸಿಸಿಎಂಬಿಯ ಡಾ. ಕುಮಾರಸ್ವಾಮಿ ತಂಗರಾಜ ಈ ಬಗ್ಗೆ ಮಾಹಿತಿ ನೀಡಿದ್ದಾರೆ. "227 ಜನಾಂಗಕ್ಕೆ ಸೇರಿದ ಒಟ್ಟು 1600 ಕ್ಕೂ ಅಧಿಕ ಜನರ ಜೀನೋಮಿಕ್‌ ಡೇಟಾದ ಮೇಲೆ ನಾವು ಸಂಶೋಧನೆಯನ್ನು ಮಾಡಿದ್ದೇವೆ. ಒಂಗೆ ಮತ್ತು ಜರವಾ ಜನಾಂಗದಲ್ಲಿ ಹಾಗೂ ಇತರೆ ಬೇರೆ ತೀರಾ ಪ್ರತ್ಯೇಕವಾಗಿ ಇರುವ ಜನಾಂಗದಲ್ಲಿ ನಾವು ಹೋಮೋಜೈಗಸ್ ವಂಶವಾಹಿಗಳ ಹೆಚ್ಚಿನ ಆವರ್ತಗಳನ್ನು ಕಂಡುಕೊಂಡಿದ್ದೇವೆ. ಇದರಿಂದಾಗಿ ಈ ಜನಾಂಗಗಳು ಹೆಚ್ಚಾಗಿ ಕೋವಿಡ್‌ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಇದೆ," ಎಂದು ಡಾ. ಕುಮಾರಸ್ವಾಮಿ ತಂಗರಾಜ ಹೇಳಿದ್ದಾರೆ.

            ಒಂಗೆ ಮತ್ತು ಜರವಾ ಬುಡಕಟ್ಟು ಜನಾಂಗದಲ್ಲಿ ಎಸಿಇ 2 ಜೀನ್ ರೂಪಾಂತರಗಳ ಹೆಚ್ಚಿನ ಆವರ್ತನಗಳು ಇದೆ ಎಂದು ಕೂಡಾ ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಈ ಹಿನ್ನೆಲೆಯಿಂದಾಗಿ ಸುಮಾರು ಸಾವಿರಾರು ವರ್ಷಗಳಿಂದ ಪ್ರತ್ಯೇಕವಾಗಿರುವ ಈ ಬುಡಕಟ್ಟು ಜನಾಂಗಳಾದ ಒಂಗೆ ಮತ್ತು ಜರವಾ ಅಧಿಕವಾಗಿ ಕೊರೊನಾ ವೈರಸ್‌ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ಕೂಡಾ ಸಂಶೋಧಕರು ವಿವರಿಸಿದ್ದಾರೆ.

            "ಈ ಬುಡಕಟ್ಟು ಜನಾಂಗದ ಮೇಲೆ ಕೋವಿಡ್‌ನ ಪರಿಣಾಮದ ಬಗ್ಗೆ ಕೆಲವೊಂದು ಊಹಾಪೋಹಗಳು ಹರಡುತ್ತಿದೆ. ಆದರೆ ಈಗ ನಾವು ಮೊದಲ ಬಾರಿಗೆ ಜೀನೋಮಿಕ್‌ ಡೇಟಾದ ಆಧಾರದಲ್ಲಿ ಬುಡಕಟ್ಟು ಜನಾಂಗದ ಮೇಲೆ ಕೋವಿಡ್‌ ಪರಿಣಾಮದ ಬಗ್ಗೆ ಸಂಶೋಧನೆ ಮಾಡಿದ್ದೇವೆ," ಎಂದು ವಾರಣಾಸಿಯ ಬಿಎಚ್‌ಯುನ ಪ್ರೋಫೆಸರ್‌ ಜ್ಞಾನೇಶ್ವರ ಚೌಬೆ ತಿಳಿಸಿದ್ದಾರೆ.

ಹೈದರಾಬಾದ್‌ನ ಸಿಸಿಎಂಬಿ ನಿರ್ದೇಶಕರು ಡಾ. ವಿನಯ್ ಕುಮಾರ್ ನಂದಿಕೂರಿ, "ಈ ಸಂಶೋಧನೆಯಿಂದ ಬಂದಿರುವ ಫಲಿತಾಂಶವು ನಾವು ಬುಡಕಟ್ಟು ಜನಾಂಗದ ಜನರಲ್ಲಿ ಕೋವಿಡ್‌ ಕಾಣಿಸಿಕೊಳ್ಳುವ ವಿಚಾರದಲ್ಲಿ ತೀರಾ ಎಚ್ಚರಿಕೆಯಿಂದ ಇರಬೇಕು. ಈ ಪ್ರತ್ಯೇಕವಾಗಿ ಜೀವಿಸುವ ಜನಾಂಗದ ಮೇಲೆ ಅಧಿಕ ಕಾಳಜಿಯನ್ನು ನಾವು ವಹಿಸಿಕೊಳ್ಳಬೇಕು. ಈ ಮೂಲಕವಾಗಿ ನಾವು ನಮ್ಮ ದೇಶದಲ್ಲಿ ಇರುವ ಕೆಲವು ಜೀವಂತ ಸಂಪತನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು," ಎಂದು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries